ಮುಂಬೈ: ಗುಜರಾತ್ ಟೈಟಾನ್ಸ್ ತಂಡವನ್ನು ಎರಡು ಬಾರಿ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಅವರು ಈ ಬಾರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿ ಅಚ್ಚರಿ ಮೂಡಿಸಿದ್ದರು. ಮುಂಬೈ ಫ್ರಾಂಚೈಸಿಯು ಅವರನ್ನೇ ನಾಯಕನಾಗಿ ಘೋಷಿಸಿದೆ. ಅಧಿಕೃತ ವರದಿಯ ಪ್ರಕಾರ ಮುಂಬೈ ಇಂಡಿಯನ್ಸ್ ತಂಡವು 15 ಕೋಟಿ ರೂ ಗೆ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿತ್ತು.
ಆದರೆ ಇದೀಗ ಮತ್ತೊಂದು ಆಘಾತಕಾರಿ ವಿಚಾರ ವರದಿಯಾಗಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಪಡೆಯಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಗುಜರಾತ್ ಟೈಟಾನ್ಸ್ ಗೆ ಸುಮಾರು 100 ಕೋಟಿ ರೂಪಾಯಿಗಳ ಭಾರಿ ವರ್ಗಾವಣೆ ಶುಲ್ಕವನ್ನು ಪಾವತಿಸಿದೆ ಎನ್ನಲಾಗಿದೆ.
ಗುಜರಾತ್ ಟೈಟಾನ್ಸ್ ಸಿವಿಸಿ ಕ್ಯಾಪಿಟಲ್ಸ್ ಒಡೆತನದಲ್ಲಿದೆ, ಇದು 10 ವರ್ಷಗಳ ಕಾಲ ಐಪಿಎಲ್‌ನ ಭಾಗವಾಗಿರಲು ಬಿಸಿಸಿಐಗೆ 5625 ಕೋಟಿ ರೂ ಪಾವತಿಸಿದೆ. ಒಂದು ವೇಳೇ ಪಾಂಡ್ಯ ವ್ಯಾಪಾರ ಒಪ್ಪಂದದಿಂದ ನೂರು ಕೋಟಿ ಗಳಿಸಿದ್ದರೆ, ಆ ಆದಾಯವು ಈ ಹಣಕಾಸು ವರ್ಷದ ಕೊನೆಯಲ್ಲಿ ಸಿವಿಸಿ ಕ್ಯಾಪಿಟಲ್ಸ್ ಬ್ಯಾಲೆನ್ಸ್ ಶೀಟ್ ನಲ್ಲಿ ಗೋಚರಿಸುತ್ತದೆ, ಇದು ಕಂಪನಿಯ ಮೌಲ್ಯಮಾಪನದಲ್ಲಿ ಸ್ಪೈಕ್ ಪಡೆಯಲು ಸಹಾಯ ಮಾಡುತ್ತದೆ.
ಗುಜರಾತ್ ಟೈಟಾನ್ಸ್ ಪೂರ್ಣ ತಂಡ: ಡೇವಿಡ್ ಮಿಲ್ಲರ್, ಶುಭಮನ್ ಗಿಲ್ (ನಾ), ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ. ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ, ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್, ಶಾರುಖ್ ಖಾನ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಮಾನವ್ ಸುತಾರ್, ಸ್ಪೆನ್ಸರ್ ಜಾನ್ಸನ್, ರಾಬಿನ್ ಮಿಂಜ್.