Advertisement

ಐಪಿಎಲ್ ಹರಾಜು: ಪ್ಯಾಟ್ ಕಮಿನ್ಸ್ ಗೆ ದೊಡ್ಡ ಮೊತ್ತ, ಉತ್ತಪ್ಪ ರಾಜಸ್ಥಾನದತ್ತ

09:53 AM Dec 20, 2019 | Team Udayavani |

ಕೋಲ್ಕತ್ತಾ: ವರ್ಣರಂಜಿತ ಕ್ರೀಡಾಕೂಟ ಐಪಿಎಲ್ ನ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಕೋಲ್ಕತ್ತಾದ ಖಾಸಗಿ ಹೋಟೆಲ್ ನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಮುಗಿಬಿದ್ದಿದ್ದಾರೆ.

Advertisement

ಬಿಡ್ಡಿಂಗ್ ನ ಆರಂಭಿಕ ಆಟಗಾರ ಕ್ರಿಸ್ ಲಿನ್ ಮುಂಬೈ ಇಂಡಿಯನ್ಸ್ ಪಾಲಾದರು. ಮೂಲ ಬೆಲೆ ಎರಡು ಕೋಟಿ ಕ್ರಿಸ್ ಪಾಲಿಗಾಯಿತು.

ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಕೋಲ್ಕತ್ತಾ ಪಾಲದರು. ಮಾರ್ಗನ್ ಗೆ 5.25 ಕೋಟಿ ನೀಡಿ ಶಾರುಖ್ ಒಡೆತನದ ತಂಡ ಖರೀದಿಸಿತು.

ಕನ್ನಡಿಗ ರಾಬಿನ್ ಉತ್ತಪ್ಪ  ರಾಜಸ್ಥಾನ ರಾಯಲ್ಸ್ ಪಾಲಾದರು. ಉತ್ತಮ 3 ಕೋಟಿ ಪಡೆದರು.

ಜೇಸನ್ ರಾಯ್ 1ಕೋಟಿ 50 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು.

Advertisement

ಆಸೀಸ್ ಆಟಗಾರ ಆರೋನ್ ಫಿಂಚ್ ಭಾರಿ ಪೈಪೋಟಿಯ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದರು. ಫಿಂಚ್ ರನ್ನು 4.40 ಕೋಟಿ ಕೊಟ್ಟು ಆರ್ ಸಿ ಬಿ ಖರೀದಿಸಿತು.

ಗ್ಲೆನ್ ಮ್ಯಾಕ್ಸ ವೆಲ್ ಗೆ ಭಾರಿ ಬೇಡಿಕೆ ಕಂಡು ಬಂತು. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಭಾರಿ ಪೈಪೋಟಿ ನಡೆಸಿದವು. ಅಂತಿಮವಾಗಿ 10.75 ಕೋಟಿಗೆ ಪಂಜಾಬ್ ಪಾಲಾದರು.

ಈ ವರ್ಷದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾದ ಪ್ಯಾಟ್ ಕಮಿನ್ಸ್ ಭಾರಿ ಬೆಲೆಗೆ ಮಾರಾಟವಾದರು. ಆಸೀಸ್ ಬೌಲರ್ ಗೆ ಆರ್ ಸಿ ಬಿ ಮತ್ತು ಡೆಲ್ಲಿ ತಂಡಗಳು ಭಾರಿ ಪೈಪೋಟಿ ನೀಡಿದವು .ನಂತರ ಕೊನೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಯಾಟ್ ಕಮಿನ್ಸ್ ರನ್ನು 15.5 ಕೋಟಿ ಕೊಟ್ಟು ಖರೀದಿಸಿತು.

ಆಲ್ ರೌಂಡರ್ ಸ್ಯಾಮ್ ಕರ್ರನ್ 5.5 ಕೋಟಿ ಗೆ ಚೆನ್ನೈ ಪಾಲಾದರು.

ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ ಹತ್ತು ಕೋಟಿಗೆ ಬೆಂಗಳೂರು ತಂಡದ ಪಾಲಾದರು.

Advertisement

Udayavani is now on Telegram. Click here to join our channel and stay updated with the latest news.

Next