Advertisement

IPL ಗುಜರಾತ್‌ ಟೈಟಾನ್ಸ್‌ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ಅನಿವಾರ್ಯ

01:27 AM Apr 17, 2024 | Team Udayavani |

ಅಹ್ಮದಾಬಾದ್‌: ನಿರೀಕ್ಷಿತ ಹಾಗೂ ಸ್ಥಿರ ಪ್ರದರ್ಶನ ನೀಡಲು ವಿಫ‌ಲವಾಗಿರುವ ಗುಜರಾತ್‌ ಟೈಟಾನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಬುಧವಾರದ ಮಹತ್ವದ ಪಂದ್ಯದಲ್ಲಿ ಮುಖಾ ಮುಖೀ ಆಗಲಿವೆ. ಈ ಪಂದ್ಯ ಅಹ್ಮದಾಬಾದ್‌ನಲ್ಲಿ ನಡೆಯ ಲಿರುವ ಕಾರಣ ಶುಭಮನ್‌ ಗಿಲ್‌ ತಂಡ ಫೇವರಿಟ್‌ ಆಗಿ ಕಾಣುತ್ತದೆ.

Advertisement

ಗುಜರಾತ್‌ ಈವರೆಗೆ 6 ಪಂದ್ಯಗಳನ್ನಾಡಿದ್ದು, ಮೂರನ್ನು ಗೆದ್ದಿದೆ, ಉಳಿದ ಮೂರನ್ನು ಸೋತಿದೆ. ಡೆಲ್ಲಿ ಆರರಲ್ಲಿ ಜಯಿಸಿದ್ದು ಎರಡನ್ನು ಮಾತ್ರ. ನಾಲ್ಕರಲ್ಲಿ ಎಡವಿದೆ. ಹೀಗಾಗಿ ಡೆಲ್ಲಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.

ಗುಜರಾತ್‌ಗೆ ಮಿಶ್ರ ಫ‌ಲ
ತನ್ನ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿಯನ್ನೆತ್ತಿ, ಕಳೆದ ವರ್ಷ ರನ್ನರ್ ಆಪ್‌ ಆಗಿದ್ದ ಗುಜರಾತ್‌ ಈ ಬಾರಿ ಚಾಂಪಿಯನ್ನರ ಆಟವಾಡುವಲ್ಲಿ ವಿಫ‌ಲವಾಗಿದೆ. ಆದರೆ ಜೈಪುರದಲ್ಲಿ ಬಲಿಷ್ಠ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಕೊನೆಯ ಎಸೆತದಲ್ಲಿ ಜಯ ಸಾಧಿಸುವ ಮೂಲಕ ಭರವಸೆ ಮೂಡಿಸಿರುವುದು ಸುಳ್ಳಲ್ಲ. ಇಲ್ಲಿ 198 ರನ್‌ ಟಾರ್ಗೆಟ್‌ ಪಡೆದಿದ್ದ ಗುಜರಾತ್‌ಗೆ ಕೊನೆಯ ಓವರ್‌ನಲ್ಲಿ 15 ರನ್‌ ತೆಗೆಯುವ ಸವಾಲು ಎದುರಾಗಿತ್ತು. 4 ವಿಕೆಟ್‌ ಕೈಯಲ್ಲಿತ್ತು. ರಶೀದ್‌ ಖಾನ್‌ ಅಂತಿಮ ಎಸೆತವನ್ನು ಬೌಂಡರಿಗೆ ಬಡಿದಟ್ಟಿ ತಂಡದ ಗೆಲುವು ಸಾರಿದ್ದರು. ಈ ವಿಜಯ ಗುಜರಾತ್‌ಗೆ ಸ್ಫೂರ್ತಿ ಆಗು ವುದರಲ್ಲಿ ಅನುಮಾನವಿಲ್ಲ.

ಮೊಹಮ್ಮದ್‌ ಶಮಿ ಗೈರು ತಂಡದ ಬೌಲಿಂಗ್‌ ವಿಭಾಗ ವನ್ನು ಬಹಳಷ್ಟು ಘಾಸಿಗೊಳಿಸಿದೆ. ಉಮೇಶ್‌ ಯಾದವ್‌ 7 ವಿಕೆಟ್‌ ಉರುಳಿಸಿದರೂ ಓವರಿಗೆ ಹತ್ತರಷ್ಟು ರನ್‌ ಬಿಟ್ಟುಕೊಟ್ಟಿ ದ್ದಾರೆ. ಸ್ಟಾರ್‌ ಸ್ಪಿನ್ನರ್‌ ರಶೀದ್‌ ಖಾನ್‌ ರನ್‌ ನಿಯಂತ್ರಿಸು ತ್ತಿದ್ದರೂ ಘಾತಕವಾಗಿ ಪರಿ ಣಮಿಸಿಲ್ಲ. ಉಳಿದವರು ಸ್ಪೆನ್ಸರ್‌ ಜಾನ್ಸನ್‌, ನೂರ್‌ ಅಹ್ಮದ್‌, ಮೋಹಿತ್‌ ಶರ್ಮ. ಇವರೆಲ್ಲರೂ ಸೇರಿ ರಾಜಸ್ಥಾನ್‌ ವಿರುದ್ಧ ಉರುಳಿಸಿದ್ದು ಮೂರೇ ವಿಕೆಟ್‌. ಆದರೆ ತವರಿನ ಟ್ರ್ಯಾಕ್‌ನಲ್ಲಿ ಬೌಲಿಂಗ್‌ ಯೂನಿಟ್‌ ಮಿಂಚಬಲ್ಲದೆಂಬ ಆಶಾವಾದ ತಂಡದ್ದು.

ಡೆಲ್ಲಿ ಲಕ್‌ ತಿರುಗೀತೇ?
ಡೆಲ್ಲಿ ಕಳೆದ ಪಂದ್ಯದಲ್ಲಿ ಲಕ್ನೋವನ್ನು ಅವರದೇ ಅಂಗಳದಲ್ಲಿ ಮಣಿಸಿದ ಉತ್ಸಾಹದಲ್ಲಿದೆ. ಇದರಿಂದ ತಂಡದ ಲಕ್‌ ತಿರುಗೀತೇ ಎಂಬುದೊಂದು ನಿರೀಕ್ಷೆ. ಆಸ್ಟ್ರೇಲಿಯದ ಬಿಗ್‌ ಹಿಟ್ಟರ್‌ ಜೇಕ್‌ ಫ್ರೆàಸರ್‌ ಮೆಕ್‌ಗರ್ಕ್‌ ಈ ಪಂದ್ಯದಲ್ಲಿ ಸ್ಮರಣೀಯ ಪದಾರ್ಪಣೆ ಮಾಡಿರುವುದು ಡೆಲ್ಲಿ ಪಾಲಿಗೊಂದು ವರದಾನ. ಚೇಸಿಂಗ್‌ ವೇಳೆ 55 ರನ್‌ ಬಾರಿಸಿದ್ದು ಮೆಕ್‌ಗರ್ಕ್‌ ಪಾಲಿನ ಹೆಗ್ಗಳಿಕೆ. ಆದರೆ ಆರಂಭಕಾರ ಡೇವಿಡ್‌ ವಾರ್ನರ್‌ ಸಿಡಿದು ನಿಲ್ಲಬೇಕಾದ ಅಗತ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next