Advertisement

ಸೆಪ್ಟಂಬರ್‌-ನವೆಂಬರ್‌ನಲ್ಲಿ ಐಪಿಎಲ್‌: ಬಿಸಿಸಿಐ ಯೋಜನೆ

02:25 AM May 21, 2020 | Sriram |

ಹೊಸದಿಲ್ಲಿ: ಎಲ್ಲವೂ ಸಾಂಗವಾಗಿ ಸಾಗಿದ್ದೇ ಆದರೆ ಇನ್ನು 4 ದಿನಗಳಲ್ಲಿ 13ನೇ ಐಪಿಎಲ್‌ ಪಂದ್ಯಾವಳಿಯ ಫೈನಲ್‌ ಹಣಾಹಣಿ ನಡೆಯಬೇಕಿತ್ತು. ಆದರೆ ಕೋವಿಡ್‌-19 ಕಾರಣದಿಂದ ವಿಶ್ವದ ಈ ಶ್ರೀಮಂತ ಕ್ರಿಕೆಟ್‌ ಲೀಗ್‌ ಇನ್ನೂ ಅನಿಶ್ಚಿತತೆಯಲ್ಲೇ ಇದೆ. ಬಿಸಿಸಿಐ ಮಾತ್ರ ಇದನ್ನು ಹೇಗಾದರೂ ನಡೆಸಬೇಕೆಂಬ ಭಾರೀ ಉಮೇದಿನಲ್ಲಿದೆ.

Advertisement

ಇದೀಗ ಕ್ರಿಕೆಟ್‌ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ಬಿಸಿಸಿಐ ಮೂಲ ದಿಂದ ಹೊರಹೊಮ್ಮಿದೆ. ಕೋವಿಡ್‌-19 ಹಾವಳಿ ನಿಯಂತ್ರಣಕ್ಕೆ ಬಂದರೆ ಸೆ.25ರಿಂದ ನವೆಂಬರ್‌ ಒಂದರ ಅವಧಿಯಲ್ಲಿ ಐಪಿಎಲ್‌ ನಡೆಸುವ ಯೋಜನೆಯೊಂದು ಮಂಡಳಿಯ ಮುಂದಿದೆ ಎಂಬುದಾಗಿ ವರದಿಯಾಗಿದೆ. ಕ್ರಿಕೆಟ್‌ ನಿಯಂ ತ್ರಣ ಮಂಡಳಿಯಲ್ಲಿ ಬುಧ ವಾರ ನಡೆದ ಬೆಳವಣಿಗೆಯಲ್ಲಿ ಇದು ತಿಳಿದು ಬಂದಿದೆ.

“ಇದನ್ನು ಈಗಲೇ ಹೇಳುವುದು ಅವಸರದ ಕ್ರಮವಾಗುತ್ತದೆ. ದೇಶವಿನ್ನೂ ಸಂಕಟದಿಂದ ಪಾರಾಗಿಲ್ಲ. ಆದರೆ ಬಿಸಿಸಿಐ ಈ ವರ್ಷವೇ ಐಪಿಎಲ್‌ ನಡೆಸುವ ಬಗ್ಗೆ ಇನ್ನೂ ಆಶಾವಾದ ಹೊಂದಿದೆ. ಇದಕ್ಕೆ ಸೆ. 25-ನ. ಒಂದರ ವರೆಗೆ ದಿನಾಂಕವನ್ನೂ ನಿಗದಿಗೊಳಿಸಿದೆ. ಆದರೆ ಕೋವಿಡ್‌-19 ನಿಯಂತ್ರಣಕ್ಕೆ ಬಂದು, ಸೋಂಕು ಪೀಡಿತರದ ಸಂಖ್ಯೆ ಕಡಿಮೆಯಾಗಿ, ಕೇಂದ್ರ ಹಸಿರು ನಿಶಾನೆ ನೀಡಿದರೆ ಮಾತ್ರ ಇದು ಸಾಧ್ಯ…’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಐಪಿಎಲ್‌ ಫ್ರಾಂಚೈಸಿಯೊಂದನ್ನು ಸಂಪರ್ಕಿಸಿ ದಾಗ ಅದು ಕೂಡ ಈ ದಿನಾಂಕಕ್ಕೆ ಸಹಮತ ವ್ಯಕ್ತಪಡಿಸಿದೆ ಎನ್ನಲಾಗಿದೆ.ಅಡ್ಡಿಯಾಗಿದೆ ಟಿ20 ವಿಶ್ವಕಪ್‌ಆದರೆ ಇಲ್ಲಿ ಇನ್ನೊಂದು ದೊಡ್ಡ ಸಮಸ್ಯೆ ಇದೆ. ಅ. 18ರಿಂದ ನ. 15ರ ತನಕ ಆಸ್ಟ್ರೇಲಿಯದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿ ನಡೆ ಯಲಿಕ್ಕಿದೆ. ಇದು ಸಕಾಲದಲ್ಲಿ ನಡೆದರೆ ಆಗ ಐಪಿಎಲ್‌ ಆಯೋಜನೆ ಸಾಧ್ಯವಾಗದು. ಈವರೆಗೆ ಟಿ20 ವಿಶ್ವಕಪ್‌ ಪಂದ್ಯಾವಳಿ ಮುಂದೂ ಡಲ್ಪಡುವ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ಹೊರಬಿದ್ದಿಲ್ಲ.

ಟಿ20 ವಿಶ್ವಕಪ್‌ ಈ ವರ್ಷ ಅಸಾಧ್ಯ: ಗಾಯಕ್ವಾಡ್‌
ಆಸ್ಟ್ರೇಲಿಯ ಆತಿಥ್ಯದ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಈ ವರ್ಷ ನಡೆಯುವ ಸಾಧ್ಯತೆ ಇಲ್ಲ ಎಂದು ಮಾಜಿ ಆರಂಭಕಾರ, ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ನ ಸದಸ್ಯ ಅಂಶುಮಾನ್‌ ಗಾಯಕ್ವಾಡ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ನಾವು ಈವರೆಗೆ ಐಪಿಎಲ್‌ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಇದೆಲ್ಲವೂ ಭಾರತದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದರೆ ಟಿ20 ವಿಶ್ವಕಪ್‌ ಪಂದ್ಯಾವಳಿ ಮಾತ್ರ ಈ ವರ್ಷ ನಡೆಯುವ ಸಂಭವವಿಲ್ಲ…’ ಎಂದು ಗಾಯಕ್ವಾಡ್‌ ಹೇಳಿದರು.

“ಕೋವಿಡ್‌-19 ವೈರಸ್‌ ನಿಯಂತ್ರಣಕ್ಕೆ ಬಂದ ಬಳಿಕ ಕ್ರಿಕೆಟ್‌ ಹಿಂದಿನಂತೆ ಇರಲು ಸಾಧ್ಯವಿಲ್ಲ. ವೀಕ್ಷಕರಿಗೆ ಪ್ರವೇಶ ಇಲ್ಲದಿರಬಹುದು. ಆಟಗಾರರು ವೀಕ್ಷಕರ ಗೈರಲ್ಲಿ ಆಡಲು ಇಷ್ಟಪಡದಿರಬಹುದು. ಬಹಳ ಕಠಿನ ಸನ್ನಿವೇಶ ಎದುರಾಗಲಿದೆ. ನೀವು ಮಾನಸಿಕ ದೃಢತೆಯನ್ನು ಹೊಂದಿಲ್ಲದೇ ಹೋದರೆ ಇದನ್ನೆಲ್ಲ ಸ್ವೀಕರಿಸುವುದು ಖಂಡಿತ ಕಷ್ಟ…’ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next