Advertisement
ಬಿಗಿಯಾದ ಬೌಲಿಂಗ್ ದಾಳಿಗೆ ತೀವ್ರ ಕುಸಿತ ಕಂಡ ಮುಂಬೈ 9 ವಿಕೆಟಿಗೆ ಕೇವಲ 125 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ 15.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ರಿಯಾನ್ ಪರಾಗ್ 54 ರನ್ ಗಳಿಸಿ ಔಟಾಗದೆ ಉಳಿದರು.
ರೋಹಿತ್ ಐಪಿಎಲ್‌ನಲ್ಲಿ ಅತ್ಯಧಿಕ 17 ಸಲ ಸೊನ್ನೆ ಸುತ್ತಿದ ದಿನೇಶ್ ಕಾರ್ತಿಕ್ ದಾಖಲೆಯನ್ನು ಸರಿದೂಗಿಸಿದರು. ಬೌಲ್ಟ್ ಅವರ ಮುಂದಿನ ಎಸೆತದಲ್ಲಿ ನಮನ್ ಧೀರ್ ಲೆಗ್ ಬಿಫೋರ್ ಆಗಿ ನಿರ್ಗಮಿಸಿದರು. ಇವರ ಮುಂದಿನ ಓವರ್‌ನ 2ನೇ ಎಸೆತದಲ್ಲಿ ಡಿವಾಲ್ಡ್ ಬ್ರೇವಿಸ್ ವಿಕೆಟ್ ಉದುರಿತು. ಬೌಲ್ಟ್ 4 ಎಸೆತಗಳಲ್ಲಿ ಮೂವರನ್ನು ಪೆವಿಲಿಯನ್‌ಗೆ ರವಾನಿಸಿ ರಾಜಸ್ಥಾನ್‌ಗೆ ಮೇಲುಗೈ ಒದಗಿಸಿದರು.
Related Articles
Advertisement
5ನೇ ವಿಕೆಟಿಗೆ ಜತೆಗೂಡಿದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮ ತಂಡದ ಕುಸಿತಕ್ಕೆ ತಡೆಯಾಗಿ ನಿಂತರು. 36 ಎಸೆತಗಳಿಂದ 56 ರನ್ ಒಟ್ಟುಗೂಡಿತು. ಪಾಂಡ್ಯ ಗಳಿಕೆ 21 ಎಸೆತಗಳಿಂದ ಸರ್ವಾಧಿಕ 34 ರನ್ (6 ಬೌಂಡರಿ). ಈ ಜೋಡಿಯನ್ನು ಬೇರ್ಪಡಿಸಿದವರು ಚಹಲ್. ಅರ್ಧ ಹಾದಿ ಕ್ರಮಿಸುವಾಗ ಮುಂಬೈ 5 ವಿಕೆಟ್ ನಷ್ಟಕ್ಕೆ 77 ರನ್ ಮಾಡಿತ್ತು.
ಅನಂತರವೂ ಮುಂಬೈ ಇನ್ನಿಂಗ್ಸ್ ಸುಧಾರಣೆ ಕಾಣಲಿಲ್ಲ. ಪೀಯೂಷ್ ಚಾವ್ಲಾ (3) ಮತ್ತು ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ತಿಲಕ್ ವರ್ಮ (32) 12 ರನ್ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡರು.
ಮುಂಬೈಗೆ ಆರಂಭಿಕ ಆಘಾತವಿಕ್ಕಿದ ವೇಗಿ ಬೌಲ್ಟ್ 22 ರನ್ನಿಗೆ 3 ವಿಕೆಟ್, ಚಹಲ್ ಕೇವಲ 11 ರನ್ನಿಗೆ 3 ವಿಕೆಟ್ ಉರುಳಿಸಿದರು.