Advertisement
ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು 11 ಪಂದ್ಯಗಳಿಂದ ಎಂಟು ಅಂಕಗಳನ್ನು ಹೊಂದಿದೆ. ಇದೀಗ ಮತ್ತೆ ಆರ್ ಸಿಬಿಯ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ. ಹಾಗಾದರೆ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದ ನಂತರ ಆರ್ ಸಿಬಿ ಪ್ಲೇಆಫ್ ಗೆ ಹೇಗೆ ಅರ್ಹತೆ ಪಡೆಯಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
Related Articles
Advertisement
ಇದಲ್ಲದೆ, 10 ಅಂಕಗಳನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡಕ್ಕಿಂತ ಹೆಚ್ಚು ಗೆಲುವುಗಳನ್ನು ಪಡೆಯಬಾರದು. ಅದೇ ರೀತಿ, ಪಂಜಾಬ್ ಕಿಂಗ್ಸ್, 10 ಪಂದ್ಯಗಳಿಂದ ಎಂಟು ಅಂಕಗಳನ್ನು ಹೊಂದಿದ್ದು, ಮೂರಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಬಾರದು.
ಈ ಸನ್ನಿವೇಶಗಳನ್ನು ಆಡಿದರೆ, ಆರು ತಂಡಗಳು 14 ಅಂಕಗಳಲ್ಲಿ ಸಮನಾಗಿರುತ್ತವೆ, ಆಗ ನೆಟ್ ರನ್ ರೇಟ್ ಪ್ರಮುಖ ಪಾತ್ರ ವಹಿಸುತ್ತದೆ.
ಆರ್ ಸಿಬಿ ಒಂದು ಪಂದ್ಯದಲ್ಲಿ ಸೋತರೂ 12 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಪ್ರವೇಶಿಸುವ ಸಾಧ್ಯತೆಯಿದೆ. ಒಂದು ವೇಳೆ ಮೇಲೆ ತಿಳಿಸಿದ ತಂಡಗಳು 12 ಅಂಕಗಳಿಗಿಂತ ಹೆಚ್ಚು ಗಳಿಸಬಾರದು. ಆಗಲೂ ನೆಟ್ ರನ್ ರೇಟ್ ಪ್ರಮುಖ ಪಾತ್ರ ವಹಿಸಲಿದೆ.