Advertisement

ಐಪಿಎಲ್ 2023: ವರ್ಣರಂಜಿತ ಚಾಲನೆ; ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

07:23 PM Mar 31, 2023 | Team Udayavani |

ಅಹಮದಾಬಾದ್‌ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ಐಪಿಎಲ್ 2023 ಭವ್ಯವಾದ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸುತ್ತಿದೆ.

Advertisement

ಅರ್ಜಿತ್ ಸಿಂಗ್ ಅವರ ಸುಶ್ರಾವ್ಯ ಸಂಗೀತ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ನಂತರ ಖ್ಯಾತ ನಟಿಯರಾದ ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದಣ್ಣ ಅವರಿಂದ ಡ್ಯಾನ್ಸ್ ಕ್ಯಾಮಿಯೋಗಳು ನಡೆದವು.

ಅಭಿಮಾನಿಗಳು ಸಿಎಸ್‌ಕೆ ನಾಯಕ ಎಂಎಸ್ ಧೋನಿ ಮತ್ತು ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ವೇದಿಕೆಗೆ ಆಕರ್ಷಕವಾಗಿ ಆಹ್ವಾನಿಸಲಾಯಿತು. ಕ್ರೀಡಾಂಗಣ ಕಿಕ್ಕಿರಿದ ಅಭಿಮಾನಿಗಳಿಂದ ತುಂಬಿತ್ತು. ಇಬ್ಬರನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ್ ಸಿಂಗ್ ಧುಮಾಲ್ ಅಭಿನಂದಿಸಿದರು. ಹಾರ್ದಿಕ್ ಕೈಯಲ್ಲಿ ಟ್ರೋಫಿ ಹಿಡಿದು ಬಂದರು.

ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ತಂಡ ಇಂತಿದೆ

Advertisement

ಗುಜರಾತ್ ಟೈಟಾನ್ಸ್
ಎಸ್ ಗಿಲ್, ಸಹಾ (ವಿಕೆ), ಕೆ ವಿಲಿಯಮ್ಸನ್, ಪಾಂಡ್ಯ (ಸಿ), ವಿ. ಶಂಕರ್, ಆರ್. ತೆವಾಟಿಯಾ, ರಶೀದ್ ಖಾನ್, ಎಂ. ಶಮಿ, ಜೆ.ಲಿಟಲ್, ವೈ ದಯಾಳ್, ಎ. ಜೋಸೆಫ್.

ಸಿಎಸ್ ಕೆ
ಆರ್ ಗಾಯಕ್ವಾಡ್, ಡಿ ಕಾನ್ವೇ, ಬಿ ಸ್ಟೋಕ್ಸ್, ಅಂಬಟಿ ರಾಯುಡು, ಎಂ ಅಲಿ, ಆರ್ ಜಡೇಜಾ, ಎಂ ಧೋನಿ (ನಾಯಕ, ವಿಕೀ), ಎಸ್ ದುಬೆ, ದೀಪಕ್ ಚಾಹರ್, ಎಂ ಸ್ಯಾಂಟ್ನರ್, ಆರ್ ಹಂಗರ್ಗೇಕರ್.

Advertisement

Udayavani is now on Telegram. Click here to join our channel and stay updated with the latest news.

Next