Advertisement

ಐಪಿಎಲ್‌: ರಾಜಸ್ಥಾನ್‌ ಷೇರು ಮಾರಾಟ?

12:30 AM Jan 19, 2019 | Team Udayavani |

ಜೈಪುರ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಖ್ಯಾತ ತಂಡಗಳಲ್ಲಿ ಒಂದಾದ ರಾಜಸ್ಥಾನ್‌ ರಾಯಲ್ಸ್‌ ತಂಡದ ಶೇ. 50ರಷ್ಟು ಷೇರುಗಳನ್ನು ಮಾರಲು ಮಾಲಿಕ ಮನೋಜ್‌ ಬದಲೆ ಸಿದ್ಧವಾಗಿದ್ದಾರೆ. ಇದನ್ನು ಕೊಳ್ಳಲು ಹಲವು ದಿಗ್ಗಜ ಉದ್ಯಮಿಗಳು ಸಿದ್ಧವಾಗಿದ್ದಾರೆ ಎನ್ನಲಾಗಿದೆ. ಇದರಲ್ಲಿ ಸಂಜೀವ್‌ ಗೊಯೆಂಕಾ ಅವರೂ ಒಬ್ಬರು.

Advertisement

ಈ ಹಿಂದೆ 2 ವರ್ಷದ ಮಟ್ಟಿಗೆ ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌ ತಂಡವನ್ನು ಖರೀದಿಸಿದ್ದ ಸಂಜೀವ್‌ ಗೊಯೆಂಕಾ ಪ್ರಸ್ತುತ ಐಪಿಎಲ್‌ನಲ್ಲಿ ಯಾವ ಪಾಲನ್ನೂ ಹೊಂದಿಲ್ಲ. ರಾಜಸ್ಥಾನ್‌ ಷೇರುಗಳನ್ನು ಖರೀದಿಸಿ ಮತ್ತೆ ಐಪಿಎಲ್‌ಗೆ ಹಿಂತಿರುಗುವುದು ಅವರ ಉದ್ದೇಶ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next