Advertisement

ಫೆ. 18ಕ್ಕೆ ಐಪಿಎಲ್‌ ಹರಾಜು: ಬಿಸಿಸಿಐ

12:42 AM Jan 23, 2021 | Team Udayavani |

ಹೊಸದಿಲ್ಲಿ: ಈ ವರ್ಷದ ಐಪಿಎಲ್‌ ಪಂದ್ಯಾವಳಿಗಾಗಿ ಆಟಗಾರರ ಹರಾಜು ಫೆ. 18ರಂದು ನಡೆಯುವ ಸಾಧ್ಯತೆ ಇದೆ ಎಂಬುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

Advertisement

“ಐಪಿಎಲ್‌ ಕ್ರಿಕೆಟಿಗರ ಹರಾಜು ಫೆ. 18ರಂದು ನಡೆಸಲು ನಿರ್ಧರಿಸಲಾಗಿದೆ. ಆದರೆ ಇದಿನ್ನೂ ಅಧಿಕೃತಗೊಂಡಿಲ್ಲ. ಹಾಗೆಯೇ ಸ್ಥಳವನ್ನೂ ನಿರ್ಧರಿ ಸಲಾಗಿಲ್ಲ’ ಎಂಬುದಾಗಿ ಬಿಸಿಸಿಐ ಅಧಿಕಾರಿ ಹೇಳಿದರು.

ಹರಾಜಿಗಿಂತ  ಮೊದಲು ಈ  ಬಾರಿಯ  ಐಪಿಎಲ್‌ ಎಲ್ಲಿ, ಯಾವಾಗ ನಡೆಯಲಿದೆ ಎಂಬುದು ಇತ್ಯರ್ಥ ವಾಗಬೇಕಿದೆ. ಇದನ್ನು ಭಾರತದಲ್ಲೇ ನಡೆಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿರುವುದು ಉಲ್ಲೇಖನೀಯ. ಆಗ ವೀಕ್ಷಕರಿಗೆ ಪ್ರವೇಶ ಇರಲಿ ದೆಯೇ ಎಂಬುದು ಮತ್ತೂಂದು ಪ್ರಶ್ನೆ. ಪ್ರವಾಸಿ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಗೆ ವೀಕ್ಷಕರಿಗೆ ಪ್ರವೇಶ ನೀಡುವುದಾದರೆ ಆಗ ಐಪಿಎಲ್‌ ಬಾಗಿಲು ಕೂಡ ಪ್ರೇಕ್ಷಕರಿಗೆ ತೆರೆಯಲಿದೆ ಎಂಬುದೊಂದು ಲೆಕ್ಕಾಚಾರ.

ಐಪಿಎಲ್‌ ಫ್ರಾಂಚೈಸಿಗಳಿಂದ ಆಟಗಾರರನ್ನು ಕೈಬಿಡುವ ಹಾಗೂ ಉಳಿಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಆಟಗಾರರ “ಟ್ರೇಡಿಂಗ್‌’ಗೆ ಫೆ. 4 ಅಂತಿಮ ದಿನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next