Advertisement

Sunrisers Hyderabad ವನಿಂದು ಹಸರಂಗ 3 ಪಂದ್ಯಗಳಿಗಿಲ್ಲ

12:07 AM Mar 20, 2024 | Team Udayavani |

ಕೊಲಂಬೊ: ಶ್ರೀಲಂಕಾದ ಟೆಸ್ಟ್‌ ತಂಡಕ್ಕೆ ಆಯ್ಕೆಯಾದ ಕಾರಣ ಶ್ರೀಲಂಕಾದ ಆಲ್‌ರೌಂಡರ್‌, ಸನ್‌ರೈಸರ್ ಹೈದರಾಬಾದ್‌ ತಂಡದ ಸದಸ್ಯ ವನಿಂದು ಹಸರಂಗ ಮೊದಲ 3 ಐಪಿಎಲ್‌ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

Advertisement

ಐಪಿಎಲ್‌ ಆರಂಭದ ದಿನದಂದೇ ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಟೆಸ್ಟ್‌ ಸರಣಿಯೂ ಆರಂಭಗೊಳ್ಳಲಿದ್ದು, ಎಪ್ರಿಲ್‌ 3ಕ್ಕೆ ಮುಗಿಯಲಿದೆ.

ಕಳೆದ ಆಗಸ್ಟ್‌ನಲ್ಲಿ ಟೆಸ್ಟ್‌ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದ ವನಿಂದು ಹಸರಂಗ ಅವರನ್ನು ಮರಳಿ ಕರೆಸಿಕೊಳ್ಳಲಾಗಿದೆ. 17 ಸದಸ್ಯರ ತಂಡದಲ್ಲಿ ನೂತನ ಸ್ಪಿನ್ನರ್‌ ನಿಶಾನ್‌ ಪೈರಿಸ್‌ ಕೂಡ ಸ್ಥಾನ ಪಡೆದಿದ್ದಾರೆ.

ಹೈದರಾಬಾದ್‌ ತನ್ನ ಮೊದಲ 3 ಪಂದ್ಯಗಳನ್ನು ಮಾ. 23 (ಕೆಕೆಆರ್‌), ಮಾ. 27 (ಮುಂಬೈ) ಮತ್ತು ಮಾ. 31ರಂದು (ಗುಜರಾತ್‌) ವಿರುದ್ಧ ಆಡಲಿದೆ. ಈ ಮೂರೂ ಪಂದ್ಯಗಳಲ್ಲಿ ಹಸರಂಗ ಆಡುವ ಸಾಧ್ಯತೆ ಇಲ್ಲ. ಎ. 5ರಂದು ಚೆನ್ನೈ ವಿರುದ್ಧದ ಪಂದ್ಯಕ್ಕೆ ಲಭ್ಯರಾಗುತ್ತಾರೋ ಎಂಬುದನ್ನು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next