Advertisement

IPL 2024: ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟ… ಮೇ 26ಕ್ಕೆ ಚೆನ್ನೈ ನಲ್ಲಿ ಫೈನಲ್

06:37 PM Mar 25, 2024 | Team Udayavani |

ಮುಂಬಯಿ: IPL 2024 ಋತುವಿನ 2 ನೇ ಹಂತದ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆ ಮಾಡಿದೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಹಿಂದೆ ಮೊದಲಾರ್ಧದ ಐಪಿಎಲ್​ನ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿತ್ತು ಅದರ ಮುಂದುವರೆದ ಭಾಗವಾಗಿ ಇಂದು 74 ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.

Advertisement

ಇದರೊಂದಿಗೆ ಮೇ 26ರ ಭಾನುವಾರದಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

ಐಪಿಎಲ್ 2024 ರ ಕ್ವಾಲಿಫೈಯರ್ 1 ಮೇ 21 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದರೆ, ಎಲಿಮಿನೇಟರ್ ಪಂದ್ಯ ಕೂಡ ಮೇ 22 ರಂದು ಇದೇ ಮೈದಾನದಲ್ಲಿ ಅಂದರೆ ಅಹಮದಾಬಾದ್‌ನಲ್ಲಿ ನಡೆಯಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯ ಮೇ 24 ರಂದು ಚೆನ್ನೈನಲ್ಲಿ ನಡೆಯಲಿದೆ.

ಮೊದಲ ವೇಳಾಪಟ್ಟಿಯಲ್ಲಿ ಮಾರ್ಚ್​ 22 ರಿಂದ ಏಪ್ರಿಲ್ 7 ರವರೆಗಿನ ವೇಳಾಪಟ್ಟಿ ಪ್ರಕಟವಾಗಿತ್ತು, ಎರಡನೇ ಹಂತದ ವೇಳಾಪಟ್ಟಿಯಂತೆ ಮೊದಲ ಪಂದ್ಯಾಟ ಏಪ್ರಿಲ್ ೮ ರಂದು ಆರಂಭವಾಗಲಿದ್ದು ಅದರಂತೆ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next