ಹೊಸದಿಲ್ಲಿ: ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡ ಐಪಿಎಲ್ ಜಾಹೀರಾತೊಂದನ್ನು ಪ್ರಸಾರ ಮಾಡದಂತೆ ಅಡ್ವಟೈìಸಿಂಗ್ ಸ್ಟಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ಎಎಸ್‌ಸಿಐ) ಸೂಚಿಸಿದೆ. ಇದರಲ್ಲಿ ಸಾರಿಗೆ ಹಾಗೂ ಸಂಚಾರ ನಿಯಮ ಉಲ್ಲಂಘನೆಯಾಗಿರುವುದೇ ಕಾರಣ.
ರಸ್ತೆ ಸುರಕ್ಷತ ಸಂಸ್ಥೆ ಈ ಕುರಿತು ಎಎಸ್‌ಸಿಐಗೆ ದೂರು ಸಲ್ಲಿಸಿತ್ತು ಹೀಗಾಗಿ ಕೂಡಲೇ ಈ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಿದೆ.
ಈ ಜಾಹೀರಾತಿನಲ್ಲಿ ಧೋನಿ ಬಸ್ ಚಾಲಕ ನಾಗಿದ್ದಾರೆ. ಅವರು ರಸ್ತೆಯ ನಡುವೇ ಬಸ್ ನಿಲ್ಲಿಸಿದ ದೃಶ್ಯ ಕಂಡುಬರುತ್ತದೆ. ಆಗ ಟ್ರಾಫಿಕ್ ಪೊಲೀಸ್ ಒಬ್ಬರು ಬಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಧೋನಿ, ತಾನು ಐಪಿಎಲ್ ಸೂಪರ್ ಓವರ್ ವೀಕ್ಷಿಸುತ್ತಿದ್ದೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಟ್ರಾಫಿಕ್ ಪೊಲೀಸ್ ಅಲ್ಲಿಂದ ತೆರಳುತ್ತಾರೆ. ಇದನ್ನು ಪ್ರಸ್ತಾವಿಸಿ ರಸ್ತೆ ಸುರಕ್ಷ ಸಂಸ್ಥೆ, ಗ್ರಾಹಕರ ಏಕತೆ ಹಾಗೂ ಟ್ರಸ್ಟ್ ಸೊಸೈಟಿ ಕೂಡ ದೂರು ದಾಖಲಿಸಿವೆ. ಜಾಹೀರಾತಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಆಗಿರುವುದನ್ನು ಎಎಸ್‌ಸಿಐ ಒಪ್ಪಿಕೊಂಡಿದೆ. ಹೀಗಾಗಿ ಎ. 20ರ ಒಳಗೆ ಈ ಜಾಹೀರಾತನ್ನು ತೆಗೆದುಹಾಕುವಂತೆ ಅಥವಾ ಪರಿಷ್ಕೃತ ರೂಪದಲ್ಲಿ ಪ್ರಸಾರ ಮಾಡುವಂತೆ ಸ್ಟಾರ್ ನ್ಪೋರ್ಟ್ಸ್ಗೆ ತಿಳಿಸಲಾಗಿದೆ.