Advertisement
2008 ರಿಂದ 2017 ರವರೆಗೆ ಹತ್ತು ವರ್ಷಗಳವರೆಗೆ ಐಪಿಎಲ್ ನೇರಪ್ರಸಾರ ಮಾಡಿದ್ದ ಸೋನಿ ಸಿಕ್ಸ್ ಬಿಸಿಸಿಐಗೆ 8,200 ಕೋಟಿ ರೂ. ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ನೇರಪ್ರಸಾರಕ್ಕಾಗಿ ಭಾರೀ ಮೊತ್ತವನ್ನು ತೋರಿಸಿದ್ದ ಸ್ಟಾರ್ ಇಂಡಿಯಾ ಹಕ್ಕು ಪಡೆದುಕೊಳ್ಳಲು ಯಶಸ್ವಿಯಾಯಿತು. ಅಚ್ಚರಿಯೆಂದರೆ ಬರೀ ಟೀವಿ ನೇರ ಪ್ರಸಾರಕ್ಕೆ ಸ್ಟಾರ್‌ನ್ಪೋರ್ಟ್ಸ್ ಸಲ್ಲಿಸಿದ್ದು ಕೇವಲ 6196 ಕೋಟಿ ರೂ. ಬಿಡ್. ಸೋನಿ ಇದಕ್ಕೆ ವ್ಯತಿರಿಕ್ತವಾಗಿ 11,050 ಕೋಟಿ ರೂ. ಬಿಡ್ ಮಾಡಿತ್ತು. ಆದರೆ ಜಾಗತಿಕ ನೇರಪ್ರಸಾರ, ಅಂತರ್ಜಾಲ ತಾಣದಲ್ಲಿ ನೇರಪ್ರಸಾರವೂ ಸೇರಿ ಸ್ಟಾರ್ 16,347 ಕೋಟಿ ರೂ.ಬಿಡ್ ಮಾಡಿದ್ದರಿಂದ ಸೋನಿ ಕೈಚೆಲ್ಲಬೇಕಾಯಿತು. ಹಾಟ್‌ಸ್ಟಾರ್‌ನಲ್ಲಿ ಅಂತರ್ಜಾಲ ಪ್ರಸಾರ: ಅಂತರ್ಜಾಲದ ಮಟ್ಟಿಗೆ ನೇರಪ್ರಸಾರ ಹಕ್ಕು ಪಡೆದಿದ್ದು ಹಾಟ್‌ಸ್ಟಾರ್. ಇದು ಕೂಡ ಸ್ಟಾರ್ ನ್ಪೋರ್ಟ್ಸ್ನ ಅಂಗಸಂಸ್ಥೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಈ ಹಕ್ಕಿಗಾಗಿ ಏರ್‌ಟೆಲ್ ಟಿವಿ, ಜಿಯೊ ಟಿವಿ, ಫೇಸ್ ಬುಕ್‌ಗಳು ಪ್ರಬಲ ಪೈಪೋಟಿ ನಡೆಸಿದ್ದವು. ಅವನ್ನೆಲ್ಲ ಸ್ಟಾರ್‌ನ್ಪೋರ್ಟ್ಸ್ ಮೂಲೆಗೆ ಸರಿಸಿತು. ಈ ದುಬಾರಿ ಬಿಡ್ಡಿಂಗ್‌ನಿಂದ ಜಾಗತಿಕವಾಗಿ ಐಪಿಎಲ್ ವರ್ಚಸ್ಸು ಇನ್ನಷ್ಟು ಹೆಚ್ಚಾಗಿದೆ. ಜಗತ್ತಿನ ಅತಿ ಶ್ರೀಮಂತ ಕ್ರೀಡಾಕೂಟ ಗಳ ಲ್ಲೊಂದೆಂಬ ತನ್ನ ಖ್ಯಾತಿಗೆ ಮತ್ತೂಂದು ಗರಿ ಸಿಕ್ಕಿಸಿಕೊಂಡಿದೆ.
Related Articles
ನ್ಪೋರ್ಟ್ಸ್ ಏಕಸ್ವಾಮ್ಯ
ಭಾರತದ ಕ್ರೀಡೆಗಳ ನೇರಪ್ರಸಾರದ ಮಟ್ಟಿಗೆ ಸ್ಟಾರ್ ನ್ಪೋರ್ಟ್ಸ್ ಏಕಸ್ವಾಮ್ಯ ಸಾಧಿಸಿದೆ. ಅದರ ಚಕ್ರಾಧಿಪತ್ಯಕ್ಕೆ ಸ್ಪರ್ಧೆಯೇ ಇಲ್ಲವಾಗಿದೆ. ಭಾರತ ಕ್ರಿಕೆಟ್ ತಂಡದ ಅಂತಾರಾಷ್ಟ್ರೀಯ ಪಂದ್ಯಗಳ ನೇರಪ್ರಸಾರವೂ ಸ್ಟಾರ್ ಹಿಡಿತದಲ್ಲಿದೆ. ಈಗ ಐಪಿಎಲ್ ನೇರಪ್ರಸಾರವೂ ಅದಕ್ಕೆ ದಕ್ಕಿದೆ. ಜೊತೆಗೆ ಕೆಪಿಎಲ್, ಟಿಎನ್‌ಪಿಎಲ್‌ನಂತಹ ಸ್ಥಳೀಯ ಕ್ರಿಕೆಟ್ ಕೂಟಗಳ ನೇರಪ್ರಸಾರವೂ ಅದರದ್ದೆ. ಇಷ್ಟು ಸಾಲದೆಂಬಂತೆ ಪ್ರೊ ಕಬಡ್ಡಿ, ಐಂಡಿಯನ್ ಸೂಪರ್ ಲೀಗ್
ಫುಟ್‌ಬಾಲ್ ನೇರಪ್ರಸಾರದ ಹಕ್ಕೂ ಕೂಡ ಸ್ಟಾರ್ ಕೈಯಲ್ಲೇ ಇದೆ! ಈ ಬಿಡ್ಡಿಂಗ್‌ಗೂ ಮುನ್ನ ಕೆಲ ಕ್ರೀಡಾವಾಹಿನಿಗಳು ಬಿಸಿಸಿಐಗೆ ಮನವಿ ಸಲ್ಲಿಸಿ, ಐಪಿಎಲ್ ನೇರಪ್ರಸಾರವನ್ನು ಸ್ಟಾರ್‌ಗೆ ನೀಡಬಾರದು ಎಂದು ಕೇಳಿಕೊಂಡಿದ್ದವು. ಈ ರೀತಿಯ ಏಕಸ್ವಾಮ್ಯದ ಭೀತಿಯಿಂದಲೇ ಈ ಮನವಿ ಸಲ್ಲಿಸಲಾಗಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Advertisement
ಅಂತಾರಾಷ್ಟ್ರೀಯ ಪಂದ್ಯಕ್ಕಿಂತ ಐಪಿಎಲ್ ಪಂದ್ಯ ದುಬಾರಿವಿಶೇಷವೆಂದರೆ ಭಾರತ ತಂಡ ಆಡುವ ಅಂತಾರಾಷ್ಟ್ರೀಯ ಪಂದ್ಯಗಳಿಗಿಂತ ಐಪಿಎಲ್ ಪಂದ್ಯಗಳೇ ದುಬಾರಿಯಾಗಿವೆ. ಭಾರತ ಆಡುವ ಒಂದು ಪಂದ್ಯದಿಂದ ಬಿಸಿಸಿಐ ಗಳಿಸುವ ಮೊತ್ತ 43 ಕೋಟಿ ರೂ. ಆದರೆ ಒಂದು ಐಪಿಎಲ್ ಪಂದ್ಯಕ್ಕೆ ಬಿಸಿಸಿಐ 55 ಕೋಟಿ ರೂ. ಗಳಿಸುತ್ತದೆ.