Advertisement
ಈ ಬಾರಿ ಫಾ ಡು ಪ್ಲೆಸಿಸ್ ನೇತೃತ್ವದಲ್ಲಿ ಕಣಕ್ಕಿಳಿದಿರುವ ಆರ್‌ಸಿಬಿ ಕೆಲವು ವೈಯಕ್ತಿಕ ಪ್ರದರ್ಶನದ ಹಿನ್ನಡೆಯ ಹೊರತಾಗಿಯೂ ಏಳರಲ್ಲಿ 5 ಪಂದ್ಯ ಗೆದ್ದು ಹೊಸ ಭರವಸೆ ಮೂಡಿಸಿದೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿದೆ.
ಮೇಲ್ನೋಟಕ್ಕೆ ಎರಡೂ ತಂಡಗಳು ಸಮಬಲವಾಗಿ ಗೋಚರಿಸುತ್ತಿವೆ. ಇತ್ತಂಡಗಳಲ್ಲೂ ಉತ್ತಮ ದರ್ಜೆಯ ಬ್ಯಾಟರ್, ಬಿಗ್ ಹಿಟ್ಟರ್, ಬೌಲರ್ ಇದ್ದಾರೆ. ಸೂಕ್ಷ್ಮವಾಗಿ ಅವಲೋಕಿಸಿದಾಗ ಹೈದರಾಬಾದ್ ಬೌಲಿಂಗ್ ಹೆಚ್ಚು ಘಾತಕ ಹಾಗೂ ವೈವಿಧ್ಯಮಯವಾಗಿ ಕಂಡುಬರುತ್ತದೆ. ಹೀಗಾಗಿ ಈ ಪಂದ್ಯವನ್ನು ಕ್ರಿಕೆಟ್ ಪಂಡಿತರು ದಿನೇಶ್ ಕಾರ್ತಿಕ್ ವರ್ಸಸ್ ಉಮ್ರಾನ್ ಮಲಿಕ್ ನಡುವಿನ ಹೋರಾಟವೆಂದು ವಿಶ್ಲೇಷಿಸುತ್ತಿದ್ದಾರೆ.
Related Articles
Advertisement
ಫಾರ್ಮ್ ಕಂಡುಕೊಂಡ ಡು ಪ್ಲೆಸಿಸ್ಆದರೆ ಆರ್‌ಸಿಬಿ ನಾಯಕ ಫಾ ಡು ಪ್ಲೆಸಿಸ್ ಮರಳಿ ಫಾರ್ಮ್ ಕಂಡುಕೊಂಡಿರುವುದು, ದಿನೇಶ್ ಕಾರ್ತಿಕ್ ಪ್ರಚಂಡ ಬ್ಯಾಟಿಂಗ್ ಲಯದದಲ್ಲಿರುವುದು ಹೈದರಾಬಾದ್‌ಗೆ ತಲೆನೋವಾಗಿ ಪರಿಣಮಿಸುವುದು ಖಂಡಿತ. ಜತೆಗೆ ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಬಾಜ್ ಅಹ್ಮದ್ ಕೂಡ ಹೊಸ ಜೋಶ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರ ಸತತ ವೈಫಲ್ಯ ಮತ್ತು ಎಡಗೈ ಆರಂಭಕಾರ ಅನುಜ್ ರಾವತ್ ಅವರ ಅಸ್ಥಿರ ಪ್ರದರ್ಶನವಷ್ಟೇ ಚಿಂತೆಯ ಸಂಗತಿಯಾಗಿದೆ. ಮುಂಬೈ ವಿರುದ್ಧ ಸಿಡಿದು ನಿಂತು 66 ರನ್ ಬಾರಿಸಿದ ಬಳಿಕ ರಾವತ್ ಬ್ಯಾಟ್ ಏಕೋ ಮುಷ್ಕರ ಹೂಡಲಾರಂಭಿಸಿದೆ. ಆರ್‌ಸಿಬಿ ಬೌಲಿಂಗ್ ವಿಭಾಗಕ್ಕೆ ಕಾಂಗರೂ ವೇಗಿ ಜೋಶ್ ಹ್ಯಾಝಲ್‌ವುಡ್ ಹೊಸ ಜೋಶ್ ತುಂಬಿದ್ದಾರೆ. ಎದುರಾಳಿ ಬ್ಯಾಟರ್‌ಗಳಿಗೆ ಘಾತಕವಾಗಿ ಪರಿಣಮಿಸಿದ್ದಾರೆ. ಜತೆಗೆ ಹರ್ಷಲ್ ಪಟೇಲ್, ವನಿಂದು ಹಸರಂಗ, ಶಬಾಜ್ ಪಾತ್ರವೂ ನಿರ್ಣಾಯಕವಾಗಲಿದೆ. ಹೈದರಾಬಾದ್ ಬ್ಯಾಟಿಂಗ್ ಲೈನ್‌ಅಪ್ ಉತ್ತಮ ಮಟ್ಟದಲ್ಲಿದೆ. ಅಭಿಷೇಕ್ ಶರ್ಮ, ನಾಯಕ ವಿಲಿಯಮ್ಸನ್, ರಾಹುಲ್ ತ್ರಿಪಾಠಿ, ಐಡನ್ ಮಾರ್ಕ್‌ರಮ್, ನಿಕೋಲಸ್ ಪೂರಣ್… ಎಲ್ಲರೂ ಮ್ಯಾಚ್ ವಿನ್ನರ್‌ಗಳೇ ಆಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 151ಕ್ಕೆ ಹಿಡಿದು ನಿಲ್ಲಿಸಿದ್ದ ಹೈದರಾಬಾದ್ 7 ವಿಕೆಟ್‌ಗಳ ಜಯ ಸಾಧಿಸಿತ್ತು. ಹಾಗೆಯೇ ಆರ್‌ಸಿಬಿ 18 ರನ್ನುಗಳಿಂದ ಲಕ್ನೋಗೆ ಸೋಲುಣಿಸಿತ್ತು. ರವಿವಾರ ರಾತ್ರಿಯ ಮುಖಾಮುಖೀಯಲ್ಲಿ ಬೌಲಿಂಗ್‌ನಲ್ಲಿ ಮೇಲುಗೈ ಸಾಧಿಸುವವರಿಗೆ ಗೆಲುವಿನ ಸಾಧ್ಯತೆ ಹೆಚ್ಚು ಎನ್ನಲಡ್ಡಿಯಿಲ್ಲ.