Advertisement

ಐಪಿಎಲ್‌ ಬೆಟ್ಟಿಂಗ್‌: 13 ಆರೋಪಿಗಳು ವಶಕ್ಕೆ

04:48 PM Sep 29, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಐಪಿಎಲ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪತ್ಯೇಕ ಸ್ಥಳಗಳಲ್ಲಿ ದಾಳಿ ನಡೆಸಿದ ಪೊಲೀಸರು 13 ಆರೋಪಿಗಳನ್ನುವಶಕ್ಕೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ.

Advertisement

ಖಚಿತ ಮಾಹಿತಿ ಆಧರಿಸಿ ಬಾಳೆಹೊನ್ನೂರು ಪೊಲೀಸರು ಠಾಣಾವ್ಯಾಪ್ತಿಯ ದೋಬಿಹಳ್ಳ ಎಂಬಲ್ಲಿದಾಳಿ ನಡೆಸಿದ್ದು, ಈ ವೇಳೆ ಬೆಟ್ಟಿಂಗ್‌ದಂಧೆಯಲ್ಲಿ ನಿರತರಾಗಿದ್ದ ರವಿ, ಸಚಿನ್‌,ಸಲೀಂ, ಮಂಜು, ಸಂತೋಷ್‌, ಸಂದೀಪ್‌ ಸೇರಿದಂತೆ 10 ಮಂದಿಯನ್ನು ಬಂಸಿದ್ದಾರೆ.

ದಂಧೆಗೆ ಬಳಿ ಸಿದ್ದ 17ಸಾವಿರ ರೂ.ನಗದು, 1 ಮೊಬೈಲ್‌ ಅನ್ನು ಪೊಲೀಸರುವಶಕ್ಕೆ ಪಡೆದಿದ್ದಾರೆ.ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯ ಅಡ್ಡಾ ಒಂದರ ಮೇಲೆ ದಾಳಿ ನಡೆಸಿದ ನಗರ ಠಾಣೆಪೊಲೀಸರು ದಂಧೆಯಲ್ಲಿ ತೊಡಗಿದ್ದಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ 21 ಸಾವಿರ ರೂ.ನಗದು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾಎಸ್ಪಿ ಎಂ.ಎಚ್‌.ಅಕ್ಷಯ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next