Advertisement
ದೇಶ-ವಿದೇಶದ ಕಿರಿಯ, ಹಿರಿಯ ಕ್ರಿಕೆಟಿಗರು ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಒಟ್ಟು 332 ಕ್ರಿಕೆಟಿಗರು ಹರಾಜು ಪಟ್ಟಿಯಲ್ಲಿದ್ದಾರೆ.
ಹರಾಜಿನಲ್ಲಿ ಭಾರತೀಯ ಕ್ರಿಕೆಟಿಗರು ಪ್ರಮುಖ ಆಕರ್ಷಣೆಯಾಗಿದ್ದಾರೆ. ದೇಶಿ ಕೂಟಗಳಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ ಕ್ರಿಕೆಟಿಗರನ್ನು ಈಗಾಗಲೇ ವಿವಿಧ ತಂಡಗಳ ಫ್ರಾಂಚೈಸಿ ಮಾಲಕರು ಗಮನದಲ್ಲಿಟ್ಟುಕೊಂಡಿದ್ದಾರೆ. ಭರವಸೆಯ ಕ್ರಿಕೆಟಿಗರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
Related Articles
Advertisement
ಆಸೀಸ್ ಕ್ರಿಕೆಟಿಗರ ದಂಡುಆಸ್ಟ್ರೇಲಿಯ ಕ್ರಿಕೆಟಿಗರ ಮೇಲೆ ವಿವಿಧ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಕಮಿನ್ಸ್, ಹ್ಯಾಜಲ್‌ವುಡ್, ಲಿನ್, ಮಿಚೆಲ್ ಮಾರ್ಷ್, ಮ್ಯಾಕ್ಸ್‌ವೆಲ್ ಖರೀದಿಗೆ ಫ್ರಾಂಚೈಸಿಗಳು ಹೆಚ್ಚಿನ ಒಲವು ತೋರಿಸುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್, ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಹರಾಜಿನಲ್ಲಿರುವ ಪ್ರಮುಖ ತಾರಾ ಕ್ರಿಕೆಟಿಗರು. ಇವರೆಲ್ಲರೂ 2 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಹೆಟ್‌ಮೈರ್‌ಗೆ ಕೋಟಿ ನಿರೀಕ್ಷೆ
ವಿಂಡೀಸಿನ ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರನ್ ಹೆಟ್‌ಮೈರ್‌ಗೆ ಬಲೆ ಬೀಸಲು ಫ್ರಾಂಚೈಸಿಗಳಿಂದ ಪೈಪೋಟಿ ನಡೆಯುವ ನಿರೀಕ್ಷೆ ಇದೆ. 22 ವರ್ಷದ ವಿಂಡೀಸ್ ಕ್ರಿಕೆಟಿಗ ಕಳೆದ ಆವೃತ್ತಿಯಲ್ಲಿ ಆರ್‌ಸಿಬಿಯಲ್ಲಿದ್ದರು. ಆದರೆ ಕ್ಲಿಕ್ ಆಗಿರಲಿಲ್ಲ. ಹೆಟ್‌ಮೈರ್ ಮೂಲಬೆಲೆ 50 ಲಕ್ಷ ರೂ. ಈಗಿನ ಫಾರ್ಮ್ ನೋಡಿ ಆರ್‌ಸಿಬಿ ಕೂಡ ಹೆಟ್‌ಮೈರ್ ಖರೀದಿಗೆ ಪ್ರಯತ್ನ ನಡೆಸುವ ಸಾಧ್ಯತೆ ಇದೆ. ವಿಂಡೀಸ್ ಬೌಲರ್ ಕೆಸ್ರಿಕ್ ವಿಲಿಯಮ್ಸ್ 50 ಲಕ್ಷ ರೂ. ಮೂಲ ಬೆಲೆ ಹೊಂದಿದ್ದು, ಹರಾಜಿನಲ್ಲಿರುವ ಪ್ರಮುಖ ತಾರೆ. ಕೆಕೆಆರ್ ತಂಡದಿಂದ ಹೊರಬಿದ್ದಿರುವ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಹರಾಜಿನಲ್ಲಿರುವ ತಾರಾ ಆಟಗಾರರಲ್ಲಿ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ. 14 ವರ್ಷದ ಬಾಲಕ ಆಕರ್ಷಣೆ
ಹರಾಜಿನಲ್ಲಿರುವ ಅತ್ಯಂತ ಕಿರಿಯ ವಯಸ್ಸಿನ ಕ್ರಿಕೆಟಿಗರೆಂದರೆ ಅಫ್ಘಾನಿಸ್ಥಾದ ಬಾಲಕ ನೂರ್ ಅಹ್ಮದ್. ಅವರಿಗೆ ವಯಸ್ಸು ಕೇವಲ 14 ವರ್ಷ, 350 ದಿನ. ಸ್ಪಿನ್ ಬೌಲರ್ ಆಗಿರುವ ನೂರ್ ಅಹ್ಮದ್ 30 ಲಕ್ಷ ರೂ. ಮೂಲ ಬೆಲೆ ಹೊಂದಿದ್ದಾರೆ. ಅವರು ಅಂಡರ್-19 ಪಂದ್ಯದಲ್ಲಿ ಭಾರತ ವಿರುದ್ಧ 9 ವಿಕೆಟ್ ಕಬಳಿಸಿ ಸುದ್ದಿಯಾಗಿದ್ದರು. ಉಳಿದಂತೆ ಅಫ್ಘಾನ್‌ನ ರಶೀದ್ ಖಾನ್, ಮೊಹಮ್ಮದ್ ನಬಿ ಕೂಡ ಹರಾಜಿನಲ್ಲಿರುವ ಹಾಟ್ ಫೇವರಿಟ್‌ಗಳಾಗಿದ್ದಾರೆ.