Advertisement

ಐಪಿಎಲ್‌ಗೆ ಅದ್ದೂರಿ ಚಾಲನೆ

10:30 AM Apr 06, 2017 | Team Udayavani |

ಹೈದರಾಬಾದ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 10ನೇ ವರ್ಷದ ಕ್ರಿಕೆಟ್‌ ಹಬ್ಬಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಬಾಲಿವುಡ್‌ ತಾರೆ ಆ್ಯಮಿ ಜಾಕ್ಸನ್‌ ಅವರ ಅಮೋಘ ನೃತ್ಯ ಪ್ರದರ್ಶನದ ಜತೆ ಭಾರತೀಯ ಕ್ರಿಕೆಟ್‌ನ ನಾಲ್ವರು ದಿಗ್ಗಜರಾದ ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವೀರೇಂದ್ರ ಸೆಹವಾಗ್‌ ಮತ್ತು ವಿವಿಎಸ್‌ ಲಕ್ಷ್ಮಣ್‌ ಅವರನ್ನು ಉದ್ಘಾಟನಾ ಸಮಾರಂಭದ ವೇಳೆ ಸಮ್ಮಾನಿಸಲಾಯಿತು. 

Advertisement

ಈ ಹಿಂದಿನ 9 ಐಪಿಎಲ್‌ಗ‌ಳ ವಿಜೇತರನ್ನು ವೀಡಿಯೊ ಮೂಲಕ ತೋರಿಸಿದ ಬಳಿಕ ಕ್ರಿಕೆಟ್‌ ದಿಗ್ಗಜರನ್ನು ಸಮ್ಮಾನಿಸಲಾಯಿತು. 2008ರಲ್ಲಿ ಮೊದಲ ಐಪಿಎಲ್‌ ವೇಳೆ ಈ ನಾಲ್ವರು ದಿಗ್ಗಜರನ್ನು ಆಯಾಯ ತಂಡಗಳ ಐಕಾನ್‌ ಆಟಗಾರರಾಗಿ ಆಯ್ಕೆ ಮಾಡಲಾಗಿತ್ತು. ಮುಂಬೈ ಇಂಡಿಯನ್ಸ್‌ ಪಾಲಾದ ತೆಂಡುಲ್ಕರ್‌ 2013ರವರೆಗೆ ಆಡಿದರು. ಗಂಗೂಲಿ ಕೋಲ್ಕತಾ ಪರ ಆಡಿದರೆ ಸೆಹವಾಗ್‌ ಮತ್ತು ಲಕ್ಷ್ಮಣ್‌ ಅನುಕ್ರಮವಾಗಿ ಡೆಲ್ಲಿ ಮತ್ತು ಡೆಕ್ಕನ್‌ ಚಾರ್ಜರ್ ಪರ ಆಡಿದರು. 10 ವರ್ಷಗಳ ಬಳಿಕ ಬಿಸಿಸಿಐ ಈ ನಾಲ್ವರನ್ನು ಐಪಿಎಲ್‌ ಕ್ರಿಕೆಟನ್ನು ಉನ್ನತ ಸ್ಥಾನಕ್ಕೇರಲು ನೆರವಾದ ಕಾರಣಕ್ಕಾಗಿ ಸಮ್ಮಾನಿಸಿತು.

ಹಿಂದಿಯಲ್ಲಿ ಹರ್ಷ ಬೋಗ್ಲೆ ವೀಕ್ಷಕ ವಿವರಣೆ
ಹೈದರಾಬಾದ್‌:
ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಐಪಿಎಲ್‌ನ ಕಾಮೆಂಟರಿ ತಂಡ ದಲ್ಲಿ ಕಾಣಿಸಿಕೊಳ್ಳ ಲಿದ್ದಾರೆ. ಆದರೆ ಅವರು ಈ ಬಾರಿ ಹಿಂದಿಯಲ್ಲಿ ವೀಕ್ಷಕ ವಿವರಣೆ ಮಾಡು ವುದು ವಿಶೇಷವಾಗಿದೆ. ವೀಕ್ಷಕರಿಗೆ ಇದು ಸ್ವಲ್ಪ ಮಟ್ಟಿಗೆ ಹಾಸ್ಯವಾಗಿ ಕಾಣಬಹುದು. ಆದರೆ ನಿಜ. ವೀಕ್ಷಕವಿವರಣೆಗಾರರ ಪಟ್ಟಿಗೆ ಮರಳಿರುವುದು ನನಗೆ ಅತೀವ ಖುಷಿ ನೀಡಿದೆ. ಆದರೆ ಇಂಗ್ಲಿಷ್‌ ಬದಲು ಹಿಂದಿಯಲ್ಲಿ ವೀಕ್ಷಕ ವಿವರಣೆ ಮಾಡಲಿದ್ದೇನೆ ಎಂದು ಅವರು ತನ್ನ ಫೇಸ್‌ಬುಕ್‌ ಪುಟದಲ್ಲಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next