ಮುಂಬಯಿ: ಈ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ಪರ ಪದಾರ್ಪಣೆಗೈದ ಸುಯಶ್ ಪ್ರಭುದೇಸಾಯಿ ಅವರು ಆಲ್‌ರೌಂಡ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ಹರ್ಷಲ್ ಪಟೇಲ್ ಅವರ ಜಾಗದಲ್ಲಿ ತಂಡದಲ್ಲಿ ಸ್ಥಾನ ಪಡೆದ ಪ್ರಭುದೇಸಾಯಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿದರು.
ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ಪರ ಶಕ್ತಿ ಶಾಲಿ ಹೊಡೆತಗಳಿಂದ ಗಮನ ಸೆಳೆದಿದ್ದ ಪ್ರಭುದೇಸಾಯಿ ಅವರು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೇವಲ 18 ಎಸೆತಗಳಿಂದ 34 ರನ ಗಳಿಸಿದ್ದರು. ಒಂದು ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿದ್ದರು. ಆದರೆ ಇತರ ಆಟಗಾರರ ಕಳಪೆ ಆಟದಿಂದಾಗಿ ಆರ್‌ಸಿಬಿ ಅಂತಿಮವಾಗಿ ಈ ಪಂದ್ಯದಲ್ಲಿ ಸೋತಿತ್ತು. ಪ್ರಭುದೇಸಾಯಿ ಫೀಲ್ಡಿಂಗ್‌ನಲ್ಲೂ ಉತ್ತಮ ನಿರ್ವಹಣೆ ನೀಡಿದರು.
ಬೌಂಡರಿ ಗೆರೆ ಸಮೀಪ ಹಾರಿ ಚೆಂಡನ್ನು ಪಡೆದ ರೀತಿ ಅದ್ಭುತವಾಗಿತ್ತು. ಇದರ ಜತೆ ಮೋಯಿನ್ ಖಾನ್ ಅವರನ್ನು ರನೌಟ್ ಮಾಡಿದ ರೀತಿ ನೆರೆದ ಪ್ರೇಕ್ಷಕರ ಗಮನ ಸೆಳೆದಿತ್ತು.7ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ ಚೆಂಡನ್ನು ರಾಬಿನ್ ಉತ್ತಪ್ಪ ಉತ್ತರಿಸಿದರು. ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಪ್ರಭುದೇಸಾಯಿ ಫೀಲ್ಡಿಂಗ್ ಮಾಡುತ್ತಿದ್ದರು. ಚೆಂಡನ್ನು ಹಾರಿ ಹಿಡಿದ ಪ್ರಭುದೇಸಾಯಿ ಎದುರಾಳಿಗೆ ಒಂಟಿ ರನ್ ನಿರಾಕರಿಸಿದರು. ಮಾತ್ರವಲ್ಲದೇ ತತ್‌ಕ್ಷಣ ಅವರು ಚೆಂಡನ್ನು ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ನೀಡಿದ್ದರಿಂದ ಮೋಯಿನ್ ಖಾನ್ ರನೌಟ್ ಆಗಬೇಕಾಯಿತು.