ಕೋಲ್ಕತ್ತಾ: ವರ್ಣರಂಜಿತ ಟಿ ಟ್ವೆಂಟಿ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ನ 2020ರ ಆವೃತ್ತಿಗೆ ಇನ್ನು ಕೆಲವೇ ತಿಂಗಳಷ್ಟೇ ಬಾಕಿ ಇದೆ. ಈ ಆವೃತ್ತಿಯ ಹರಾಜಿಗೆ ಇನ್ನು ಒಂದು ವಾರ ಬಾಕಿ ಇರುವಾಗ ಬಿಸಿಸಿಯ ಹರಾಜಿನ ಅಂತಿಮ ಪಟ್ಟಿನ ಸಿದ್ದ ಮಾಡಿದೆ.
ಈ ಮೊದಲು ಹರಾಜಿಗೆ 971 ಮಂದಿ ತಮ್ಮ ಹೆಸರು ನೋಂದಾಯಿಸಿದ್ದರು. ಈಗ ಬಿಸಿಸಿಐ ಅದನ್ನು ಇದಕ್ಕೆ ಕತ್ತರಿ ಹಾಕಿದ್ದು ಅಂತಿಮವಾಗಿ 332 ಆಟಗಾರರು ಹರಾಜು ಕಣದಲ್ಲಿ ಉಳಿದಿದ್ದಾರೆ.
ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಖಾಲಿ ಇರುವ 73 ಜಾಗಗಳಿಗೆ ಹರಾಜು ನಡೆಯಲಿದೆ.
ವಿಂಡೀಸ್ ನ ಕೆಸ್ರಿಕ್ ವಿಲಿಯಮ್ಸ್, ಬಾಂಗ್ಲಾದೇಶದ ಮುಶ್ಫಿಕರ್ ರೆಹೀಂ, ಆಸೀಸ್ ಆಡಂ ಜಾಂಪಾ ಹೆಚ್ಚುವರಿಯಾಗಿ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.
73 ಆಟಗಾರರಲ್ಲಿ ಗರಿಷ್ಟ 29 ವಿದೇಶಿ ಆಟಗಾರರಿಗೆ ಅವಕಾಶವಿದೆ. ಇದರಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್, ಡೇಲ್ ಸ್ಟೇನ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್ ವುಡ್, ಆಂಜಲೋ ಮ್ಯಾಥ್ಯೂಸ್ ಸ್ಥಾನ ಪಡೆಯುವ ನಿರೀಕ್ಷೆಯಿದೆ.
ಭಾರತೀಯ ಆಟಗಾರರ ಪೈಕಿ ರಾಬಿನ್ ಉತ್ತಪ್ಪ ಅತೀ ಹೆಚ್ಚು ಮೂಲ ಬೆಲೆ ಹೊಂದಿದ್ದ (1.5 ಕೋಟಿ), ಜಯದೇವ್ ಉನಾದ್ಕತ್ ಒಂದು ಕೋಟಿ ಮೂಲಬೆಲೆ ಘೋಷಿಸಿದ್ದಾರೆ.