Advertisement

IPL: ಲಕ್ನೋ ಬಿಟ್ಟು ಕೋಲ್ಕತ್ತಾ ಪಯಣ; ಮೆಂಟರ್‌ ಆಗಿ ಕೆಕೆಆರ್‌ಗೆ ಮರಳಿದ ಗಂಭೀರ್

12:41 PM Nov 22, 2023 | Team Udayavani |

ನವದೆಹಲಿ: ಭಾರತದ ಮಾಜಿ ಸ್ಟಾರ್‌ ಓಪನರ್‌ ಗೌತಮ್‌ ಗಂಭೀರ್‌ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್‌ ಸ್ಥಾನದಿಂದ ಕೆಳಗಿಳಿರುವುದಾಗಿ ಬುಧವಾರ(ನ.21 ರಂದು) ಹೇಳಿದ್ದಾರೆ.

Advertisement

ಕಳೆದ 2 ವರ್ಷಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್‌ ಆಗಿ ಕರ್ತವ್ಯ ನಿಭಾಯಿಸುತ್ತದ್ದ ಗೌತಮ್‌ ಗಂಭೀರ್‌ ಮತ್ತೆ ತನ್ನ ಹಳೆಯ ತಂಡವಾದ ಕೆಕೆಆರ್‌ ಗೆ ಮೆಂಟರ್‌ ಆಗಿ ಮರಳಿದ್ದಾರೆ.

ಐಪಿಎಲ್‌ ನಲ್ಲಿ ಕೆಕೆಆರ್‌ ತಂಡದ ಪರವಾಗಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಗೌತಮ್‌ ಗಂಭೀರ್ ಎರಡು ಬಾರಿ ಐಪಿಎಲ್‌ ಟ್ರೋಫಿಯನ್ನು ಎತ್ತಿದ್ದರು. 2011 ರಲ್ಲಿ ಕೆಕೆಆರ್‌ ಸೇರಿದ್ದ ಗೌತಮ್‌ ಗಂಭೀರ್‌ ತಂಡವನ್ನು ಎರಡು ಬಾರಿ ಚಾಂಪಿಯನ್‌ ಪಟ್ಟದ ಜೊತೆ, 5 ಬಾರಿ ಪ್ಲೇ ಆಫ್‌ ಪ್ರವೇಶ ಮಾಡಿಸಿದ್ದರು. ಇದಲ್ಲದೆ 2014 ರಲ್ಲಿ  ಚಾಂಪಿಯನ್ಸ್ ಲೀಗ್ T20 ಫೈನಲ್ ತಲುಪಿತ್ತು.

ಕೆ.ಎಲ್.‌ ರಾಹುಲ್‌ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್‌ ಆಗಿದ್ದ ಗೌತಮ್‌ ಗಂಭೀರ್‌, ಲಕ್ನೋ ತಂಡದಿಂದ ಹೊರಬಂದಿರುವ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

“ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗಿನ ಪಯಣವನ್ನು ಮುಗಿಸುತ್ತಿದ್ದೇನೆ. ಈ ಜರ್ನಿಯನ್ನು ಸ್ಮರಣೀಯವಾಗಿಸಿದ ಎಲ್ಲಾ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ನಾನು ಪ್ರೀತಿ ಮತ್ತು ಅಪಾರ ಕೃತಜ್ಞತೆಯನ್ನು ಸಲ್ಲಿಸುತ್ತೇನೆ” ಎಂದಿದ್ದಾರೆ.

Advertisement

“ಸ್ಪೂರ್ತಿದಾಯಕ ನಾಯಕತ್ವಕ್ಕಾಗಿ ಮತ್ತು ನನ್ನ ಎಲ್ಲಾ ಪ್ರಯತ್ನಗಳಿಗೆ  ಬೆಂಬಲ ನೀಡಿದ ಡಾ. ಸಂಜೀವ್ ಗೋಯೆಂಕಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ತಂಡವು ಭವಿಷ್ಯದಲ್ಲಿ ಅದ್ಭುತಗಳನ್ನು ಮಾಡುತ್ತದೆ ಮತ್ತು ಪ್ರತಿಯೊಬ್ಬ LSG ಅಭಿಮಾನಿಯನ್ನು ಹೆಮ್ಮೆಪಡುವಂತೆ ಮಾಡುತ್ತದೆ ಎನ್ನುವ ವಿಶ್ವಾಸ ನನಗಿದೆ. ಆಲ್ ದಿ ಬೆಸ್ಟ್ LSG ಬ್ರಿಗೇಡ್!” ಗಂಭೀರ್‌ ಬರೆದುಕೊಂಡಿದ್ದಾರೆ.

ಲಕ್ನೋ ತಂಡದ ಮುಖ್ಯ ತರಬೇತುದಾರಾಗಿದ್ದ ಆಂಡಿ ಫ್ಲವರ್ ಈ ವರ್ಷದ ಆರಂಭದಲ್ಲಿ ತಂಡದಿಂದ ಹೊರಬಂದಿದ್ದರು. ಅವರ ಸ್ಥಾನಕ್ಕೆ ಆಸ್ಟ್ರೇಲಿಯಾದ T20 ವಿಶ್ವಕಪ್ ವಿಜೇತ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ನೇಮಿಸಿದೆ.

ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಗಂಭೀರ್‌ ಮೆಂಟರ್‌ ಆಗಿ ಕೆಕೆಆರ್‌ ತಂಡದಲ್ಲಿ ಮುಂದಿನ ಸೀಸನ್‌ (2024 ರ ಐಪಿಎಲ್)‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next