Advertisement

ವಿದೇಶಿ ಆಟಗಾರರ ಅನುಪಸ್ಥಿತಿ ಇದ್ದರೂ ಐಪಿಎಲ್ ನ ಉಳಿದ ಪಂದ್ಯಗಳು ನಡೆಯುತ್ತವೆ : ಶುಕ್ಲಾ

07:55 PM May 31, 2021 | Team Udayavani |

ನವ ದೆಹಲಿ : ಕೋವಿಡ್ ಸೋಂಕಿನ ಎರಡನೇ ಅಲೆಯ ಹಠಾತ್ ಏರಿಕೆಯ ಕಾರಣದಿಂದಾಗಿ ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ನ ಉಳಿದ ಪಂದ್ಯಗಳು ವಿದೇಶಿ ಆಟಗಾರರ ಅಲಭ್ಯತೆಯಿದ್ದರೂ ನಡೆದೇ ನಡೆಯುತ್ತದೆ ಎಂದು ಬಿಸಿಸಿಐನ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.

Advertisement

ಐಪಿಎಲ್ 2021 ನ ಉಳಿದ ಪಂದ್ಯಗಳು ಬರುವ ಸೆಪ್ಟೆಂಬರ್-ಅಕ್ಟೋಬರ್ ನಡುವೆ ಯುಎಇಯಲ್ಲಿ ನಡೆಸಲಾಗುತ್ತದೆ ಎಂದು ಕ್ರಿಕೆಟ್ ಮಂಡಳಿ ಈಗಾಗಲೇ ನಿರ್ಧರಿಸಿದೆ. ಅಧಿಕೃತ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಕಳೆದ ವರ್ಷ ಯುಎಇ ನಲ್ಲಿ ಅತ್ಯಂತ ಸುರಕ್ಷಿತ ಸುರಕ್ಷಿತ ಬಯೋ ಬಬಲ್ಸ್ ಅಥವಾ ಜೈವಿಕ ಗುಳ್ಳೆಯೊಂದಿಗೆ ಯಶಸ್ವಿ ಐಪಿಎಲ್ ನನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು  44473 ಜನ ಗುಣಮುಖ; 16604 ಹೊಸ ಪ್ರಕರಣ ಪತ್ತೆ

ಸ್ಟೀವ್ ಸ್ಮಿತ್, ಪ್ಯಾಟ್ ಕಮ್ಮಿನ್ಸ್, ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಒಳಗೊಂಡು ಕೆಲವು ಆಟಗಾರರು ಅಂತಾರಾಷ್ಟ್ರೀಯ ಸರಣಿಗಳು ಇರುವ ಕಾರಣದಿಂದ ಐಪಿಎಲ್ ನ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯತೆ ಇಲ್ಲ ಎಂಬ ಸುದ್ದಿಗಖು ಬಂದ ಬೆನ್ನಿಗೆ  ಎಂದು ಬಿಸಿಸಿಐನ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಹೇಳಿಕೆ ನೀಡಿದ್ದಾರೆ.

ಖಲೀಜ್ ಟೈಮ್ಸ್ ಗೆ ಪ್ರತಿಕ್ರಿಯಿಸಿದ ಶುಕ್ಲಾ, “ನಾವು ವಿದೇಶಿ ಆಟಗಾರರ ಸಮಸ್ಯೆಯನ್ನು ಚರ್ಚಿಸಿದ್ದೇವೆ. ಐಪಿಎಲ್‌ ನ 2021ರ ಆವೃತ್ತಿಯನ್ನು ಪೂರ್ಣಗೊಳಿಸುವುದರ ಮೇಲೆ ನಮ್ಮ ಮುಖ್ಯ ಗಮನವಿದೆ. ಅದನ್ನು ಅರ್ಧದಾರಿಯಲ್ಲೇ ಬಿಡಬಾರದು. ಎಲ್ಲಾ ಆಟಗಾರರ ಲಭ್ಯತೆಯನ್ನು ನಾವು ಭಯಸುತ್ತೇವೆ ಆದರೇ, ಅವರ ಅನುಪಸ್ಥಿತಿ ಇದ್ದರೂ ಐಪಿಎಲ್ ನ ಉಳಿದ ಪಂದ್ಯಗಳು ನಡೆದೇ ನಡೆಯುತ್ತವೆ ಎಂದು ಹೇಳಿದ್ದಾರೆ.

Advertisement

ಭಾರತೀಯ ಆಟಗಾರರು ಇದ್ದಾರೆ, ಕೆಲವು ವಿದೇಶಿ ಆಟಗಾರರ ಅನುಪಸ್ಥಿತಿ ಸಾಧ್ಯತೆ ಇರಬಹದು. ಐಪಿಲ್ ನ ಈ ಆವೃತ್ತಿ ಪೂರ್ಣಗೊಳ್ಳುತ್ತದೆ.  ವಿದೇಶಿ ಆಟಗಾರರ ಅಲಭ್ಯತೆ ಇದ್ದರೇ, ಫ್ರಾಂಚೈಸಿಗಳು ಬದಲಿ ಆಟಗಾರರನ್ನು ನೋಡಬಹುದು ಎಂದು ಅವರು ತಿಳಿಸಿದ್ದಾರೆ.

ವಿದೇಶಿ ಆಟಗಾರರ ಅಲಭ್ಯತೆ ಇದ್ದರೇ ಪ್ರಾಂಚೈಸಿಗಳು ಖಂಡಿತವಾಗಿಯೂ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಐಪಿಎಲ್ ನ ಉಳಿದ ಪಂದ್ಯಗಳು ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಕ್ರಿಕೆಟ್ ಮಂಡಳಿ ನಿರ್ಧರಿಸಿದಂತೆಯೇ ಪಂದ್ಯ ನಡೆಯುತ್ತದೆ.

ಬಿಸಿಸಿಐ ಸದಸ್ಯರು ಯುಎಇಗೆ ಬಂದಾಗ ಶೀಘ್ರದಲ್ಲೇ ವೇಳಾಪಟ್ಟಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. “ನಾನು ಈಗಾಗಲೇ ಯುಎಇ ಅಲ್ಲಿದ್ದೇನೆ. ಬಿಸಿಸಿಐ ಪದಾಧಿಕಾರಿಗಳು, ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೇ ಶಾ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹಾಗೂ ಅವರ ತಂಡ ಒಂದೆರಡು ದಿನಗಳಲ್ಲಿ ಇಲ್ಲಿಗೆ ಬರಲಿದ್ದಾರೆ ಎಂದು ಅವರು ಹೇಳಿದ್ದಾರೆ.

ನಾವು ಇಲ್ಲಿ ಕ್ರಿಕೆಟ್ ಮಂಡಳಿ ಮತ್ತು ಇತರ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದೇವೆ. ಮತ್ತು ಅದರ ಪ್ರಕಾರ, ವೇಳಾಪಟ್ಟಿಯನ್ನು ಮಾಡಲಾಗುವುದು, ಆದ್ದರಿಂದ ಪಂದ್ಯಾವಳಿ ಕಳೆದ ವರ್ಷ ಇಲ್ಲಿ ನಡೆದಂತೆ ಅತ್ಯಂತ ಸುಗಮವಾಗಿ ನಡೆಯುತ್ತದೆ.

ಏನೇ ಇರಲಿ, ಭಾರತೀಯ ಕೋವಿಡ್ ನ ಮಾರ್ಗಸೂಚಿಗಳು ಮತ್ತು ಯುಎಇ ಮಾರ್ಗಸೂಚಿಗಳು ಅನುಸರಿಸಿ ಉಳಿದ ಪಂದ್ಯಗಳನ್ನು ಆಯೋಜಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಜೂನ್ ಅಂತ್ಯದ ವರೆಗೆ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿ ಮೇಲೆ ಶೇ.5 ವಿನಾಯಿತಿ

Advertisement

Udayavani is now on Telegram. Click here to join our channel and stay updated with the latest news.

Next