Advertisement

IPL 2024 ; ಕೊಹ್ಲಿ ಮುಡಿಗೆ ಆರೆಂಜ್ ಕ್ಯಾಪ್ :ಹರ್ಷಲ್ ಪರ್ಪಲ್ ಕ್ಯಾಪ್ ಹೊಸ ದಾಖಲೆ

12:12 AM May 27, 2024 | Team Udayavani |

ಚೆನ್ನೈ: ಐಪಿಎಲ್ 2024 ರ ಟ್ರೋಫಿಯನ್ನು ದಾಖಲೆ ಅಂತರದಿಂದ ಕೆಕೆಆರ್ ಮುಡಿಗೇರಿಸಿಕೊಂಡಿದ್ದು , ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಭವ ತೋರಿ ಅಮೋಘ ಆಟವಾಡಿದ ಆರ್ ಸಿಬಿ ದಿಗ್ಗಜ ವಿರಾಟ್ ಕೊಹ್ಲಿ 741 ರನ್ ಗಳಿಸಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ.

Advertisement

ಪಂಜಾಬ್ ಕಿಂಗ್ಸ್ ವೇಗಿ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ.ಎರಡನೇ ಬಾರಿ ಪರ್ಪಲ್ ಕ್ಯಾಪ್ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. 2021 ರಲ್ಲಿ ಆರ್ ಸಿಬಿ ಪರ ಆಡಿದಾಗ 32 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಗೆದ್ದಿದ್ದರು. ಈ ಬಾರಿ ಎರಡನೇ ಬಾರಿ ಗೆದ್ದು ಐಪಿಎಲ್ ಇತಿಹಾಸದ ಹೊಸ ದಾಖಲೆ ಬರೆದಿದ್ದಾರೆ. 14 ಪಂದ್ಯಗಳಲ್ಲಿ 24 ವಿಕೆಟ್ ಗಳನ್ನು(9.73 ಎಕಾನಮಿ) ಹರ್ಷಲ್ ಈ ಬಾರಿ ಕಿತ್ತಿದ್ದಾರೆ. ಕೆಕೆಆರ್ ನ ವರುಣ್ ಚಕ್ರವರ್ತಿ(21 ವಿಕೆಟ್) ಎರಡನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಬುಮ್ರಾ (20 ವಿಕೆಟ್) ಮೂರನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಅವರ ಬಳಿಕ ಚೆನ್ನೈ ಬ್ಯಾಟ್ಸ್ ಮ್ಯಾನ್ ರುತುರಾಜ್ ಗಾಯಕ್ ವಾಡ್ 583 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಆ ಬಳಿಕ ರಾಜಸ್ಥಾನ್ ರಾಯಲ್ಸ್ ನ ರಿಯಾನ್ ಪರಾಗ್ (573 ರನ್), ಸನ್ ರೈಸರ್ಸ್ ಹೈದರಾಬಾದ್ ನ ಟ್ರಾವಿಸ್ ಹೆಡ್ (567 ರನ್), ರಾಜಸ್ಥಾನ್ ರಾಯಲ್ಸ್ ನ ನಾಯಕ ಸಂಜು ಸ್ಯಾಮ್ಸನ್ (531 ರನ್ ), ಗುಜರಾತ್ ಟೈಟಾನ್ಸ್ ಆಟಗಾರ ಸಾಯಿ ಸುದರ್ಶನ್ (527ರನ್) ಲಕ್ನೋ ನಾಯಕ ಕೆ.ಎಲ್. ರಾಹುಲ್ (520 ರನ್) ಲಕ್ನೋದ ನಿಕೊಲಸ್ ಪೂರನ್ (499 ರನ್ ) ಕೆಕೆಆರ್ ನ ಸುನಿಲ್ ನಾರಾಯಣ್ (488 ರನ್ ) ಹೈದರಾಬಾದ್ ನ ಅಭಿಷೇಕ್ ಶರ್ಮ (484 ರನ್) ಅವರಿದ್ದಾರೆ.

ಐಪಿಎಲ್‌ ಬಹುಮಾನ ಮೊತ್ತ
ಒಟ್ಟು ಬಹುಮಾನ 46.5 ಕೋಟಿ ರೂ.
ಚಾಂಪಿಯನ್‌ 20 ಕೋಟಿ ರೂ.
ರನ್ನರ್ ಅಪ್‌ 13 ಕೋಟಿ ರೂ.
3ನೇ ಸ್ಥಾನ 7 ಕೋಟಿ ರೂ.
4ನೇ ಸ್ಥಾನ 6.5 ಕೋಟಿ ರೂ.
ಎಮರ್ಜಿಂಗ್‌ ಪ್ಲೇಯರ್‌ 20 ಲಕ್ಷ ರೂ.
ಆರೆಂಜ್‌ ಕ್ಯಾಪ್‌ 15 ಲಕ್ಷರೂ.
ಪರ್ಪಲ್‌ ಕ್ಯಾಪ್‌ 15 ಲಕ್ಷ ರೂ.

Advertisement

Udayavani is now on Telegram. Click here to join our channel and stay updated with the latest news.

Next