Advertisement

ಐಪಿಎಲ್‌: ಪ್ರಸಾರಕರ ಅಸಮಾಧಾನ?

08:50 AM Jul 21, 2020 | mahesh |

ಹೊಸದಿಲ್ಲಿ: ಈ ವರ್ಷದ ಐಪಿಎಲ್‌ ಪಂದ್ಯಾವಳಿಯ ಸಂಭಾವ್ಯ ದಿನಾಂಕವೊಂದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಶ್ವದ ಈ ಶ್ರೀಮಂತ ಕ್ರಿಕೆಟ್‌ ಲೀಗ್‌ ಸೆ. 26ರಿಂದ ನ. 8ರ ತನಕ 44 ದಿನಗಳ ಕಾಲ ಯುಎಇಯಲ್ಲಿ ನಡೆಯಲಿದೆ ಎನ್ನಲಾಗಿದೆ. ಆದರೆ ಈ ದಿನಾಂಕದ ಕುರಿತು ಸ್ಟಾರ್‌ ನ್ಪೋರ್ಟ್ಸ್ ಅಸಮಾಧಾನಗೊಂಡಿದೆ ಎಂದು ತಿಳಿದು ಬಂದಿದೆ.

Advertisement

ಐಪಿಎಲ್‌ ಪಂದ್ಯಾವಳಿಯನ್ನು ನ. 8ಕ್ಕೆ ಕೊನೆಗೊಳಿಸುವ ಬದಲು ಇನ್ನೂ ಒಂದು ವಾರ ಮುಂದುವರಿಸಿ ನ. 14ರ ತನಕ ನಡೆಸಬೇಕು ಎಂಬುದು ಸ್ಟಾರ್‌ ನ್ಪೋರ್ಟ್ಸ್ ಕೋರಿಕೆಯಾಗಿದೆ. ಇದಕ್ಕೆ ಕಾರಣ, ದೀಪಾವಳಿ. ಈ ವರ್ಷದ ಬೆಳಕಿನ ಹಬ್ಬ ನ. 14ಕ್ಕೆ ಬರಲಿದ್ದು, ಅಂದು ಶನಿವಾರ ಆಗಿರುತ್ತದೆ. ವಾರಾಂತ್ಯ ಹಾಗೂ ಇದರ ಹಿಂದಿನ ದಿನಗಳಲ್ಲಿ ರಜೆ ಇರುವುದರಿಂದ ಪಂದ್ಯವನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಿರುತ್ತದೆ, ಆರ್ಥಿಕವಾಗಿ ಇದು ಹೆಚ್ಚು ಲಾಭ ದಾಯಕ ಎಂಬುದು ಸ್ಟಾರ್‌ ವಾಹಿನಿಯ ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next