Advertisement
ಇದೊಂದು ಸಣ್ಣ ಮೊತ್ತದ ಪಂದ್ಯವಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಸರಿಯಾಗಿ 20 ಓವರ್‌ಗಳಲ್ಲಿ 128ಕ್ಕೆ ಕುಸಿದರೆ, ಕೋಲ್ಕತಾ 18.4 ಓವರ್‌ಗಳಲ್ಲಿ 4 ವಿಕೆಟಿಗೆ 129 ರನ್ ಬಾರಿಸಿತು.
ಬ್ರೆಟ್ ಲೀ ಕೂಟದ ಪ್ರಥಮ ಎಸೆತದಲ್ಲೇ ಉನ್ಮುಕ್¤ ಚಂದ್ ಅವರನ್ನು ಬೌಲ್ಡ್ ಮಾಡಿ ಕೆಕೆಆರ್‌ಗೆ ಅಮೋಘ ಆರಂಭವಿತ್ತರು. ಇಲ್ಲಿಂದ ಮುಂದೆ ಡೇವಿಡ್ ವಾರ್ನರ್ (21) ಮತ್ತು ಮಾಹೇಲ ಜಯವರ್ಧನೆ (66) ಸೇರಿಕೊಂಡು ತಂಡಕ್ಕೆ ಆಸರೆ ಒದಗಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ವಾರ್ನರ್ ಪೆವಿಲಿಯನ್ ಸೇರಿಕೊಂಡ ಬಳಿಕ ಆಡಲು ಬಂದವರ್ಯಾರೂ ಕ್ರೀಸ್ ಆಕ್ರಮಿಸಿಕೊಳ್ಳಲಿಲ್ಲ. ಯಾರಿಂದಲೂ ಎರಡಂಕೆಯ ಗಳಿಕೆ ಸಾಧ್ಯವಾಗಲಿಲ್ಲ. ಹೀಗಾಗಿ ಜಯವರ್ಧನೆ ಏಕಾಂಗಿ ಹೋರಾಟ ನಡೆಸಬೇಕಾಯಿತು. ಅವರು ಈ ಪಂದ್ಯದ ಏಕೈಕ ಅರ್ಧ ಶತಕ ಬಾರಿಸಿದರೆಂಬುದೇ ಡೆಲ್ಲಿ ಪಾಲಿನ ಸಮಾಧಾನಕರ ಸಂಗತಿ. ಜಯವರ್ಧನೆ ಹಾಗೂ ವಾರ್ನರ್ ಅವರ ಒಟ್ಟು ಮೊತ್ತವನ್ನು ಹೊರತುಪಡಿಸಿದರೆ ಡೆಲ್ಲಿಯ ಉಳಿದ ಆಟಗಾರರಿಂದ ಸಂದಾಯವಾದ ಗಳಿಕೆ ಬರೀ 36 ರನ್! ಮಿಸ್ಟರಿ ಸ್ಪಿನ್ನರ್ ಸುನೀಲ್ ನಾರಾಯಣ್ ಕೇವಲ 13 ರನ್ನಿಗೆ 4 ವಿಕೆಟ್ ಉಡಾಯಿಸಿ ಡೆಲ್ಲಿಯನ್ನು ಕಾಡಿದರು. ಈ ಸಾಹಸಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.
Related Articles
ಚೇಸಿಂಗ್ ವೇಳೆ ಕೆಕೆಆರ್ ಮಾನ್ವಿಂದರ್ ಬಿಸ್ಲಾ (4) ಅವರನ್ನು ಬೇಗನೇ ಕಳೆದುಕೊಂಡಿತಾದರೂ ಯಾವುದೇ ಒತ್ತಡಕ್ಕೆ ಸಿಲುಕಿಲ್ಲಿ. ಸಣ್ಣ ಟಾರ್ಗೆಟ್ ಎದುರಿದ್ದುದರಿಂದ ಡೆಲ್ಲಿ ಬೌಲರ್‌ಗಳೂ ಅಸಹಾಯಕರಾಗಿದ್ದರು.
Advertisement
ಗೌತಮ್ ಗಂಭೀರ್ ಸರ್ವಾಧಿಕ 41, ಕ್ಯಾಲಿಸ್ ಮತ್ತು ಮನೋಜ್ ತಿವಾರಿ ತಲಾ 23 ರನ್ ಹೊಡೆದರು.
ಸ್ಕೋರ್ಪಟ್ಟಿಡೆಲ್ಲಿ ಡೇರ್‌ಡೆವಿಲ್ಸ್
ಉನ್ಮುಕ್¤ ಚಂದ್ ಬಿ ಲೀ 0
ಡೇವಿಡ್ ವಾರ್ನರ್ ಸಿ ಕ್ಯಾಲಿಸ್ ಬಿ ನಾರಾಯಣ್ 21
ಮಾಹೇಲ ಜಯವರ್ಧನೆ ಸಿ ನಾರಾಯಣ್ ಬಿ ಲೀ 66
ಮನ್‌ಪ್ರೀತ್ ಜುನೇಜ ಸಿ ಶುಕ್ಲ ಬಿ ಬಾಲಾಜಿ 8
ನಮನ್ ಓಜಾ ಸಿ ಲೀ ಬಿ ಭಾಟಿಯ 9
ಜೊಹಾನ್ ಬೋಥ ಎಲ್‌ಬಿಡಬ್ಲ್ಯು ಭಾಟಿಯ 7
ಇರ್ಫಾನ್ ಪಠಾಣ್ ಸಿ ತಿವಾರಿ ಬಿ ನಾರಾಯಣ್ 4
ಆ್ಯಂಡ್ರೆ ರಸೆಲ್ ಸಿ ಮತ್ತು ಬಿ ನಾರಾಯಣ್ 4
ಶಾಬಾಜ್ ನದೀಂ ರನೌಟ್ 4
ಆಶಿಷ್ ನೆಹ್ರಾ ಸಿ ಶುಕ್ಲ ಬಿ ನಾರಾಯಣ್ 0
ಉಮೇಶ್ ಯಾದವ್ ಔಟಾಗದೆ 0
ಇತರ 5
ಒಟ್ಟು (20 ಓವರ್‌ಗಳಲ್ಲಿ ಆಲೌಟ್) 128
ವಿಕೆಟ್ ಪತನ: 1-0, 2-44, 3-59, 4-79, 5-88, 6-97, 7-113, 8-125, 9-128.
ಬೌಲಿಂಗ್:
ಬ್ರೆಟ್ ಲೀ 4-0-40-2
ಜಾಕ್ ಕ್ಯಾಲಿಸ್ 3-0-23-0
ಲಕ್ಷ್ಮೀಪತಿ ಬಾಲಾಜಿ 4-0-20-1
ಸುನೀಲ್ ನಾರಾಯಣ್ 4-0-13-4
ರಜತ್ ಭಾಟಿಯ 4-0-23-2
ಲಕ್ಷ್ಮೀರತ್ ಶುಕ್ಲ 1-0-8-0 ಕೋಲ್ಕತಾ ನೈಟ್‌ರೈಡರ್
ಮಾನ್ವಿಂದರ್ ಬಿಸ್ಲಾ ಸಿ ಚಂದ್ ಬಿ ನೆಹ್ರಾ 4
ಗೌತಮ್ ಗಂಭೀರ್ ಎಲ್‌ಬಿಡಬ್ಲ್ಯು ಬೋಥ 41
ಜಾಕ್ ಕ್ಯಾಲಿಸ್ ಸಿ ಚಂದ್ ಬಿ ನದೀಂ 23
ಮನೋಜ್ ತಿವಾರಿ ಸಿ ಓಜಾ ಬಿ ವನದೀಂ 23
ಇಯಾನ್ ಮಾರ್ಗನ್ ಔಟಾಗದೆ 14
ಯೂಸುಫ್ ಪಠಾಣ್ ಔಟಾಗದೆ 18
ಇತರ 6
ಒಟ್ಟು (18.4 ಓವರ್‌ಗಳಲ್ಲಿ 4 ವಿಕೆಟಿಗೆ) 129
ವಿಕೆಟ್ ಪತನ: 1-5, 2-52, 3-93, 4-99.
ಬೌಲಿಂಗ್:
ಇರ್ಫಾನ್ ಪಠಾಣ್ 2-1-15-0
ಆಶಿಷ್ ನೆಹ್ರಾ 3-0-20-1
ಉಮೇಶ್ ಯಾದವ್ 3-0-23-0
ಶಾಬಾಜ್ ನದೀಂ 4-0-22-2
ಜೊಹಾನ್ ಬೋಥ 3.4-0-22-1
ಆ್ಯಂಡ್ರೆ ರಸೆಲ್ 3-0-24-0 ಪಂದ್ಯಶ್ರೇಷ್ಠ: ಸುನೀಲ್ ನಾರಾಯಣ್