Advertisement

IPL; ಮುಂಬೈ ವಿರುದ್ಧ ಗುಜರಾತ್ ಟೈಟಾನ್ಸ್ ಗೆ 6ರನ್ ಜಯ

12:23 AM Mar 25, 2024 | Team Udayavani |

ಅಹಮದಾಬಾದ್ : ಇನ್ನೇನು ಗೆಲುವು ಖಚಿತ ಎಂಬ ಸ್ಥಿತಿಯಲ್ಲಿದ್ದ ಮುಂಬೈ ಇಂಡಿಯನ್ಸ್‌, ಕೊನೆಯ ಹಂತದಲ್ಲಿ ನಾಟಕೀಯ ಕುಸಿತ ಕಂಡು ರವಿವಾರದ ಐಪಿಎಲ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ 6 ರನ್ನುಗಳ ಸೋಲಿನ ಆಘಾತ ಅನುಭವಿಸಿದೆ. ಗುಜರಾತ್‌ 6 ವಿಕೆಟಿಗೆ 168 ರನ್‌ ಗಳಿಸಿದರೆ, ಮುಂಬೈ 9 ವಿಕೆಟಿಗೆ 162 ರನ್‌ ಗಳಿಸಿ ಶರಣಾಯಿತು. ಇದರೊಂದಿಗೆ ಈ ಸಾಲಿನ ಐಪಿಎಲ್‌ನಲ್ಲಿ ತವರಿನ ತಂಡಗಳು ಗೆಲ್ಲುವ ಪರಿಪಾಠ ಮುಂದುವರಿಯಿತು.

Advertisement

ಒಂದು ಹಂತದಲ್ಲಿ ಮುಂಬೈ 2 ವಿಕೆಟಿಗೆ 107 ರನ್‌ ಗಳಿಸಿ ಗೆಲುವಿನತ್ತ ಸಾಗುತ್ತಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ನಾಟಕೀಯ ಕುಸಿತಕ್ಕೊಳಗಾಯಿತು. ಡೆತ್‌ ಓವರ್‌ಗಳಲ್ಲಿ 6 ವಿಕೆಟ್‌ ಉದುರಿಸಿದ ಗುಜರಾತ್‌ ತವರಿನ ಅಭಿಮಾನಿಗಳನ್ನು ಸಡಗರದಲ್ಲಿ ಮುಳುಗಿಸಿತು. ಇದರೊಂದಿಗೆ ಶುಭಮನ್‌ ಗಿಲ್‌ ನಾಯಕತ್ವದ ಮೊದಲ ಪಂದ್ಯದದಲ್ಲೇ ಗುಜರಾತ್‌ ಜಯಭೇರಿ ಮೊಳಗಿಸಿತು.

ಮುಂಬೈ ಸರದಿಯಲ್ಲಿ ಡಿವಾಲ್ಡ್‌ ಬ್ರೇವಿಸ್‌ ಸರ್ವಾಧಿಕ 46, ಮಾಜಿ ನಾಯಕ ರೋಹಿತ್‌ ಶರ್ಮ 43 ರನ್‌ ಗಳಿಸಿದರು. ಗುಜರಾತ್‌ ಸಾಂಘಿಕ ಬೌಲಿಂಗ್‌ ಮೂಲಕ ಯಶಸ್ಸು ಸಾಧಿಸಿತು. ಒಮರ್‌ಜಾಯ್‌, ಉಮೇಶ್‌ ಯಾದವ್‌, ಸ್ಪೆನ್ಸರ್‌ ಜಾನ್ಸನ್‌ ಮತ್ತು ಮೋಹಿತ್‌ ಶರ್ಮ ತಲಾ 2 ವಿಕೆಟ್‌ ಉರುಳಿಸಿದರು.

ಗುಜರಾತ್‌ ಬ್ಯಾಟಿಂಗ್‌ ವೇಳೆ ವೃದ್ಧಿಮಾನ್‌ ಸಹಾ-ಗಿಲ್‌ ಮೊದಲ ವಿಕೆಟಿಗೆ 4 ಓವರ್‌ಗಳಿಂದ 31 ರನ್‌ ಒಟ್ಟುಗೂಡಿಸಿದರು. ಸಾಹಾ 19 ರನ್‌ ಮಾಡಿದರೆ, ಗಿಲ್‌ 8ನೇ ಓವರ್‌ ತನಕ ನಿಂತು 31 ರನ್‌ ಹೊಡೆದರು (22 ಎಸೆತ, 3 ಬೌಂಡರಿ, 1 ಸಿಕ್ಸರ್‌). 45 ರನ್‌ ಗಳಿಸಿದ ವನ್‌ಡೌನ್‌ ಬ್ಯಾಟರ್‌ ಸಾಯಿ ಸುದರ್ಶನ್‌ ಗುಜರಾತ್‌ ಸರದಿಯ ಟಾಪ್‌ ಸ್ಕೋರರ್‌ (39 ಎಸೆತ, 3 ಬೌಂಡರಿ, 1 ಸಿಕ್ಸರ್‌). ಪವರ್‌ ಪ್ಲೇಯಲ್ಲಿ ಒಂದಕ್ಕೆ 47 ರನ್‌ ಮಾಡಿದ ಗುಜರಾತ್‌, ಅರ್ಧ ಹಾದಿ ಕ್ರಮಿಸುವಾಗ 2 ವಿಕೆಟಿಗೆ 82 ರನ್‌ ಮಾಡಿತ್ತು.

ಅಜ್ಮತುಲ್ಲ ಒಮರ್‌ಜಾಯ್‌ (17), ಮಿಲ್ಲರ್‌ (12) ಅವರಿಂದ ದೊಡ್ಡ ಕೊಡುಗೆ ಸಂದಾಯವಾಗಲಿಲ್ಲ. ಕೊನೆಯಲ್ಲಿ ತೆವಾಟಿಯ ಸಿಡಿದರೂ ಇನ್ನಿಂಗ್ಸ್‌ ವಿಸ್ತರಿಸಲು ವಿಫ‌ಲರಾದರು. ತೆವಾಟಿಯ ಗಳಿಕೆ 15 ಎಸೆತಗಳಿಂದ 22 ರನ್‌.
ಜಸ್‌ಪ್ರೀತ್‌ ಬುಮ್ರಾ ಮುಂಬೈ ತಂಡದ ಯಶಸ್ವಿ ಬೌಲರ್‌. ಅವರು ಕೇವಲ 14 ರನ್‌ ವೆಚ್ಚದಲ್ಲಿ 3 ವಿಕೆಟ್‌ ಉರುಳಿಸಿದರು. ಮೊದಲ ಐಪಿಎಲ್‌ ಪಂದ್ಯ ಆಡಿದ ಗೆರಾಲ್ಡ್‌ ಕೋಟಿj ಪ್ರಥಮ ಓವರ್‌ನಲ್ಲೇ ಅಜ್ಮತುಲ್ಲ ಒಮರ್‌ಜಾಯ್‌ ವಿಕೆಟ್‌ ಹಾರಿಸುವಲ್ಲಿ ಯಶಸ್ವಿಯಾದರು. ಕೋಟಿj ಸಾಧನೆ 27ಕ್ಕೆ 2 ವಿಕೆಟ್‌.

Advertisement

ಸ್ಕೋರ್‌ ಪಟ್ಟಿ
ಗುಜರಾತ್‌ ಟೈಟಾನ್ಸ್‌
ವೃದ್ಧಿಮಾನ್‌ ಸಾಹಾ ಬಿ ಬುಮ್ರಾ 19
ಶುಭಮನ್‌ ಗಿಲ್‌ ಸಿ ರೋಹಿತ್‌ ಬಿ ಚಾವ್ಲಾ 31
ಸಾಯಿ ಸುದರ್ಶನ್‌ ಸಿ ತಿಲಕ್‌ ಬಿ ಬುಮ್ರಾ 45
ಎ. ಒಮರ್‌ಜಾಯ್‌ ಸಿ ತಿಲಕ್‌ ಬಿ ಕೋಟ್ಜಿ 17
ಡೇವಿಡ್‌ ಮಿಲ್ಲರ್‌ ಸಿ ಪಾಂಡ್ಯ ಬಿ ಬುಮ್ರಾ 12
ವಿಜಯ್‌ ಶಂಕರ್‌ ಔಟಾಗದೆ 6
ರಾಹುಲ್‌ ತೆವಾಟಿಯ ಸಿ ಧೀರ್‌ ಬಿ ಕೋಟ್ಜಿ 22
ರಶೀದ್‌ ಖಾನ್‌ ಔಟಾಗದೆ 4
ಇತರ 12
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 168
ವಿಕೆಟ್‌ ಪತನ: 1-31, 2-64, 3-104, 4-133, 5-134, 6-161.
ಬೌಲಿಂಗ್‌: ಹಾರ್ದಿಕ್‌ ಪಾಂಡ್ಯ 3-0-30-0
ಲ್ಯೂಕ್‌ ವುಡ್‌ 2-0-25-0
ಜಸ್‌ಪ್ರೀತ್‌ ಬುಮ್ರಾ 4-0-14-3
ಶಮ್ಸ್‌ ಮುಲಾನಿ 3-0-24-0
ಪೀಯೂಷ್‌ ಚಾವ್ಲಾ 3-0-31-1
ನಮನ್‌ ಧೀರ್‌ 1-0-13-0
ಗೆರಾಲ್ಡ್‌ ಕೋಟಿj 4-0-27-2

ಮುಂಬೈ ಇಂಡಿಯನ್ಸ್‌
ಇಶಾನ್‌ ಕಿಶನ್‌ ಸಿ ಸಾಹಾ ಬಿ ಅಜ್ಮತುಲ್ಲ 0
ರೋಹಿತ್‌ ಶರ್ಮ ಎಲ್‌ಬಿಡಬ್ಲ್ಯು ಸಾಯಿ ಕಿಶೋರ್‌ 43
ನಮನ್‌ ಧೀರ್‌ ಎಲ್‌ಬಿಡಬ್ಲ್ಯು ಅಜ್ಮತುಲ್ಲ 20
ಡಿವಾಲ್ಡ್‌ ಬ್ರೇವಿಸ್‌ ಸಿ ಮತ್ತು ಬಿ ಮೋಹಿತ್‌ 46
ತಿಲಕ್‌ ವರ್ಮ ಸಿ ಅಭಿನವ್‌ ಬಿ ಜಾನ್ಸನ್‌ 25
ಟಿಮ್‌ ಡೇವಿಡ್‌ ಸಿ ಮಿಲ್ಲರ್‌ ಬಿ ಮೋಹಿತ್‌ 11
ಹಾರ್ದಿಕ್‌ ಪಾಂಡ್ಯ ಸಿ ತೆವಾಟಿಯ ಬಿ ಉಮೇಶ್‌ 11
ಗೆರಾಲ್ಡ್‌ ಕೋಟ್ಜಿ ಸಿ ಮತ್ತು ಬಿ ಜಾನ್ಸನ್‌ 1
ಶಮ್ಸ್‌ ಮುಲಾನಿ ಔಟಾಗದೆ 1
ಪೀಯೂಷ್‌ ಚಾವ್ಲಾ ಸಿ ರಶೀದ್‌ ಬಿ ಉಮೇಶ್‌ 0
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 1
ಇತರ 3
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 162
ವಿಕೆಟ್‌ ಪತನ: 1-0, 2-30, 3-107, 4-129, 5-142, 6-146, 7-150, 8-160, 9-160.
ಬೌಲಿಂಗ್‌: ಅಜ್ಮತುಲ್ಲ ಒಮರ್‌ಜಾಯ್‌ 3-0-27-2
ಉಮೇಶ್‌ ಯಾದವ್‌ 3-0-31-2
ರಶೀದ್‌ ಖಾನ್‌ 4-0-23-0
ಆರ್‌. ಸಾಯಿ ಕಿಶೋರ್‌ 4-0-24-1
ಸ್ಪೆನ್ಸರ್‌ ಜಾನ್ಸನ್‌ 2-0-25-2
ಮೋಹಿತ್‌ ಶರ್ಮ 4-0-32-2
ಪಂದ್ಯಶ್ರೇಷ್ಠ: ಸಾಯಿ ಸುದರ್ಶನ್‌

Advertisement

Udayavani is now on Telegram. Click here to join our channel and stay updated with the latest news.

Next