Advertisement

ಐಪಿಎಲ್‌: ಪಂಜಾಬ್‌ ತಂಡದ ಕೋಚ್‌ ಹುದ್ದೆ ನಿರಾಕರಿಸಿದ ಸೆಹ್ವಾಗ್‌?

03:45 AM Jan 02, 2017 | |

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ(ಐಪಿಎಲ್‌) ಫ್ರಾಂಚೈಸಿಯಾದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ನಿರ್ದೇಶಕರಾಗಿ ಮಾಜಿ ಕ್ರಿಕೆಟಿಗ, ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಮುಂದುವರಿಯುವ ಸಾಧ್ಯತೆಯಿದೆ. 

Advertisement

ಸಂಜಯ್‌ ಬಂಗಾರ್‌ ರಾಜೀನಾಮೆಯಿಂದ ತೆರವಾದ ಮುಖ್ಯ ಕೋಚ್‌ ಹುದ್ದೆಯನ್ನು ಹೊತ್ತುಕೊಳ್ಳುತ್ತಾರೆಂದು ಹೇಳಲಾಗಿದ್ದರೂ ಸೆಹ್ವಾಗ್‌ ಈ ಅವಕಾಶವನ್ನು ನಿರಾಕರಿಸಿದ್ದಾರೆನ್ನಲಾಗಿದೆ. ಈ ಹುದ್ದೆಯಲ್ಲಿ ಅವರಿಗೆ ಆಸಕ್ತಿಯಿಲ್ಲ ಎಂದು ಮೂಲಗಳು ತಿಳಿಸಿದೆ. ಆದ್ದರಿಂದ ಪಂಜಾಬ್‌ ತಂಡ ಹೊಸ ಕೋಚ್‌ ಹುಡುಕಾಟದಲ್ಲಿದೆ, ಭಾರತೀಯ ಮೂಲದವರೇ ಆಗಿರಬೇಕೆಂಬ ಷರತ್ತನ್ನೂ ಇಟ್ಟಿದೆ. ಸಂಜಯ್‌ ಬಂಗಾರ್‌ ಸದ್ಯ ಭಾರತೀಯ ಕ್ರಿಕೆಟ್‌ ತಂಡದ ಬ್ಯಾಟಿಂಗ್‌ ಕೋಚ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next