ಮುಂಬೈ: ಐಪಿಎಲ್ ನ ಹರಾಜು ಪ್ರಕ್ರಿಯೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಹೇಳಿದರು.
ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಯಕ ರಿಷಬ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ಅನ್ರಿಚ್ ನಾರ್ಜೆ ಅವರನ್ನು ಉಳಿಸಿಕೊಂಡಿತು. ಆದರೆ ಪ್ರಮುಖ ಆಟಗಾರರಾದ ಶ್ರೇಯಸ್ ಅಯ್ಯರ್, ಶಿಖರ್ ಧವನ್ ಮತ್ತು ಆರ್ ಅಶ್ವಿನ್ ರನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ಹರಾಜು ಪ್ರಕ್ರಿಯೆ ಬಗ್ಗೆ ಜಿಂದಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಶ್ರೇಯಸ್ ಅಯ್ಯರ್, ಶಿಖರ್ ಧವನ್, ಕಗಿಸೊ ರಬಾಡ ಮತ್ತು ಆರ್.ಅಶ್ವಿನ್ ಅವರನ್ನು ತಂಡದ ಸೇವೆಯಿಂದ ಕಳೆದುಕೊಂಡಿರುವುದು ಬೇಸರದ ಸಂಗತಿ” ಎಂದು ಜಿಂದಾಲ್ ಮಂಗಳವಾರ ಹೇಳಿದ್ದಾರೆ.
ಇದನ್ನೂ ಓದಿ:ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ
“ಯುವಕರಿಗೆ ಅವಕಾಶ ನೀಡಿ ನೀವು ತಂಡವನ್ನು ಕಟ್ಟುವುದು, ಅವರನ್ನು ಬೆಳೆಸುವುದುದು ಮತ್ತು ಮೂರು ವರ್ಷಗಳ ನಂತರ ನೀವು ಅವರನ್ನು ಕಳೆದುಕೊಳ್ಳುವುದು. ಇದು ನ್ಯಾಯವಲ್ಲ. ಐಪಿಎಲ್ ಅನ್ನು ಮರುಪರಿಶೀಲಿಸುವ ಅಗತ್ಯವಿದೆ” ಎಂದು ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಹೇಳಿದ್ದಾರೆ.