Advertisement

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

11:39 PM Mar 27, 2024 | Team Udayavani |

ಚೆನ್ನೈ: ಕಳೆದ ಐಪಿಎಲ್‌ ಹರಾಜಿನಲ್ಲಿ 8.4 ಕೋಟಿ ರೂ.ಗಳ ಬೃಹತ್‌ ಮೊತ್ತಕ್ಕೆ ಚೆನ್ನೈ ಪಾಲಾಗಿದ್ದ ಸಮೀರ್‌ ರಿಝ್ವಿ ಸದ್ದು ಮಾಡಲಾರಂಭಿಸಿದ್ದಾರೆ. ಐಪಿಎಲ್‌ನಲ್ಲಿ ತಾನೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿ ದಾಖಲೆ ಪುಟವನ್ನು ಸೇರಿದ್ದಾರೆ. ಅದೂ ರಶೀದ್‌ ಖಾನ್‌ ಎಸೆತಕ್ಕೆ!

Advertisement

“ನಿನ್ನ ಆಟದ ಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಬೇಡ ಎಂದು ಭೈಯ್ನಾ (ಧೋನಿ) ಸೂಚಿಸಿದ್ದರು. ಐಪಿಎಲ್‌ ನಲ್ಲಿ ಬ್ಯಾಟಿಂಗ್‌ ಕೌಶಲ ಮಾಮೂ ಲಾಗಿರುತ್ತದೆ, ಆದರೆ ಮನಸ್ಥಿತಿ ತುಸು ಬೇರೆ ಇರುತ್ತದೆ. ಇದಕ್ಕೆ ಹೊಂದಿ ಕೊಳ್ಳ ಬೇಕಾಗುತ್ತದೆ. ಯಾವುದೇ ಒತ್ತಡ ತಂದುಕೊಳ್ಳಬೇಡ, ನರ್ವಸ್‌ ಆಗಲೂ ಬೇಡ, ಪರಿಸ್ಥಿತಿಗೆ ತಕ್ಕಂತೆ ಆಡು ಎಂಬುದು ಧೋನಿ ಭೈಯ್ನಾ ನೀಡಿದ ಸಲಹೆ ಆಗಿತ್ತು’ ಎಂಬುದಾಗಿ ರಿಝ್ವಿ ಹೇಳಿದರು.

“ಹರಾಜಿನಲ್ಲಿ ನಾನು ಚೆನ್ನೈ ಪಾಲಾ ದಾಗ ಉಂಟಾದ ಖುಷಿ ಅಷ್ಟಿಷ್ಟಲ್ಲ. ನನಗೆ ಲಭಿಸಿದ ಮೊತ್ತಕ್ಕಿಂತ ಮಿಗಿಲಾಗಿ ಧೋನಿ ಭೈಯ್ನಾ ಅವರನ್ನು ಭೇಟಿಯಾಗುವ, ಅವರ ಜತೆ ಆಡುವ ಕನಸು ನನಸಾದುದಕ್ಕೆ ಹೆಚ್ಚು ಖುಷಿ ಆಗಿತ್ತು’ ಎಂಬುದಾಗಿ ಉತ್ತರಪ್ರದೇಶ ಕ್ರಿಕೆಟರ್‌ ಹೇಳಿದರು. 10 ಟಿ20 ಇನ್ನಿಂಗ್ಸ್‌ ಗಳಿಂದ 309 ರನ್‌ ಬಾರಿಸಿದ ಸಾಧನೆ ರಿಝ್ವಿ ಅವರದು. ಇದರಲ್ಲಿ 2 ಅರ್ಧ ಶತಕಗಳಿವೆ. ಸ್ಟ್ರೈಕ್‌ರೇಟ್‌ 137.33.

ತಮ್ಮ ಜೆರ್ಸಿ ಕುರಿತು ರಿಝ್ವಿ ಇದೇ ಸಂದರ್ಭದಲ್ಲಿ ಹೇಳಿಕೊಂಡರು. “ನನ್ನ ಜೆರ್ಸಿ ನಂಬರ್‌ ಕೂಡ 7. ಆದರೆ ಧೋನಿಯೇ ಇದರ ಮಾಲಿಕ. ಹೀಗಾಗಿ ನಾನಿದನ್ನು ಧರಿಸುವ ಹಾಗಿಲ್ಲ. ಇದರಿಂದ ಒಂದನೇ ನಂಬರ್‌ ಇಷ್ಟಪಟ್ಟೆ. ಇದೇ ಲಭಿಸಿತು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next