ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿವಿ ಪ್ರಸಾರ ಹಕ್ಕುಗಳು ಮತ್ತು ಡಿಜಿಟಲ್ ಹಕ್ಕುಗಳನ್ನು 43,255 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಐದು ವರ್ಷಗಳ ಅವಧಿಯಲ್ಲಿ ಐಪಿಎಲ್ ನೇರಪ್ರಸಾರದ ಹಕ್ಕು ಪಡೆಯಲು ರವಿವಾರ ಮುಂಬೈನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿತ್ತು. ಹರಾಜು ಗೆದ್ದ ಸಂಸ್ಥೆ 2022ರಿಂದ 2027ರವರೆಗಿನ ಅವಧಿಯಲ್ಲಿ ಐಪಿಎಲ್ ನೇರಪ್ರಸಾರದ ಹಕ್ಕು ಪಡೆಯಲಿದೆ.
ಎರಡು ವಿಭಿನ್ನ ಮಾಧ್ಯಮ ಕಂಪನಿಗಳು ಪ್ಯಾಕೇಜ್ ಎ (ಟಿವಿ ಹಕ್ಕುಗಳು) ಮತ್ತು ಪ್ಯಾಕೇಜ್ ಬಿ (ಡಿಜಿಟಲ್ ಹಕ್ಕುಗಳು) ಅನ್ನು ಪಡೆದುಕೊಂಡಿವೆ ಎಂದು ವರದಿಯಾಗಿದೆ. ಆದರೆ ಸಂಸ್ಥೆಗಳ ಹೆಸರುಗಳು ಇನ್ನೂ ಬಹಿರಂಗವಾಗಿಲ್ಲ.
ಇದನ್ನೂ ಓದಿ:ಖಾಸಗೀಕರಣದತ್ತ ಲಲಿತ್‌ಮಹಲ್ ಹೋಟೆಲ್?; 14ರಂದು ನಡೆಯುವ ಸಂಪುಟ ಸಭೆಯಲ್ಲಿ ನಿರ್ಣಯ ಸಾಧ್ಯತೆ
ಭಾರತ ಉಪಖಂಡದಲ್ಲಿ ಟಿವಿ ಪ್ರಸಾರದ ಹಕ್ಕುಗಳನ್ನು ಒಳಗೊಂಡಿರುವ ಪ್ಯಾಕೇಜ್ ಎ ಪ್ರತಿ ಆಟಕ್ಕೆ 49 ಕೋಟಿ ರೂ.ಗಳ ಮೂಲ ಬೆಲೆಯನ್ನು ಹೊಂದಿತ್ತು. ಪ್ಯಾಕೇಜ್ ಬಿ ಎಂದರೆ ಡಿಜಿಟಲ್ ಹಕ್ಕುಗಳನ್ನು ಪ್ರತಿ ಪಂದ್ಯಕ್ಕೆ 33 ಕೋಟಿ ರೂ. ಮೂಲ ಬೆಲೆಗೆ ನಿಗದಿಪಡಿಸಲಾಗಿತ್ತು. ಹರಾಜಿನಲ್ಲಿ ಇದು ಶೇ.45 ರಷ್ಟು ಏರಿಕೆಯಾಗಿ, ಪ್ರತಿ ಪಂದ್ಯಕ್ಕೆ 48 ಕೋಟಿ ರೂ ಅಂತೆ ಬಿಕರಿಯಾಗಿದೆ ಎಂದು ವರದಿ ತಿಳಿಸಿದೆ.