Advertisement

IPL ಬ್ರ್ಯಾಂಡ್‌ ಮೌಲ್ಯ ಭಾರೀ ಏರಿಕೆ; ಅಸಾಧಾರಣ ಬೆಳವಣಿಗೆ

12:23 AM Dec 15, 2023 | Team Udayavani |

ಮುಂಬಯಿ: ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಐಪಿಎಲ್‌ನ ಬ್ರ್ಯಾಂಡ್‌ ಮೌಲ್ಯವು 2023ರಲ್ಲಿ ಶೇಕಡಾ 28ರಷ್ಟು ಏರಿಕೆಯಾಗಿದ್ದು 10.7 ಬಿಲಿಯನ್‌ ಅಮೆರಿಕನ್‌ ಡಾಲರ್‌ ತಲುಪಿದೆ. 2022ರಲ್ಲಿ ಈ ಮೌಲ್ಯವು 8.4 ಬಿಲಿಯನ್‌ ಡಾಲರ್‌ ಇತ್ತು. ಬ್ರ್ಯಾಂಡ್‌ ಫೈನಾನ್ಸ್‌ ವರದಿಯಂತೆ ಈ ಭಾರೀ ಏರಿಕೆ ಕಂಡು ಬಂದಿದೆ. 2008ರಲ್ಲಿ ಐಪಿಎಲ್‌ ಆರಂಭವಾದ ಬಳಿಕ ಐಪಿಎಲ್‌ನ ಬ್ರ್ಯಾಂಡ್‌ ಮೌಲ್ಯವು ಶೇಕಡಾ 433ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

Advertisement

2009ರಿಂದ ಐಪಿಎಲ್‌ನ ಬ್ರ್ಯಾಂಡ್‌ ಮೌಲ್ಯವನ್ನು ಬ್ರ್ಯಾಂಡ್‌ ಫೈನಾನ್ಸ್‌ ಲೆಕ್ಕಾಚಾರ ಮಾಡುತ್ತಿದೆ. ಮಾಧ್ಯಮ ಹಕ್ಕುಗಳ ಒಪ್ಪಂದದಿಂದ 6.2 ಬಿಲಿಯನ್‌ (48,390 ಕೋಟಿ ರೂ.), ಐಪಿಎಲ್‌ ಆದಾಯದ ಕೇಂದ್ರಗಳ ವಿಸ್ತರಣೆ ಸೇರಿದಂತೆ ಹಲವಾರು ಅಂಶಗಳಿಂದಾಗಿ ಈ ಅಸಾಧಾರಣ ಬೆಳವಣಿಗೆ ಆಗಿದೆ ಎನ್ನಲಾಗಿದೆ. ಎರಡು ಫ್ರಾಂಚೈಸಿ ತಂಡಗಳ ಸೇರ್ಪಡೆ ಮತ್ತು 2023ರಲ್ಲಿ ಕ್ರೀಡಾಂಗಣಗಳಲ್ಲಿ ಪೂರ್ಣ ಹಾಜರಾತಿ ಇರುವುದು ಕೂಡ ಐಪಿಎಲ್‌ನ ಆರ್ಥಿಕ ಸ್ಥಿತಿ ಅಭಿವೃದ್ಧಿಯಾಗಲು ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next