Advertisement

IPL ಹೈದರಾಬಾದ್ ವಿರುದ್ಧ ಮುಂಬೈ ಜಯಭೇರಿ ; ಗ್ರೀನ್ ಭರ್ಜರಿ ಶತಕ

07:31 PM May 21, 2023 | Team Udayavani |

ಮುಂಬೈ: ಪ್ಲೇ ಆಫ್ ತಲುಪಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರದ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ್ದು ಆರ್ ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ಫಲಿತಾಂಶವನ್ನು ಎದುರು ನೋಡುತ್ತಿದೆ. ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಆರ್ ಸಿಬಿಗೆ ನಿರ್ಣಾಯಕವಾಗಿರುವ ಪಂದ್ಯ ವಿಳಂಬವಾಗಿದೆ.

Advertisement

ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೈದರಾಬಾದ್ 5 ವಿಕೆಟ್ ನಷ್ಟಕ್ಕೆ 200 ರನ್ ಕಲೆ ಹಾಕಿತು. ವಿವ್ರಾಂತ್ ಶರ್ಮಾ 69, ಮಯಾಂಕ್ ಅಗರ್ವಾಲ್ 83, ಕ್ಲಾಸೆನ್ 18, ಮಾರ್ಕ್ರಾಮ್ ಔಟಾಗದೆ 13 ರನ್ ಗಳಿಸಿದರು. ಮುಂಬೈ ಪರ ಆಕಾಶ್ ಮಧ್ವಲ್ 4 ವಿಕೆಟ್ ಪಡೆದು ಗಮನ ಸೆಳೆದರು.

ಗುರಿ ಬೆನ್ನಟ್ಟಿದ ಮುಂಬೈ 18 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಅಮೋಘ ಜಯ ದಾಖಲಿಸಿತು. ಅತ್ಯಮೋಘ ಆಟವಾಡಿದ ಕ್ಯಾಮರೂನ್ ಗ್ರೀನ್ ಭರ್ಜರಿ ಶತಕ ಸಿಡಿಸಿದರು. ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಸೂರ್ಯಕುಮಾರ್ ಯಾದವ್ 25 ರನ್ ಗಳಿಸಿ ಔಟಾಗದೆ ಉಳಿದರು.

ಇಶಾನ್ ಕಿಶನ್ 14 ರನ್ ಗಳಿಸಿ ಔಟಾದರು, ನಾಯಕ ರೋಹಿತ್ ಶರ್ಮಾ ಸಮಯೋಚಿತ ಆಟವಾಡಿ 56 ರನ್ ಗಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next