Advertisement
ಲೋಧಾ ಶಿಫಾರಸು ಪಾಲನೆಪ್ರತಿ ವರ್ಷ ಐಪಿಎಲ್ ವೇಳಾಪಟ್ಟಿ ಎ. 7ರ ಬಳಿಕ ಅಥವಾ ಎ. 5ರೊಳಗೆ ನಿಗದಿಯಾಗುತ್ತಿತ್ತು. ಆದರೆ ವಿಶ್ವಕಪ್ ಮೇ 30ಕ್ಕೆ ಆರಂಭವಾಗಲಿದೆ. ಜತೆಗೆ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟಗಳ ನಡುವೆ 15 ದಿನದ ಅಂತರವಿರಬೇಕು ಎನ್ನುವ ಲೋಧಾ ಸಮಿತಿ ಶಿಫಾರಸನ್ನು ಕೂಡ ಬಿಸಿಸಿಐ ಪಾಲಿಸಬೇಕಿದೆ. ಅಲ್ಲದೆ ಲೋಕಸಭಾ ಚುನಾವಣೆ ದಿನಾಂಕ ಕೂಡ ಪ್ರಕಟವಾಗುವ ಸಾಧ್ಯತೆ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಮಾರ್ಚ್‌ನಲ್ಲೇ ಐಪಿಎಲ್ ಆರಂಭಿಸಿ ಮೇ ಮಧ್ಯ ಭಾಗದಲ್ಲಿ ಫೈನಲ್ ಆಯೋಜಿಸುವ ಸಾಧ್ಯತೆ ಇದೆ.
ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕೂಟ ಆಯೋಜಿಸಿದ್ದಾಗ ಷೇರುದಾರರು ಸಾಕಷ್ಟು ನಷ್ಟ ಅನುಭವಿಸಿದ್ದರು ಎನ್ನಲಾಗಿದೆ. ಈ ಕಾರಣದಿಂದಾಗಿ ವಿದೇಶದಲ್ಲಿ ಬೇಡ, ಭಾರತದಲ್ಲೇ ಐಪಿಎಲ್ ಪಂದ್ಯ ನಡೆಸಲು ಷೇರುದಾರರು ಒತ್ತಾಯ ಮಾಡಿದ್ದಾರೆ ಎಂದು ಹೇಳಲಾಗಿದೆ. ವಿದೇಶಕ್ಕೆ ಶಿಫ್ಟ್ ಆಗದು
ಕಳೆದ 3 ಲೋಕಸಭಾ ಚುನಾವಣೆಗಳು ಎಪ್ರಿಲ್, ಮೇನಲ್ಲಿ ನಡೆದಿದ್ದವು. ಇದೇ ವೇಳೆ ಐಪಿಎಲ್ ವೇಳಾಪಟ್ಟಿಗಳೂ ನಿಗದಿ ಯಾಗಿದ್ದವು. 2009ರಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಡೀ ಕೂಟವನ್ನೇ ಬಿಸಿಸಿಐ ದಕ್ಷಿಣ ಆಫ್ರಿಕಾಕ್ಕೆ ವರ್ಗಾಯಿಸಿತ್ತು. 2014ರಲ್ಲಿ ಲೋಕಸಭಾ ಚುನಾವಣೆ ನಡೆದಾಗ 19 ಐಪಿಎಲ್ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಈ ಸಲವೂ ಇಂಥದೊಂದು ಸಾಧ್ಯತೆ ಕಂಡು ಬರುತ್ತಿದೆ ಯಾದರೂ ಬಿಸಿಸಿಐ ಇದನ್ನು ತಪ್ಪಿಸಿ ಪೂರ್ತಿ ಐಪಿಎಲ್ ಪಂದ್ಯಾವಳಿಯನ್ನು ಭಾರತದಲ್ಲೇ ನಡೆಸಲು ಚಿಂತಿಸಿದೆ ಎನ್ನಲಾಗಿದೆ.