Advertisement

ಭಾರತದ ವಿಳಂಬಕ್ಕೆ ಐಪಿಎಲ್ ಕಾರಣ!

10:09 AM Jun 03, 2019 | sudhir |

ಲಂಡನ್‌: ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯ ಕ್ರೇಜ್‌ ಭಾರತದಲ್ಲಿ ಭರ್ಜರಿಯಾಗಿಯೇ ಹಬ್ಬಿದೆ. ಆದರೆ ಕೊಹ್ಲಿ ಪಡೆಯ ‘ರಂಗಪ್ರವೇಶ’ ತೀರಾ ವಿಳಂಬವಾದ್ದರಿಂದ ಕ್ರಿಕೆಟ್ ಅಭಿ ಮಾನಿಗಳು ಐಸಿಸಿ ವಿರುದ್ಧ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.

Advertisement

ಭಾರತ ತನ್ನ ಮೊದಲ ಪಂದ್ಯ ಆಡುವುದು ಜೂ. 5ರಂದು. ಅಂದರೆ ವಿಶ್ವಕಪ್‌ ಆರಂಭಗೊಂಡು 6 ದಿನಗಳ ಬಳಿಕ. ಆಗ ಉಳಿದೆಲ್ಲ ತಂಡಗಳು 2 ಪಂದ್ಯಗಳನ್ನು ಆಡಿರುತ್ತವೆ. ಇದಕ್ಕಿಂತ ದೊಡ್ಡ ಅಚ್ಚರಿಯೆಂದರೆ, ಅಂದು ಭಾರತ ವನ್ನು ಎದುರಿಸಲಿರುವ ದಕ್ಷಿಣ ಆಫ್ರಿಕಾಕ್ಕೆ ಇದು 3ನೇ ಪಂದ್ಯವಾಗಿರುವುದು!

ಐಪಿಎಲ್ ಟೂರ್ನಿಯೇ ಕಾರಣ

ಆದರೆ ಅಭಿಮಾನಿಗಳು ವೇಳಾಪಟ್ಟಿ ನಿರ್ಮಿಸಿದ ಐಸಿಸಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುವುದರಲ್ಲಿ ಅರ್ಥವಿಲ್ಲ, ಐಪಿಎಲ್ ನಿಮಿತ್ತ ಜೂ. 5ರ ಬಳಿಕವೇ ಭಾರತಕ್ಕೆ ಮೊದಲ ಪಂದ್ಯ ಆಯೋಜಿಸಬೇಕು ಎಂದು ಬಿಸಿಸಿಐ ಐಸಿಸಿಯಲ್ಲಿ ಮೊದಲೇ ಕೇಳಿಕೊಂಡಿದ್ದಾಗಿ ಮಂಡಳಿಯ ಮೂಲಗಳಿಂದ ತಿಳಿದು ಬಂದಿದೆ. ಐಪಿಎಲ್ ಮುಗಿದ ಬಳಿಕ ಭಾರತದ ಆಟಗಾರರಿಗೆ 15 ದಿನಗಳ ವಿಶ್ರಾಂತಿ ನೀಡಬೇಕುಎಂಬುದಾಗಿ ಲೋಧಾ ಸಮಿತಿ ಐಸಿಸಿಗೆ ಮನವಿ ಮಾಡಿಕೊಂಡಿತ್ತು. ಅದರಂತೆ ಭಾರತ ಜೂ. 2ರಂದು ಮೊದಲ ಪಂದ್ಯ ಆಡಬೇಕಿತ್ತು. ಆದರೆ ಬಿಸಿಸಿಐ ಇನ್ನೂ ಹೆಚ್ಚಿನ ಕಾಲಾವ ಕಾಶ ಕೇಳಿದ್ದಾಗಿ ತಿಳಿದುಬಂದಿದೆ. ಲೋಧಾ ಸಮಿತಿಯ ಕೋರಿಕೆಯೇ ಅಂತಿಮವಾಗಿರುವಾಗ ಬಿಸಿಸಿಐ ಕೋರಿಕೆಯನ್ನು ಐಸಿಸಿ ಏಕೆ ಒಪ್ಪಬೇಕಿತ್ತು ಎಂಬುದು ಈಗಿನ ಪ್ರಶ್ನೆ!

Advertisement

Udayavani is now on Telegram. Click here to join our channel and stay updated with the latest news.

Next