Advertisement

Speed; ಮೊದಲ ಐಪಿಎಲ್ ಪಂದ್ಯದಲ್ಲೇ ಶ್ರೇಷ್ಠ: ಭಯ ಹುಟ್ಟಿಸಿದ ಮಯಾಂಕ್ !

11:15 AM Mar 31, 2024 | Team Udayavani |

ಲಕ್ನೋ : ಇಲ್ಲಿನ ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂಜಾಬ್ ಕಿಂಗ್ಸ್ ತಂಡದ ವಿರುದ್ದ ಅಮೋಘ ಜಯದಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವೇಗಿ 21 ರ ಹರೆಯದ ಮಯಾಂಕ್ ಯಾದವ್ ತನ್ನ ಶರವೇಗದ ಬೌಲಿಂಗ್ ಮೂಲಕ ಬ್ಯಾಟ್ಸ್ ಮ್ಯಾನ್ ಗಳಲ್ಲಿ ನಡುಕ ಹುಟ್ಟಿಸಿದ್ದಾರೆ.

Advertisement

ಐಪಿಎಲ್ ಪದಾರ್ಪಣ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದ ಮಯಾಂಕ್ ಎಲ್ಲೆಡೆ ಸುದ್ದಿಯಾಗಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಮಯಾಂಕ್ ಯಾದವ್ ಅದ್ಭುತವಾದ ನಾಲ್ಕು ಓವರ್ ಎಸೆದದ್ದು ಪಂಜಾಬ್ ಕಿಂಗ್ಸ್ (PBKS) ತಂಡವನ್ನು 178ಕ್ಕೆ ನಿರ್ಬಂಧಿಸಿ ಲಕ್ನೋ ಸೂಪರ್ ಜೈಂಟ್ಸ್ (LSG) ಗೆ 21 ರನ್‌ಗಳ ಜಯ ತಂದಿಟ್ಟಿತು.

ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ಕೋಚ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಶ್ರೇಷ್ಠ ಆಟಗಾರ ಮೋರ್ನೆ ಮೊರ್ಕೆಲ್ ಅವರು ಯುವ ವೇಗಿ ಮಯಾಂಕ್ ಯಾದವ್ ಅವರನ್ನು “ಸೀರಿಯಸ್ ಹೀಟ್ “ನೊಂದಿಗೆ ಬೌಲಿಂಗ್ ಮಾಡಿ ಬ್ಯಾಟ್ಸ್ ಮ್ಯಾನ್ ಗಳಿಗೆ ಘಾಸಿಗೊಳಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಗಮನಾರ್ಹ ವಿಚಾರವೆಂದರೆ ಮಾಯಾಂಕ್ ಆಗಾಗ್ಗೆ 150 kmph ವೇಗದಲ್ಲಿ ಚೆಂಡನ್ನು ಎಸೆದಿದ್ದು, ಒಂದು ಎಸೆತವು 155-156 kmph ವೇಗವನ್ನು ಮುಟ್ಟಿತ್ತು. 4 ಓವರ್ ಗಳಲ್ಲಿ 27 ರನ್ ನೀಡಿ 3 ವಿಕೆಟ್ ಕಿತ್ತರು.

ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮೊರ್ಕೆಲ್ “ಗೆಲುವಿನಿಂದ ಸಂತೋಷವಾಗಿದೆ. ಬೌಲರ್‌ಗಳು ಅದಕ್ಕೆ ಅಂಟಿಕೊಂಡರು. ಮೊದಲ ಟೈಮ್‌ಔಟ್‌ನಲ್ಲಿ, ನಾನು ಬೌಲರ್‌ಗಳಿಗೆ ಆಟದಲ್ಲಿ ಉಳಿಯಲು ಹೇಳಿದೆ. ನಂತರ ಯುವ ವೇಗಿ ಮಯಾಂಕ್ ಗಂಭೀರವಾದ ಬೌಲಿಂಗ್ ಮಾಡಿ ವಿಕೆಟ್ ಪಡೆದರು. ಕಳೆದ ವರ್ಷ ಅವರಿಗೆ ಇದು ಕಠಿಣವಾಗಿತ್ತು. ಮೊದಲ ಅಭ್ಯಾಸ ಪಂದ್ಯದ ನಂತರ ಅವರು ಗಾಯಗೊಂಡಿದ್ದರು ಎಂದು ಹೇಳಿದರು.

Advertisement

ಮಯಾಂಕ್ ಎರಡು ಪ್ರಥಮ ದರ್ಜೆ ಪಂದ್ಯಗಳು, 17 ಲಿಸ್ಟ್-ಎ ಪಂದ್ಯಗಳು ಮತ್ತು 11 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ದೇಶೀಯ ಮಟ್ಟದಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ, 2021 ರಲ್ಲಿ ಅವರ ಲಿಸ್ಟ್-ಎ ಚೊಚ್ಚಲ ಮತ್ತು 2022 ರಲ್ಲಿ ಅವರ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವನ್ನು ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next