Advertisement
ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿ 16.3 ಓವರ್‌ಗಳಲ್ಲಿ 101 ರನ್ನಿಗೆ ಆಲೌಟ್ ಆದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೂಟದಿಂದ ಹೊರಬಿತ್ತು. ಈ ಮೊದಲು ಮುಂಬೈ ಇಂಡಿಯನ್ಸ್ ತಂಡವು 8 ವಿಕೆಟಿಗೆ 182 ರನ್ ಗಳಿಸಿತ್ತು.
Related Articles
Advertisement
ಮೊದಲ ಮೂರು ಓವರ್ ಮುಗಿದಾಗ ತಂಡ 28 ರನ್ ಗಳಿಸಿತ್ತು. ಮುಂದಿನೆರಡು ಓವರ್‌ಗಳಲ್ಲಿ ಆರಂಭಿಕರು ಪೆವಿಲಿಯನ್ ಸೇರಿಕೊಂಡಾಗ ಮುಂಬೈ ಆಘಾತ ಅನುಭವಿಸಿತು. ನಾಯಕ ರೋಹಿತ್ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‌ಗೆ ಆಟ ಮುಗಿಸಿದರೆ ಇಶಾನ್ ಕಿಶನ್ ಮೂರು ಬೌಂಡರಿ ಬಾರಿಸಿದ್ದರು.
ಈ ಆಘಾತದಿಂದ ತಂಡವನ್ನು ಪಾರು ಮಾಡಲು ಸೂರ್ಯಕುಮಾರ್ ಯಾದವ್ ಮತ್ತು ಕ್ಯಾಮರಾನ್ ಗ್ರೀನ್ ಪ್ರಯತ್ನಪಟ್ಟರು. ಮೂರನೇ ವಿಕೆಟಿಗೆ ಅವರಿಬ್ಬರು 66 ರನ್ ಪೇರಿಸಿದರು. ಈ ಜೋಡಿ ಮುರಿದ ಬಳಿಕ ಲಕ್ನೋ ಮೇಲುಗೈ ಸಾಧಿಸಿತು. ನವೀನ್ ಉಲ್ ಹಕ್ ಮತ್ತು ಯಶ್ ಥಾಕೂರ್ ಅವರ ಅಮೋಘ ದಾಳಿಯಿಂದ ಮುಂಬೈಯ ರನ್‌ವೇಗಕ್ಕೆ ಕಡಿವಾಣ ಬಿತ್ತು ಮಾತ್ರವಲ್ಲದೇ ಕೆಲವು ವಿಕೆಟ್ ಉರುಳಿದವು. ನವೀನ್ ಉಲ್ ಹಕ್ 38 ರನ್ ನೀಡಿ 4 ವಿಕೆಟ್ ಉರುಳಿಸಿದರೆ ಯಶ್ ಥಾಕೂರ್ 34 ರನ್ನಿಗೆ 3 ವಿಕೆಟ್ ಪಡೆದರು.