Advertisement

IPL 2025: ಇಲ್ಲಿದೆ ನೋಡಿ ಚೆನ್ನೈ ಸೂಪರ್‌ ಕಿಂಗ್ಸ್‌ ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿ

03:59 PM Oct 27, 2024 | Team Udayavani |

ಚೆನ್ನೈ: ಐಪಿಎಲ್‌ 2025ರ ಮೆಗಾ ಹರಾಜಿಗೆ ಸಿದ್ದತೆ ನಡೆಯುತ್ತಿರುವಂತೆ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೆನ್ಶನ್‌ ಪಟ್ಟಿಯನ್ನು ಅಂತಿಗೊಳಿಸುತ್ತಿವೆ. ತಮ್ಮಲ್ಲಿ ಉಳಿಸಿಕೊಳ್ಳಬೇಕಾದ ಆಟಗಾರರ ಪಟ್ಟಿಯನ್ನು ಇನ್ನು ಕೆಲವೇ ದಿನಗಳಲ್ಲಿ ಫ್ರಾಂಚೈಸಿಗಳು ಬಿಸಿಸಿಐಗೆ ಸಲ್ಲಿಸಬೇಕಾಗಿದೆ.

Advertisement

ಯಶಸ್ವಿ ಫ್ರಾಂಚೈಸಿಯಾದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡದಲ್ಲಿ ಮಹೇಂದ್ರ ಸಿಂಗ್‌ ಧೋನಿ (Mahendra Singh Dhoni) ತಂಡದಲ್ಲಿ ಉಳಿಯಲಿದ್ದಾರೆಯೇ, ಐಪಿಎಲ್‌ ಆಟ ಮುಂದುವರಿಸಲಿದ್ದಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ ಇನ್ನು ಕೆಲವು ಸೀಸನ್‌ ತನ್ನಲ್ಲಿ ಐಪಿಎಲ್‌ ಆಟ ಉಳಿದಿದೆ ಎಂದು ಧೋನಿ ಕಾರ್ಯಕ್ರಮವೊಂದರಲ್ಲಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದೀಗ ಸದ್ಯ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ರಿಟೆನ್ಶನ್‌ ಪಟ್ಟಿ ಅಂತಿಮಗೊಳಿಸಿದೆ ಎಂದು ವರದಿಯಾಗಿದೆ. ಧೋನಿ ಒಪ್ಪಿದರೆ ಅವರು ಅನ್‌ ಕ್ಯಾಪ್ಡ್‌ ಆಟಗಾರನಾಗಿ ಉಳಿಯಲಿದ್ದಾರೆ.

ಇತ್ತೀಚೆಗೆ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿ ಹೊಂದಿದ ಆಲ್‌ ರೌಂಡರ್‌ ರವೀಂದ್ರ ಜಡೇಜಾ ಅವರನ್ನು ಮೊದಲ ಆಯ್ಕೆಯಾಗಿ ಉಳಿಸಿಕೊಳ್ಳಲು ಸಿಎಸ್‌ ಕೆ ಬಯಸಿದೆ ಎಂದು ವರದಿ ಹೇಳಿದೆ.

Advertisement

ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ನಂ. 2 ಸ್ಥಾನದಲ್ಲಿ ರಿಟೆನ್ಶನ್‌ ಮಾಡಲು ಬಯಸಿದೆ. ವೇಗಿ ಮತೀಶ ಪತಿರಣ ಅವರನ್ನು ಮೂರನೇ ಆಯ್ಕೆಯಾಗಿ ಉಳಿಸಿಕೊಳ್ಳಲಿದೆ. ಉಳಿದಂತೆ ಶಿವಂ ದುಬೆ, ಡೆವೊನ್ ಕಾನ್ವೆ ಮತ್ತು ಸಮೀರ್ ರಿಜ್ವಿ ಅವರಲ್ಲಿ ಇಬ್ಬರು ಆಟಗಾರರನ್ನು ಫ್ರಾಂಚೈಸಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next