ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಮಾಜಿ ನಿರ್ದೇಶಕ ಮೈಕ್ ಹೆಸನ್ ಅವರು ತಂಡದ ಈ ಹಿಂದಿನ ಹಲವು ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 2022ರ ಮೆಗಾ ಹರಾಜಿನಲ್ಲಿ ಆರ್ ಸಿಬಿ ಮ್ಯಾನೇಜ್ ಮೆಂಟ್ ಯುವ ಪ್ರತಿಭಾನ್ವಿತ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಖರೀದಿಸಲು ಯೋಜನೆ ಹಾಕಿತ್ತು ಎಂದಿದ್ದಾರೆ.
2022ರ ಹರಾಜಿನಲ್ಲಿ ಆರ್ ಸಿಬಿ ಖರೀದಿ ಮಾಡಲು ಬಯಸಿದ್ದ ಪಟ್ಟಿಯಲ್ಲಿ ತಿಲಕ್ ವರ್ಮಾ ಹೆಸರಿತ್ತು. ಆದರೆ ಅದು ಕೈಗೂಡದ ಕಾರಣ ಇಂಧೋರ್ ಮೂಲದ ಬಲಗೈ ಬ್ಯಾಟರ್ ರಜತ್ ಪಾಟಿದಾರ್ ಅವರನ್ನು ಖರೀದಿಸಲಾಯಿತು ಎಂದಿದ್ದಾರೆ.
ಇದನ್ನೂ ಓದಿ:Hyderabad: ವಿವಾಹಕ್ಕೆ ತಯಾರಿ- ದಂತಪಂಕ್ತಿ ಶಸ್ತ್ರಚಿಕಿತ್ಸೆ ವೇಳೆ ಕೊನೆಯುಸಿರೆಳೆದ ಯುವಕ
ಆರ್ ಸಿಬಿ ಖರೀದಿಸಲು ವಿಫಲರಾದ ತಿಲಕ್ ವರ್ಮಾ ಅವರನ್ನು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. 1.70 ಕೋಟಿ ರೂ ಗೆ ತಿಲಕ್ ಮುಂಬೈ ಪಾಲಾಗಿದ್ದರು. ಅಂದಿನಿಂದ, 21 ವರ್ಷದ ವರ್ಮಾ ಭಾರತೀಯ ಕ್ರಿಕೆಟ್ ನ ಯುವ ಪೀಳಿಗೆಯಲ್ಲಿ ಪ್ರಮುಖ ಹೆಸರುಗಳಲ್ಲಿ ಒಂದಾಗಿದ್ದಾರೆ. ಅಲ್ಲದೆ ಭಾರತ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ.
ಅವರು ಆರ್ ಸಿಬಿಯಲ್ಲಿದ್ದ ಸಮಯದಲ್ಲಿ ವರ್ಮಾ ಅವರನ್ನು ಖರೀದಿಸಲು ವಿಫಲವಾಗಿದ್ದು ದೊಡ್ಡ ಬೇಸರದ ವಿಚಾರ ಎಂದು ಹೆಸನ್ ಒತ್ತಿ ಹೇಳಿದರು, ತಿಲಕ್ ತಂಡದ ಬ್ಯಾಟಿಂಗ್ ಗೆ ಸ್ಥಿರತೆ ನೀಡಬಹುದೆಂದು ಯೋಜಿಸಿದ್ದರು ಎಂದರು.