Advertisement

ಸ್ಮಿತ್‌ ಔಟ್‌; ಸ್ಯಾಮ್ಸನ್‌ ರಾಜಸ್ಥಾನ್‌ ನಾಯಕ

01:46 AM Jan 21, 2021 | Team Udayavani |

ಹೊಸದಿಲ್ಲಿ: ಹದಿನಾಲ್ಕನೇ ಐಪಿಎಲ್‌ಗಾಗಿ ಆಟಗಾರರನ್ನು ಉಳಿಸಿಕೊಳ್ಳುವ ಹಾಗೂ ಕೈಬಿಡುವ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಬುಧವಾರದ ಮಹತ್ವದ ಬೆಳವಣಿಗೆಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ನಾಯಕ, ಆಸ್ಟ್ರೇಲಿಯನ್‌ ಕ್ರಿಕೆಟಿಗ ಸ್ಟೀವನ್‌ ಸ್ಮಿತ್‌ ಅವರ ಒಪ್ಪಂದವನ್ನು ನವೀಕರಿಸದಿರಲು ನಿರ್ಧರಿಸಲಾಗಿದೆ. ಸಂಜು ಸ್ಯಾಮ್ಸನ್‌ ಅವರನ್ನು ನೂತನ ನಾಯಕನನ್ನಾಗಿ ನೇಮಿಸಲಾಗಿದೆ.

Advertisement

ಇದೇ ವೇಳೆ ಹರ್ಭಜನ್‌ ಸಿಂಗ್‌ ಚೆನ್ನೈ ತಂಡದಿಂದ ತಾವಾಗಿಯೇ ದೂರ ಸರಿಯಲು ನಿರ್ಧರಿಸಿದ್ದಾರೆ. ಆದರೆ ಕಳೆದ ಐಪಿಎಲ್‌ ವೇಳೆ ಕೊನೆಯ ಹಂತದಲ್ಲಿ ದೂರ ಉಳಿದ ಸುರೇಶ್‌ ರೈನಾ ತಂಡದಲ್ಲಿ ಉಳಿದುಕೊಂಡಿದ್ದಾರೆ.

“ತಂಡಕ್ಕೆ ಭಾರತದವರದೇ ಆದ ಬಲಿಷ್ಠ ನಾಯಕತ್ವ ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ. ಸ್ಯಾಮ್ಸನ್‌ ಕಳೆದ 8 ವರ್ಷ ಗಳಿಂದ ನಮ್ಮ ತಂಡವನ್ನು ಪ್ರತಿನಿಧಿಸುತ್ತಿದ್ದು, ಉತ್ತಮ ಪ್ರಗತಿ ಸಾಧಿಸಿದ್ದಾರೆ. ಹೀಗಾಗಿ ಅವರೇ ನಾಯಕತ್ವಕ್ಕೆ ಸೂಕ್ತ ಎನಿಸಿತು’ ಎಂಬುದಾಗಿ ರಾಜಸ್ಥಾನ್‌ ಫ್ರಾಂಚೈಸಿ ಮಾಲಕ ಮನೋಜ್‌ ಬದಾಲೆ ಹೇಳಿದ್ದಾರೆ. ಸ್ಮಿತ್‌ ಅವರ ಒಪ್ಪಂದ ಅಕ್ಟೋಬರ್‌ 2020ಕ್ಕೆ ಕೊನೆಗೊಂಡಿತ್ತು. ಕಳೆದ ಸಲ ಸ್ಮಿತ್‌ ನಾಯಕತ್ವದ ರಾಜಸ್ಥಾನ್‌ ಕೊನೆಯ ಸ್ಥಾನಕ್ಕೆ ಕುಸಿದಿತ್ತು.

ಫಿಂಚ್‌, ಉಮೇಶ್‌ ರಿಲೀಸ್‌ :

ಆಸ್ಟ್ರೇಲಿಯದ ಮತ್ತಿಬ್ಬರು ಕ್ರಿಕೆಟಿಗರಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಆರನ್‌ ಫಿಂಚ್‌ ಅವರನ್ನು ಕ್ರಮವಾಗಿ ಪಂಜಾಬ್‌ ಹಾಗೂ ಆರ್‌ಸಿಬಿ ತಂಡದಿಂದ ಬಿಡುಗಡೆ ಮಾಡಲಾಗಿದೆ. ಆರ್‌ಸಿಬಿಯಿಂದ ಉಮೇಶ್‌ ಯಾದವ್‌, ಪಾರ್ಥಿವ್‌ ಪಟೇಲ್‌, ಡೇಲ್‌ ಸ್ಟೇನ್‌, ಮೊಯಿನ್‌ ಅಲಿ, ಕ್ರಿಸ್‌ ಮಾರಿಸ್‌ ಅವರನ್ನೂ ಬಿಟ್ಟುಕೊಡಲಾಗಿದೆ.

Advertisement

ಪಂಜಾಬ್‌ ತಂಡದಿಂದ ಬೇರ್ಪಟ್ಟ ಇತರ ಪ್ರಮುಖರೆಂದರೆ ವೇಗಿ ಶೆಲ್ಡನ್‌ ಕಾಟ್ರೆಲ್‌, ಮುಜೀಬ್‌ ಉರ್‌ ರೆಹಮಾನ್‌ ಮತ್ತು ಜಿಮ್ಮಿ ನೀಶಮ್‌. ಇವರಲ್ಲಿ ನೀಶಮ್‌ ಕೈಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದಾರೆ.

ಮಾಲಿಂಗ, ರಾಯ್‌, ಕ್ಯಾರಿ ಇಲ್ಲ :

ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಯಶಸ್ವಿ ಬೌಲರ್‌ ಲಸಿತ ಮಾಲಿಂಗ ಮತ್ತು ಶಫೇìನ್‌ ರುದರ್‌ಫೋರ್ಡ್‌ ಅವರನ್ನು ಕೈಬಿಟ್ಟಿದೆ. ಮಾಲಿಂಗ ಕಳೆದ ಸಲ ವೈಯಕ್ತಿಕ ಕಾರಣದಿಂದ ಚಾಂಪಿಯನ್‌ ಮುಂಬೈ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ.

ಬಿಡುಗಡೆಗೊಂಡ ಕ್ರಿಕೆಟಿಗರು :

ಪಂಜಾಬ್‌: ಮ್ಯಾಕ್ಸ್‌ವೆಲ್‌, ಕಾಟ್ರೆಲ್‌, ಕೆ. ಗೌತಮ್‌, ಕರುಣ್‌ ನಾಯರ್‌, ಜೆ. ಸುಚಿತ್‌, ರೆಹಮಾನ್‌, ನೀಶಮ್‌, ವಿಲ್‌ಜೊàನ್‌, ತೇಜಿಂದರ್‌ ಸಿಂಗ್‌.

ಉಳಿದ ಮೊತ್ತ : 53.2 ಕೋ.ರೂ.

ಮುಂಬೈ: ಮಾಲಿಂಗ, ಕೋಲ್ಟರ್‌ ನೈಲ್‌, ಪ್ಯಾಟಿನ್ಸನ್‌, ರುದರ್‌ಫೋರ್ಡ್‌, ದಿಗ್ವಿಜಯ್‌ ಸಿಂಗ್‌, ಮೆಕ್ಲೆನಗನ್‌, ಬಲವಂತ ರೈ.

ಉಳಿದ ಮೊತ್ತ :15.35 ಕೋ.ರೂ.

ಚೆನ್ನೈ: ಕೇದಾರ್‌ ಜಾಧವ್‌, ಚಾವ್ಲಾ, ಮುರಳಿ ವಿಜಯ್‌, ವಾಟ್ಸನ್‌, ಹರ್ಭಜನ್‌, ಮೋನು ಕುಮಾರ್‌.

ಉಳಿದ ಮೊತ್ತ : 22.9ಕೋ.ರೂ.

ಆರ್‌ಸಿಬಿ: ಫಿಂಚ್‌, ಉಮೇಶ್‌, ಉದಾನ, ಶಿವಂ ದುಬೆ, ಸ್ಟೇನ್‌, ಮೊಯಿನ್‌ ಅಲಿ, ಪಾರ್ಥಿವ್‌ , ಮಾರಿಸ್‌, ನೇಗಿ, ಗುರುಕೀರತ್‌ ಸಿಂಗ್‌.

ಉಳಿದ ಮೊತ್ತ : 35.7 ಕೋ.ರೂ.

ಹೈದರಾಬಾದ್‌: ಫ್ಯಾಬಿಯನ್‌ ಅಲೆನ್‌, ಸಂಜಯ್‌ ಯಾದವ್‌, ಬಿ. ಸಂದೀಪ್‌, ವೈ. ಪೃಥ್ವಿರಾಜ್‌, ಬಿಲ್ಲಿ  ಸ್ಟಾನ್‌ಲೇಕ್‌.

ಉಳಿದ ಮೊತ್ತ :   10.75 ಕೋ.ರೂ.

ಡೆಲ್ಲಿ: ಮೋಹಿತ್‌ ಶರ್ಮ, ಸಂದೀಪ್‌ ಲಮಿಚಾನೆ, ಅಲೆಕ್ಸ್‌ ಕ್ಯಾರಿ, ಕಿಮೊ ಪೌಲ್‌, ಜಾಸನ್‌ ರಾಯ್‌, ತುಷಾರ್‌ ದೇಶಪಾಂಡೆ

ಉಳಿದ ಮೊತ್ತ :  12.8 ಕೋ.ರೂ.

ಕೆಕೆಆರ್‌: ಟಾಮ್‌ ಬ್ಯಾಂಟನ್‌, ಕ್ರಿಸ್‌ ಗ್ರೀನ್‌, ಸಿದ್ದೇಶ್‌ ಲಾಡ್‌, ನಿಖೀಲ್‌ ನಾಯ್ಕ,  ಎಂ. ಸಿದ್ಧಾರ್ಥ್.

ಉಳಿದ ಮೊತ್ತ : 19.85ಕೋ.ರೂ.

ರಾಜಸ್ಥಾನ್‌: ಸ್ಟೀವನ್‌ ಸ್ಮಿತ್‌.ಅಂಕಿತ್‌ ರಜಪೂತ್‌, ಒಶಾನೆ ಥಾಮ್ಸನ್‌, ಆಕಾಶ್‌ ಸಿಂಗ್‌, ವರುಣ್‌ ಆರಾನ್‌, ಟಾಮ್‌ ಕರನ್‌, ಜೋಶಿ, ಶಶಾಂಕ್‌.

ಉಳಿದ ಮೊತ್ತ : 34.85 ಕೋ.ರೂ.

Advertisement

Udayavani is now on Telegram. Click here to join our channel and stay updated with the latest news.

Next