Advertisement

ಐಪಿಎಲ್‌ ಹರಾಜು: ಮಾರಾಟವಾಗದೇ ಉಳಿದ ವಿಶ್ವವಿಖ್ಯಾತರ ತಂಡ ಪ್ರಕಟ!

11:43 PM Dec 21, 2019 | Team Udayavani |

ಕೋಲ್ಕತಾ: ಐಪಿಎಲ್‌ ಹರಾಜು ಪ್ರಕ್ರಿಯೆ ಈಗಾಗಲೇ ಮುಗಿದಿದೆ. ವಿದೇಶಿಗರ ಹಾಗೂ ಭಾರತದ ಯುವ ಕ್ರಿಕೆಟಿಗರತ್ತ ಫ್ರಾಂಚೈಸಿಗಳು ಒಲವು ತೋರಿದ್ದು ಈ ಬಾರಿಯ ವಿಶೇಷ.

Advertisement

ಹಾಗೆಯೇ ಸ್ಟಾರ್‌ ಕ್ರಿಕೆಟಿಗರನೇಕರು ಮಾರಾಟವಾಗದೇ ಉಳಿಯುವ ಮೂಲಕವೂ ಈ ಸಲದ ಐಪಿಎಲ್‌ ಹರಾಜು ಸುದ್ದಿಯಾಗಿದೆ. ಅಮೋಘ ಫಾರ್ಮ್ನಲ್ಲಿರುವ ವೆಸ್ಟ್‌ ಇಂಡೀಸ್‌ ಆರಂಭಕಾರ ಶೈ ಹೋಪ್‌, ಎವಿನ್‌ ಲೆವಿಸ್‌, ಸ್ಫೋಟಕ ಆಲ್‌ರೌಂಡರ್‌ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ನಮ್ಮದೇ ದೇಶದ ಯೂಸುಫ್ ಪಠಾಣ್‌ ಮೊದಲಾದವರನ್ನೆಲ್ಲ ಯಾರೂ ಕೊಳ್ಳಲಿಲ್ಲ!

ಇಂಥ 11 ಮಂದಿ ಆಟಗಾರರ “ಅನ್‌ಸೋಲ್ಡ್‌ ಇಲೆವೆನ್‌’ ಒಂದು ಪ್ರಕಟಗೊಂಡಿದೆ. ಮುಂದೆ ನಡುವಲ್ಲಿ ಐಪಿಎಲ್‌ನಿಂದ ಹೊರಹೋಗುವವರ ಸ್ಥಾನಕ್ಕೆ ಇವರು ಬರಬಹುದಾದರೂ ಸದ್ಯದ ಮಟ್ಟಿಗೆ ಇವರು ಮಾರಾಟವಾಗದೇ ಉಳಿದದ್ದೇ ಒಂದು ಅಚ್ಚರಿ.

ಅನ್‌ಸೋಲ್ಡ್‌ ಇಲೆವೆನ್‌: ಮಾರ್ಟಿನ್‌ ಗಪ್ಟಿಲ್‌, ಎವಿನ್‌ ಲೆವಿಸ್‌, ಅಲೆಕ್ಸ್‌ ಹೇಲ್ಸ್‌, ಕಾಲಿನ್‌ ಇನ್‌ಗಾÅಮ್‌, ಶೈ ಹೋಪ್‌, ಬೆನ್‌ ಕಟಿಂಗ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಆ್ಯಡಂ ಝಂಪ, ಟಿಮ್‌ ಸೌಥಿ, ನೂರ್‌ ಅಹ್ಮದ್‌, ಅಲ್ಜಾರಿ ಜೋಸೆಫ್.

Advertisement

Udayavani is now on Telegram. Click here to join our channel and stay updated with the latest news.

Next