ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ತಯಾರಿ ಜೋರಾಗಿದೆ. ಈ ಬಾರಿ ಮತ್ತೆರಡು ಹೆಚ್ಚುವರಿ ತಂಡಗಳು ಆಡಲಿದ್ದು, ಆಟಗಾರರ ಮೆಗಾ ಹರಾಜು ನಡೆಯಲಿದೆ. ಫೆ.12 ಮತ್ತು 13ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ನಡೆಯಲಿದೆ.
ಹರಾಜಿನಲ್ಲಿ ಪಾಲ್ಗೊಳ್ಳುವ ಆಟಗಾರರ ಅಂತಿಮ ಪಟ್ಟಿಯನ್ನು ಮಂಗಳವಾರ ಅಂತಿಮಗೊಳಿಸಲಾಗಿದೆ. ಒಟ್ಟು 590 ಮಂದಿ ಆಟಗಾರರು ಈ ಬಾರಿಯ ಹರಾಜಿನಲ್ಲಿ ಭಾಗವಹಿಸುತ್ತಿದ್ದಾರೆ.
90 ಆಟಗಾರರ ಪೈಕಿ 228 ಮಂದಿ ಕ್ಯಾಪ್ಡ್ ಮತ್ತು 355 ಮಂದಿ ಅನ್ ಕ್ಯಾಪ್ಡ್ ಆಟಗಾರರಿದ್ದಾರೆ. ಏಳು ಮಂದಿ ಅಸೋಸಿಯೇಟ್ ದೇಶದ ಅಟಗಾರರು ಅಂತಿಮ ಕಣದಲ್ಲಿದ್ದಾರೆ. ಪಟ್ಟಿಯಲ್ಲಿ 370 ಭಾರತೀಯರು ಮತ್ತು 220 ವಿದೇಶಿ ಆಟಗಾರರ ಹೆಸರು ಅಂತಿಮವಾಗಿದೆ. ಎರಡು ಕೋಟಿ ಮೂಲ ಬೆಲೆ ಹೊಂದಿರುವ 48 ಆಟಗಾರರು, 1.5 ಕೋಟಿ ರೂ. ಮೂಲಬೆಲೆ ಹೊಂದಿರುವ 20 ಆಟಗಾರರು ಮತ್ತು ಒಂದು ಕೋಟಿ ಮೂಲಬೆಲೆ ಹೊಂದಿರುವ 34 ಮಂದಿ ಆಟಗಾರರ ಹೆಸರು ಅಂತಿಮವಾಗಿದೆ.
ಇದನ್ನೂ ಓದಿ:ಅಫ್ಘಾನ್ ವಿರುದ್ಧ ಪ್ರಯಾಸದ ಗೆಲುವು: ಫೈನಲ್ ತಲುಪಿದ ಇಂಗ್ಲೆಂಡ್ ಅಂಡರ್ 19 ತಂಡ
17 ಮಂದಿ ಭಾರತೀಯ ಆಟಗಾರರು ಎರಡು ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. 31 ಮಂದಿ ವಿದೇಶಿ ಆಟಗಾರರು ಎರಡು ಕೋಟಿ ರೂ. ಮೂಲಬೆಲೆ ನಿಗದಿ ಮಾಡಿದ್ದಾರೆ. ಎರಡು ಕೋಟಿ ಮೂಲ ಬೆಲೆ ಹೊಂದಿರುವ ಭಾರತೀಯ ಆಟಗಾರರ ಪಟ್ಟಿ ಇಲ್ಲಿದೆ:
1 ರವಿಚಂದ್ರನ್ ಅಶ್ವಿನ್
2 ಶಿಖರ್ ಧವನ್
3 ಶ್ರೇಯಸ್ ಅಯ್ಯರ್
4 ಮೊಹಮ್ಮದ್ ಶಮಿ
5 ದೇವದತ್ ಪಡಿಕ್ಕಲ್
6 ಸುರೇಶ್ ರೈನಾ
7 ರಾಬಿನ್ ಉತ್ತಪ್ಪ
8 ಕೃನಾಲ್ ಪಾಂಡ್ಯ
9 ಹರ್ಷಲ್ ಪಟೇಲ್
10 ದಿನೇಶ್ ಕಾರ್ತಿಕ್
11 ಇಶಾನ್ ಕಿಶನ್
12 ಅಂಬಟಿ ರಾಯುಡು
13 ದೀಪಕ್ ಚಹಾರ್
14 ಭುವನೇಶ್ವರ್ ಕುಮಾರ್
15 ಶಾರ್ದೂಲ್ ಠಾಕೂರ್
16 ಉಮೇಶ್ ಯಾದವ್
17 ಯುಜುವೇಂದ್ರ ಚಾಹಲ್