Advertisement
ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಸಿಡಿಸಿದ ಶತಕ, ಇವರಿಬ್ಬರು ದಾಖಲಿಸಿದ ದ್ವಿಶತಕದ ಜತೆಯಾಟದ ಸಾಹಸದಿಂದ ಚೆನ್ನೈ ಎದುರಿನ ಪಂದ್ಯದಲ್ಲಿ ಗುಜರಾತ್ 3 ವಿಕೆಟಿಗೆ 231 ರನ್ ರಾಶಿ ಹಾಕಿತು. ಇದು ಗುಜರಾತ್‌ನ 2ನೇ ಅತ್ಯಧಿಕ ಗಳಿಕೆ. ಚೆನ್ನೈ ವಿರುದ್ಧ ಪೇರಿಸಲ್ಪಟ್ಟ ಅತ್ಯಧಿಕ ಮೊತ್ತದ ಜಂಟಿ ದಾಖಲೆ. 2014ರ ಕಟಕ್ ಪಂದ್ಯದಲ್ಲಿ ಪಂಜಾಬ್ 4ಕ್ಕೆ 231 ರನ್ ಮಾಡಿತ್ತು.
Related Articles
Advertisement
ಪ್ರಚಂಡ ಜತೆಯಾಟಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ಟೈಟಾನ್ಸ್‌ಗೆ ಸಾಯಿ ಸುದರ್ಶನ್ ಮತ್ತು ಶುಭ ಮನ್ ಗಿಲ್ ಪ್ರಚಂಡ ಆರಂಭವಿತ್ತರು. ಮಿಚೆಲ್ ಸ್ಯಾಂಟ್ನರ್ ಎಸೆದ ಮೊದಲ ಓವರ್‌ನಲ್ಲೇ 14 ರನ್ ಸೋರಿಹೋಯಿತು. ಇಬ್ಬರೂ ಸೇರಿಕೊಂಡು ಹತ್ತರ ಸರಾಸರಿ ಕಾಯ್ದುಕೊಂಡು ದಾಪುಗಾಲಿಕ್ಕಿದರು.
ಪವರ್ ಪ್ಲೇಯಲ್ಲಿ 58 ರನ್ ಒಟ್ಟು ಗೂಡಿತು. 9.3 ಓವರ್‌ಗಳಲ್ಲಿ ಶತಕದ ಜತೆಯಾಟ ಪೂರ್ತಿಗೊಂಡಿತು. 10 ಓವರ್ ಅಂತ್ಯಕ್ಕೆ ಸ್ಕೋರ್ 107ಕ್ಕೆ ಏರಿತು. ಮೊದ ಲಾರ್ಧ ದಲ್ಲಿ ಚೆನ್ನೈ 6 ಮಂದಿ ಬೌಲರ್‌ಗಳನ್ನು ದಾಳಿ ಗಿಳಿಸಿ ತಾದರೂ ಗುಜರಾತ್‌ನ ಆರಂಭಿಕರನ್ನು ಬೇರ್ಪಡಿ ಸಲು ಸಾಧ್ಯ ವಾಗಲಿಲ್ಲ. ರವೀಂದ್ರ ಜಡೇಜ ಅವರಂತೂ ಬಹಳ ದುಬಾರಿ ಯಾದರು. ದ್ವಿತೀಯಾರ್ಧದಲ್ಲಿ ಗಿಲ್-ಸುದರ್ಶನ್ ಜೋಡಿಯ ಬ್ಯಾಟಿಂಗ್ ಇನ್ನಷ್ಟು ಬಿರುಸು ಪಡೆಯಿತು. ಸಿಮ್ರನ್‌ಜಿàತ್ ಸಿಂಗ್ ಚೆನ್ನಾಗಿ ದಂಡಿಸಿಕೊಂಡರು. 12.4 ಓವರ್‌ಗಳಲ್ಲಿ ಗುಜರಾತ್ ಮೊತ್ತ ನೂರೈವತ್ತರ ಗಡಿ ದಾಟಿತು. 15 ಓವರ್ ಮುಕ್ತಾಯಕ್ಕೆ 190 ರನ್ ಆಗಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ಕೇವಲ 41 ರನ್ ನೀಡುವ ಮೂಲಕ ಚೆನ್ನೈ ನಿಯಂತ್ರಣ ಸಾಧಿಸಿತು. ಸಾಯಿ ಸಾವಿರ ರನ್
ಈ ಬ್ಯಾಟಿಂಗ್ ಅಬ್ಬರದ ವೇಳೆ ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಸಾವಿರ ರನ್ ಪೂರ್ತಿಗೊಳಿಸಿದರು. ಇದಕ್ಕಾಗಿ ಅವರು ತೆಗೆದುಕೊಂಡದ್ದು 25 ಇನ್ನಿಂಗ್ಸ್. ಈ ಲೆಕ್ಕಾಚಾರದಲ್ಲಿ ಅವರಿಗೆ ಮ್ಯಾಥ್ಯೂ ಹೇಡನ್ ಜತೆ ಜಂಟಿ 3ನೇ ಸ್ಥಾನ. ಶಾನ್ ಮಾರ್ಷ್ (21 ಇನ್ನಿಂಗ್ಸ್) ಮತ್ತು ಲೆಂಡ್ಲ್ ಸಿಮನ್ಸ್ (23 ಇನ್ನಿಂಗ್ಸ್) ಮೊದಲೆರಡು ಸ್ಥಾನದಲ್ಲಿದ್ದಾರೆ. ದಾಖಲೆ ಜತೆಯಾಟ
ಸ್ಕೋರ್ 148ಕ್ಕೆ ಏರಿದಾಗ ಗುಜರಾತ್ ಪರ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ಸರ್ವಾಧಿಕ ರನ್ ಜತೆಯಾಟ ದಾಖಲಾಯಿತು. ಕಳೆದ ಋತುವಿನಲ್ಲಿ, ಇದೇ ಜೋಡಿ 147 ರನ್ ಪೇರಿಸಿದ ದಾಖಲೆ ಹಿಂದುಳಿಯಿತು.
ಈ ಜೋಡಿ ಚೆನ್ನೈ ವಿರುದ್ಧ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ದಾಖಲೆ ಜತೆಯಾಟ ನಡೆಸಿದ ಹೆಗ್ಗಳಿಕೆಗೂ ಪಾತ್ರವಾಯಿತು. 2015ರಲ್ಲಿ ರಾಜಸ್ಥಾನ್ ಆರಂಭಿಕರಾದ ರಹಾನೆ-ವಾಟ್ಸನ್ 144 ರನ್ ಒಟ್ಟುಗೂಡಿಸಿದ ದಾಖಲೆ ಪತನಗೊಂಡಿತು.