Advertisement

IPL 2023: ನಿಧಾನಗತಿಯ ಓವರ್‌-ಹಾರ್ದಿಕ್‌ಗೆ ದಂಡದ ಬಿಸಿ

10:03 PM Apr 14, 2023 | Team Udayavani |

ಮೊಹಾಲಿ: ಪಂಜಾಬ್‌ ಕಿಂಗ್ಸ್‌ ಎದುರಿನ ಗುರುವಾರ ರಾತ್ರಿಯ ಪಂದ್ಯದಲ್ಲಿ ನಿಧಾನಗತಿಯ ಓವರ್‌ಗಾಗಿ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದು ಈ ಪಂದ್ಯಾವಳಿಯಲ್ಲಿ ಗುಜರಾತ್‌ ತಂಡಕ್ಕೆ ಬಿದ್ದ ಮೊದಲ ದಂಡದ ಬರೆ. ಐಪಿಎಲ್‌ ಪಂದ್ಯದ ಅವಧಿ 3 ಗಂಟೆ, 20 ನಿಮಿಷ. ಆದರೆ ಬಹುತೇಕ ಪಂದ್ಯಗಳು 4 ಗಂಟೆಗಳ ತನಕ ವಿಸ್ತರಿಸಲ್ಪಡುವುದು ಮಾಮೂಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next