ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ 2024 ಸರಣಿಗೆ ಶುಕ್ರವಾರ (ಮಾರ್ಚ್ 22) ಅದ್ದೂರಿ ಚಾಲನೆ ನೀಡಲಾಯಿತು. ಮೊದಲ ಮುಖಾಮುಖಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದ ಆರ್ ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಚೆಪಾಕ್‌ನಲ್ಲಿ ಅದ್ದೂರಿ ಸಂಗೀತ ಸಂಜೆಯೊಂದಿಗೆ ವರ್ಣರಂಜಿತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಾಲಿವುಡ್ ದಿಗ್ಗಜ ಅಕ್ಷಯ್ ಕುಮಾರ್ , ಯುವನಟ ಟೈಗರ್ ಶ್ರಾಫ್ ನೃತ್ಯ ಮನಸೂರೆಗೊಡರೆ, ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್, ಸ್ವರ ಮಾಂತ್ರಿಕ ಸೋನು ನಿಗಮ್ ಅವರ ಗಾಯನ ಕ್ರೀಡಾ ವೈಭವದ ಅದ್ದೂರಿ ಆರಂಭಕ್ಕೆ ಇಂಪು ತುಂಬಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿ.ಕೀ), ಕರ್ಣ್ ಶರ್ಮ, ಅಲ್ಜಾರಿ ಜೋಸೆಫ್, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್.
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿ.ಕೀ ), ದೀಪಕ್ ಚಹರ್, ಮಹೇಶ್ ತೀಕ್ಷಣ, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ.
ಆರ್ ಸಿಬಿ ಮತ್ತು ಚೆನ್ನೈ ಮೈದಾನದಲ್ಲಿ 31 ಬಾರಿ ಮುಖಾಮುಖಿಯಾಗಿದ್ದು, 20 ಗೆಲುವುಗಳೊಂದಿಗೆ ಚೆನ್ನೈ ಐತಿಹಾಸಿಕ ದಾಖಲೆ ಹೊಂದಿದೆ.