Advertisement

ಸೋಲಿನ ಸುಳಿಯಲ್ಲಿರುವ ಮುಂಬೈಗೆ ಲಕ್ನೋ ಸವಾಲು; ಎರಡೂ ತಂಡದಲ್ಲೂ ಬದಲಾವಣೆ

03:06 PM Apr 16, 2022 | Team Udayavani |

ಮುಂಬೈ: ಸತತ ಸೋಲಿನ ಸುಳಿಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಎದುರಾಗಿದೆ. ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂದಿನ ಮೊದಲ ಪಂದ್ಯದಲ್ಲಿ ರೋಹಿತ್ ಮತ್ತು ರಾಹುಲ್ ಪಡೆಗಳು ಮುಖಾಮುಖಿಯಾಗುತ್ತಿದೆ.

Advertisement

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಾಸಿಲ್ ಥಂಪಿ ಬದಲು ಫ್ಯಾಬಿಯನ್ ಅಲೆನ್ ಸ್ಥಾನ ಪಡೆದಿದ್ದಾರೆ. ಲಕ್ನೋ ತಂಡದಲ್ಲೂ ಒಂದು ಬದಲಾವಣೆ ಮಾಡಿದ್ದು, ಕೃಷ್ಣಪ್ಪ ಗೌತಮ್ ಬದಲಿಗೆ ಮನೀಷ್ ಪಾಂಡೆ ಮರಳಿ ಸ್ಥಾನ ಪಡೆದಿದ್ದಾರೆ.

ಆಡಿರುವ ಐದೂ ಪಂದ್ಯಗಳಲ್ಲಿ ಸೋಲನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡ ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮತ್ತೊಂದಡೆ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದಿರುವ ಲಕ್ನೋ ತಂಡ ಕಳೆದ ಪಂದ್ಯದಲ್ಲಿ ಸೋಲನುಭವಿಸಿತ್ತು. ಇಂದು ರೋಹಿತ್ ಪಡೆಯ ಎದುರು ಗೆದ್ದು ಮತ್ತೆ ಗೆಲುವಿನ ಹಳಿಯೇರುವ ಯೋಜನೆಯಲ್ಲಿದೆ ಕೆ.ಎಲ್ ಪಡೆ.

ತಂಡಗಳು

ಲಕ್ನೋ: ಕೆಎಲ್ ರಾಹುಲ್ (ನಾ), ಕ್ವಿಂಟನ್ ಡಿ ಕಾಕ್ (ವಿ.ಕೀ), ಮನೀಷ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್.

Advertisement

ಮುಂಬೈ: ರೋಹಿತ್ ಶರ್ಮಾ(ನಾ), ಇಶಾನ್ ಕಿಶನ್ (ವಿ.ಕೀ), ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್, ಫ್ಯಾಬಿಯನ್ ಅಲೆನ್, ಜಯದೇವ್ ಉನಾದ್ಕತ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್.

Advertisement

Udayavani is now on Telegram. Click here to join our channel and stay updated with the latest news.

Next