Advertisement

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

05:12 PM Nov 22, 2024 | Team Udayavani |

ಮುಂಬೈ:  ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಐಪಿಎಲ್‌ ಮೆಗಾ ಹರಾಜಿಗೆ ಬಿಸಿಸಿಐ ಅಧಿಕಾರಿಗಳು ಸಕಲ ಸಿದ್ದತೆ ನಡೆಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಿಸಿಸಿಐ (BCCI) ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ನ ಮುಂದಿನ ಮೂರು ವರ್ಷಗಳ ವಿಂಡೋ ಪ್ರಕಟಿಸಿದೆ. 2025ರ ಐಪಿಎಲ್‌ ಸೀಸನ್‌ ಮಾರ್ಚ್‌ 14ರಿಂದ ಮೇ 25ರವರೆಗೆ ನಡೆಯಲಿದೆ.

Advertisement

ಇದೇ ವೇಳೆ ವಿದೇಶಿ ಆಟಗಾರರ ಬಗ್ಗೆಯೂ ಬಿಸಿಸಿಐ ಮಾಹಿತಿ ಹಂಚಿಕೊಂಡಿದೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌ ಮತ್ತು ಜಿಂಬಾಬ್ವೆಯ ಆಟಗಾರರು ಮುಂದಿನ ಮೂರು ಸೀಸನ್‌ ನ ಐಪಿಎಲ್‌ ನ ಎಲ್ಲಾ ಪಂದ್ಯಗಳಿಗೆ ಲಭ್ಯರಿರುತ್ತಾರೆ ಎಂದು ಬಿಸಿಸಿಐ ಪ್ರಕಟಿಸಿದೆ. ಅಲ್ಲದೆ ಇಂಗ್ಲೆಂಡ್‌ ನ ಕೇಂದ್ರೀಯ ಗುತ್ತಿಗೆ ಹೊಂದಿರುವ ಎಲ್ಲಾ ಆಟಗಾರರು ಮೂರು ವರ್ಷ ಲಭ್ಯವಾಗಲಿದ್ದಾರೆ.

ಕೆಲವು ಶ್ರೀಲಂಕಾ ಆಟಗಾರರು ಮತ್ತು ಕೆಲವು ಆಸ್ಟ್ರೇಲಿಯನ್ನರ ಲಭ್ಯತೆಯ ಬಗ್ಗೆ ಕೆಲವು ಅನಿಶ್ಚಿತತೆಗಳಿವೆ. ಆಸ್ಟ್ರೇಲಿಯಾ ಆಟಗಾರರು 2027 ರಲ್ಲಿ ಇಂಗ್ಲೆಂಡ್ ವಿರುದ್ಧದ 150 ವರ್ಷಗಳ ಸ್ಮರಣಾರ್ಥ ಟೆಸ್ಟ್‌ನಲ್ಲಿ ಭಾಗವಹಿಸಲಿದ್ದಾರೆ.

ಶಕೀಬ್‌ ಅಲ್‌ ಹಸನ್‌ ಹೊರತುಪಡಿಸಿ ‌ ಬಾಂಗ್ಲಾದೇಶದ ಉಳಿದ ಆಟಗಾರರ ಲಭ್ಯತೆಯ ಬಗ್ಗೆ ಖಚಿತವಾಗಿಲ್ಲ. ಶಕೀಬ್‌ ಅವರು ಮೂರು ಸೀಸನ್‌ ಸಂಪೂರ್ಣ ಲಭ್ಯರಿದ್ದಾರೆ. ಇದರ ಬಗ್ಗೆ ಬಾಂಗ್ಲಾ ಕ್ರಿಕೆಟ್‌ ಮಂಡಳಿ ಬಿಸಿಸಿಐಗೆ ಮಾಹಿತಿ ನೀಡಿದೆ.

Advertisement

ಶುಕ್ರವಾರ (ನ.22) ಬಿಸಿಸಿಐ ಫ್ರಾಂಚೈಸಿಗಳೊಂದಿಗೆ ಹಂಚಿಕೊಂಡಿರುವ ವಿದೇಶಿ ಆಟಗಾರರ ಲಭ್ಯತೆಯ ಪಟ್ಟಿಯ ಪ್ರಮುಖ ಪ್ರಮುಖ ಅಂಶವೆಂದರೆ ಹ್ಯಾರಿ ಬ್ರೂಕ್ ಸೇರಿದಂತೆ ಎಲ್ಲಾ ಕೇಂದ್ರೀಯ ಒಪ್ಪಂದದ ಇಂಗ್ಲೆಂಡ್ ಆಟಗಾರರನ್ನು ಸೇರಿಸಿರುವುದು. ಬ್ರೂಕ್ ಜೊತೆಗೆ ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾನಿ ಬೇರಿಸ್ಟೋವ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಝಾಕ್ ಕ್ರಾಲಿ, ಸ್ಯಾಮ್ ಕರ್ರನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಫಿಲ್‌ ಸಾಲ್ಟ್‌, ಆಲಿ ಸ್ಟೋನ್ ಮತ್ತು ರೀಸ್ ಟಾಪ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಬಿಸಿಸಿಐ ಗೆ ದೃಢಪಡಿಸಿದಂತೆ ಸೈಕಲ್‌ ನ ಉದ್ದಕ್ಕೂ ಎಲ್ಲಾ ಪಂದ್ಯಗಳಿಗೆ ಲಭ್ಯವಿದ್ದಾರೆ.

ಶ್ರೀಲಂಕಾ ಕ್ರಿಕೆಟ್ 2026 ಮತ್ತು 2027 ರ ಸೀಸನ್‌ಗಳಿಗೆ ತನ್ನ ಕೆಲವು ಆಟಗಾರರ ಲಭ್ಯತೆಯನ್ನು ನಂತರ ದೃಢೀಕರಿಸಲಾಗುವುದು ಎಂದು ಹೇಳಿದೆ. “ಐಪಿಎಲ್ 2025 ಗಾಗಿ ಶ್ರೀಲಂಕಾದ ಆಟಗಾರರು ಸಂಪೂರ್ಣ ಲಭ್ಯರಿದ್ದಾರೆ. ಐಪಿಎಲ್ 2026 ಮತ್ತು ಐಪಿಎಲ್‌ 2027 ಗಾಗಿ ಉಳಿಸಿಕೊಂಡಿರುವ ಆಟಗಾರರು ಸಂಪೂರ್ಣ ಲಭ್ಯತೆಯನ್ನು ಹೊಂದಿರುತ್ತಾರೆ, ಆದರೆ ಐಪಿಎಲ್ 2026 ಮತ್ತು ಐಪಿಎಲ್‌ 2027 ರ ಮೊದಲು ಬಿಡುಗಡೆಯಾದ ಆಟಗಾರರ ಲಭ್ಯತೆಯನ್ನು ಹರಾಜಿನ ಮೊದಲು ತಿಳಿಸಲಾಗುತ್ತದೆ” ಎಂದು ಲಂಕಾ ಮಂಡಳಿ ತಿಳಿಸಿದೆ.

ಐಪಿಎಲ್‌ಗಾಗಿ ತನ್ನ ಆಟಗಾರರನ್ನು ದೇಶೀಯ ಕರ್ತವ್ಯಗಳಿಂದ ಬಿಡುಗಡೆ ಮಾಡಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ (CA) ಹೇಳಿದೆ. ಆದಾಗ್ಯೂ, ಕೆಲವು ಆಟಗಾರರನ್ನು ಕೆಲವು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಉಳಿಸಿಕೊಳ್ಳಬಹುದು. ಮಾರ್ಚ್ 2027 ರಲ್ಲಿ MCG ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ 150 ವರ್ಷಗಳ ಸ್ಮರಣಾರ್ಥ ಏಕೈಕ ಟೆಸ್ಟ್‌ ಬಗ್ಗೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next