Advertisement

ಐಪಿಎಲ್ ನಲ್ಲಿ ಬೆಳಕಿಗೆ ಬಂದ ಹೊಸ ಪ್ರತಿಭೆ: ವೆಂಕಟೇಶ್ ಅಯ್ಯರ್ ಎಂಬ ಅಚ್ಚರಿ

09:25 AM Sep 25, 2021 | Team Udayavani |

ನವದೆಹಲಿ: ಐಷಾರಾಮಿ ಟಿ20 ಲೀಗ್‌ ಟೂರ್ನಿಯಾಗಿರುವ ಐಪಿಎಲ್‌ ಅನೇಕ ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದ ಹೆಗ್ಗಳಿಕೆ ಹೊಂದಿದೆ. ಯುಎಇ ಆವೃತ್ತಿಯ ಸೇರ್ಪಡೆ ವೆಂಕಟೇಶ್‌ ಅಯ್ಯರ್‌.

Advertisement

ಕೆಕೆಆರ್‌ನ ಎಡಗೈ ಓಪನರ್‌ ವೆಂಕ ಟೇಶ್‌ ಅಯ್ಯರ್‌ ತಮ್ಮ ಹಾರ್ಡ್‌ ಹಿಟ್ಟಿಂಗ್‌ ಬ್ಯಾಟಿಂಗ್‌ ಮೂಲಕ ಕೇವಲ ಎರಡೇ ಪಂದ್ಯಗಳಲ್ಲಿ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿದ್ದಾರೆ. ಘಟಾನುಘಟಿ ಬೌಲರ್‌ಗಳ ಎಸೆತಗಳನ್ನೂ ನಿರ್ಭೀತಿಯಿಂದ ಬಡಿದಟ್ಟುವ ಮೂಲಕ ಭಾರೀ ಸಂಚಲನ ಮೂಡಿಸುತ್ತಿದ್ದಾರೆ.

“ನನಗೆ ಗಂಗೂಲಿಯೇ ಮಾದರಿ ಆಟಗಾರ. ಅವರು ಮೊದಲ ಸಲ ನಾಯಕನಾದ ತಂಡ ವನ್ನು ಪ್ರತಿನಿಧಿಸುವುದಕ್ಕೆ ಹೆಮ್ಮೆ ಆಗುತ್ತಿದೆ. ಬಲಗೈ ಆಟಗಾರನಾಗಿದ್ದ ನಾನು ಗಂಗೂಲಿಯಿಂದ ಸ್ಫೂರ್ತಿ ಪಡೆದು ಎಡಗೈ ಬ್ಯಾಟ್ಸ್‌ಮನ್‌ ಆದೆ’ ಎಂದು ಹೇಳುವ ಐಯ್ಯರ್‌ಗೆ ಈ ಐಪಿಎಲ್‌ ಕ್ರಿಕೆಟ್‌ ಭವಿಷ್ಯದ ಹೆಬ್ಟಾಗಿಲಾಗಿದೆ.

ನಿರ್ಭೀತ ಬ್ಯಾಟಿಂಗ್‌: ಆರ್‌ಸಿಬಿ ವಿರುದ್ಧ ಐಪಿಎಲ್‌ ಪದಾರ್ಪಣೆ ಮಾಡಿದಾಗ ಯಾರಪ್ಪ ಈ ವೆಂಕಟೇಶ್‌ ಐಯ್ಯರ್‌ ಎಂದು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದು ಸಹಜ. ಕೇವಲ 27 ಎಸೆತಗಳಲ್ಲಿ ಅಜೇಯ 41 ರನ್‌ ಬಾರಿಸಿದಾಗ ಎಲ್ಲರೂ ಇವರನ್ನು ಬೆರಗು ಗಣ್ಣಿನಿಂದ ನೋಡಿದರು. ಬಳಿಕ ಮುಂಬೈ ವಿರುದ್ಧವೂ ಕೇವಲ 30 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 53 ರನ್‌ ಬಾರಿಸಿ ಕೆಕೆಆರ್‌ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.

ಇದನ್ನೂ ಓದಿ:ಬೆತ್‌ ಮೂನಿ ಅಜೇಯ ಸೆಂಚುರಿ; ಆಸ್ಟ್ರೇಲಿಯ ಸರಣಿ ಜಯಭೇರಿ

Advertisement

ವೆಂಕಟೇಶ್‌ ಮಧ್ಯಪ್ರದೇಶ ಮೂಲದ 25 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ಹಾಗೂ ಬೌಲಗೈ ಮಧ್ಯಮ ವೇಗಿ. ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪಂಜಾಬ್‌ ಎದುರು 198 ರನ್‌ ಸಿಡಿಸಿದಾಗ ಇವರ ಹೆಸರು ರಾರಾಜಿಸತೊಡಗಿತು.

ರಜನೀಕಾಂತ್‌ ಅಭಿಮಾನಿ: ಐಯ್ಯರ್‌ ಕ್ರಿಕೆಟಿಗನಾದದ್ದೇ ಆಕಸ್ಮಿಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್‌ ಆಡುತ್ತಿದ್ದರೂ ಇದರಲ್ಲಿಯೇ ಮುಂದುವರಿಯುವ ಕನಸು ಕಂಡಿರಲಿಲ್ಲ. ಬದಲಾಗಿ ಬಿಕಾಂ ಮುಗಿಸಿ ಎಂಬಿಎ ಪದವಿ ಗಳಿಸಿದ್ದಾರೆ. ಇಂದೋರ್‌ ತಮಿಳು ಭಾಷಿಕ ಕುಟುಂಬದಲ್ಲಿ ಜನಿಸಿರುವ ಐಯ್ಯರ್‌ ರಜನೀಕಾಂತ್‌ ಅವರ ಅಪ್ಪಟ ಅಭಿಮಾನಿ. ತನ್ನ ಕ್ರಿಕೆಟ್‌ ಆಲೋಚನೆಗಳನ್ನು ಪ್ರೋತ್ಸಾಹಿಸಿದ್ದು ತಾಯಿ ಎಂದು ವೆಂಕಟೇಶ್‌ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next