Advertisement

IPL 2023: ರೀಸ್‌ ಟೋಪ್ಲೆ ಐಪಿಎಲ್‌ನಿಂದ ಹೊರಕ್ಕೆ-RCBಗೆ ಆಘಾತ

10:55 PM Apr 06, 2023 | Team Udayavani |

ಕೋಲ್ಕತಾ: ಭುಜದ ನೋವಿನಿಂದಾಗಿ ಇಂಗ್ಲೆಂಡಿನ ವೇಗ ರೀಸ್‌ ಟೋಪ್ಲೆ ಅವರು ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ. ಮುಂಬೈ ಇಂಡಿಯನ್ಸ್‌ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದ ವೇಳೆ ಟೋಪ್ಲೆ ಗಾಯಗೊಂಡಿದ್ದರು.

Advertisement

ಟೋಪ್ಲೆ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಮತ್ತು ಅವರ ಜಾಗಕ್ಕೆ ಬದಲಿ ಆಟಗಾರನನ್ನು ಶೀಘ್ರವೇ ಹೆಸರಿಸಲಾಗುವುದು ಎಂದು ಆರ್‌ಸಿಬಿಯ ಮುಖ್ಯ ಕೋಚ್‌ ಸಂಜಯ್‌ ಬಂಗಾರ್‌ ತಿಳಿಸಿದರು.

ಸ್ಟಾರ್‌ ಸ್ಪಿನ್ನರ್‌ ವನಿಂದು ಹಸರಂಗ ಅವರು ಏ.10ರಂದು ಹಾಗೂ ಆಸ್ಟ್ರೇಲಿಯದ ವೇಗಿ ಜೋಶ್‌ ಹೇಝಲ್‌ವುಡ್‌ ಏ.14ರಂದು ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಹೇಝಲ್‌ವುಡ್‌ ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next