Advertisement
ಎರಡೂ ತಂಡಗಳು 4 ಪಂದ್ಯಗಳಲ್ಲಿ ಮೂರನ್ನು ಗೆದ್ದು ಮೊದಲೆರಡು ಸ್ಥಾನ ಅಲಂಕರಿಸಿವೆ. ರನ್‌ರೇಟ್‌ನಲ್ಲಿ ಮುಂದಿರುವ ರಾಜಸ್ಥಾನ್ ಅಗ್ರಸ್ಥಾನದಲ್ಲಿದೆ. ಮತ್ತೆ ಮೇಲೇರುವ ಹಂಬಲ ಪಾಂಡ್ಯ ಪಡೆಯದ್ದು, ತವರಿನ ಅಂಗಳ ಲಾಭವಾಗಿ ಪರಿಣಮಿಸಬಹುದೆಂಬ ಲೆಕ್ಕಾಚಾರ ಗುಜರಾತ್ ತಂಡದ್ದು.
Related Articles
ಬಿಗ್ ಹಿಟ್ಟರ್‌ಗಳ ಲೆಕ್ಕಾಚಾರದಲ್ಲಿ ಎರಡೂ ತಂಡಗಳದ್ದು ಸಮಬಲದ ಸಾಮರ್ಥ್ಯ. ಆದರೆ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಅವರ ಸೊನ್ನೆಯ ನಂಟು ಬಿಗಿಯಾಗುತ್ತಿದೆ. ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಅವರು ಖಾತೆಯನ್ನೇ ತೆರೆದಿರಲಿಲ್ಲ. ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ಪಡಿಕ್ಕಲ್, ಹೆಟ್‌ಮೈರ್, ಹೋಲ್ಡರ್ ಅವರೆಲ್ಲ ರಾಜಸ್ಥಾನ್ ಬ್ಯಾಟಿಂಗ್ ಸರದಿಯ ಪ್ರಮುಖರು.
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳೇ ಸ್ಟಾರ್. ಅಶ್ವಿನ್, ಚಹಲ್, ಝಂಪ ದಾಳಿಯನ್ನು ನಿಭಾಯಿಸಿ ನಿಲ್ಲುವುದರಲ್ಲಿ ಗುಜರಾತ್ ಯಶಸ್ಸು ಅಡಗಿದೆ ಎನ್ನಬಹುದು.
Advertisement
ಪಾಂಡ್ಯ ಪರದಾಟಗುಜರಾತ್ ತಂಡದ ಏಕೈಕ ಸಮಸ್ಯೆಯೆಂದರೆ ನಾಯಕ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಫಾರ್ಮ್. ಆದರೆ ಅದೃಷ್ಟ ಗಟ್ಟಿಯಾಗಿದೆ. ಉಳಿದಂತೆ ಸಾಹಾ, ಗಿಲ್, ಸಾಯಿ ಸುದರ್ಶನ್, ಮಿಲ್ಲರ್, ತೆವಾಟಿಯಾ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಶಮಿ, ಮೋಹಿತ್ ಶರ್ಮ, ಅಲ್ಜಾರಿ ಜೋಸೆಫ್, ರಶೀದ್ ಖಾನ್, ಜೋಶುವ ಲಿಟ್ಲ ಅವರ ಬೌಲಿಂಗ್ ದಾಳಿ ಕೂಡ ಹರಿತವಾಗಿದೆ.