Advertisement
ಭಾನುವಾರದಿಂದ ಅ.15ರ ತನಕ ದುಬೈ, ಶಾರ್ಜಾ, ಅಬುಧಾಬಿಯಲ್ಲಿ ಉಳಿದ 31 ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್ ಪ್ರೇಮಿಗಳು ಮತ್ತೂಂದು ಕಂತಿನ ರೋಮಾಂಚನವನ್ನು ಅನುಭವಿಸುವ ಸಂಭ್ರಮದಲ್ಲಿದ್ದಾರೆ.
Related Articles
Advertisement
ಕೆಲವು ಸ್ಟಾರ್ ವಿದೇಶಿ ಆಟಗಾರರು ಹಿಂದೆ ಸರಿದರೂ ಕೂಟದ ಆಕರ್ಷಣೆಯೇನೂ ಕಡಿಮೆ ಆಗದೆಂಬುದೊಂದು ಲೆಕ್ಕಾಚಾರ. ಡೇವಿಡ್ ಮಲಾನ್, ಕ್ರಿಸ್ ವೋಕ್ಸ್, ಜಾನಿ ಬೇರ್‌ಸ್ಟೊ, ಜಾಸ್ ಬಟ್ಲರ್, ಜೋಫ್ರ ಆರ್ಚರ್, ರಿಲೀ ಮೆರೆಡಿತ್, ಜೇ ರಿಚರ್ಡ್‌ಸನ್, ಪ್ಯಾಟ್ ಕಮಿನ್ಸ್ ಮೊದಲಾದ ವಿದೇಶಿ ಆಟಗಾರರು ಯುಎಇಗೆ ಆಗಮಿಸುತ್ತಿಲ್ಲ.
ಪ್ರೇಕ್ಷಕರಿಗೆ ಅವಕಾಶ:
2019ರ ಬಳಿಕ ಪ್ರೇಕ್ಷಕರಿಗೆ ಬಾಗಿಲು ತೆರೆಯುವ ಕಾರಣಕ್ಕಾಗಿಯೂ ಯುಎಇ ಆವೃತ್ತಿಯ ಐಪಿಎಲ್ ಆಕರ್ಷಣೆ ಹೆಚ್ಚಿದೆ. ಸ್ಟೇಡಿಯಂ ಸಾಮರ್ಥ್ಯದ ಶೇ. 50 ವೀಕ್ಷಕರಿಗೆ ಅವಕಾಶ ಕಲ್ಪಿಸಲಾಗುವುದು. ಇವರು ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲೇ ಖರೀದಿಸಬೇಕೆಂದು ಸೂಚಿಸಲಾಗಿದೆ.
ವಿಭಿನ್ನ ಪಿಚ್‌ಗಳ ಸವಾಲು:
ಭಾರತದಲ್ಲಿ ನಡೆದ ಮೊದಲಾರ್ಧದ ಪಂದ್ಯಗಳ ವೇಳೆ ರನ್ ಪ್ರವಾಹ ಹರಿದು ಬಂದಿತ್ತಾದರೂ ಯುಎಇಯಲ್ಲಿ ದೊಡ್ಡ ಮೊತ್ತವನ್ನು ನಿರೀಕ್ಷಿಸುವಂತಿಲ್ಲ. ಇಲ್ಲಿನ ಪಿಚ್‌ಗಳು ತುಸು ನಿಧಾನವಾಗಿ ವರ್ತಿಸುವುದೇ ಇದಕ್ಕೆ ಕಾರಣ. ಆದರೆ ಶಾರ್ಜಾ ಸ್ಟೇಡಿಯಂ ಅಪವಾದವಾಗಬಹುದು. 2020ರ ಆವೃತ್ತಿಯ ವೇಳೆ ಇಲ್ಲಿ 200 ರನ್ನಿಗೇನೂ ಕೊರತೆ ಎದುರಾಗಿರಲಿಲ್ಲ. ಉಳಿದೆಡೆ ಬೌಲರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆ ಇದೆ.
ಅಗ್ರಸ್ಥಾನಲ್ಲಿ ಡೆಲ್ಲಿ ಕ್ಯಾಪಿಟಲ್ :
ಭಾರತದಲ್ಲಿ ಆಡಲಾದ 29 ಪಂದ್ಯಗಳಲ್ಲಿ 2020ರ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ 12 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಡಿದ 8 ಪಂದ್ಯಗಳಲ್ಲಿ ಆರನ್ನು ಗೆದ್ದಿದೆ.
ಚೆನ್ನೈ ಮತ್ತು ಆರ್‌ಸಿಬಿ ತಲಾ 10 ಅಂಕ ಗಳಿಸಿವೆ. ಆದರೆ ರನ್‌ರೇಟ್‌ನಲ್ಲಿ ಮುಂದಿರುವ ಧೋನಿ ಪಡೆ ದ್ವಿತೀಯ ಸ್ಥಾನದಲ್ಲಿದೆ. ಕೊಹ್ಲಿ ಟೀಮ್‌ಗೆ 3ನೇ ಸ್ಥಾನ. ಭಾನುವಾರದ ಮೊದಲ ಪಂದ್ಯವನ್ನು ಗೆದ್ದರೆ ಚೆನ್ನೈ ಅಗ್ರಸ್ಥಾನಕ್ಕೆ ನೆಗೆಯಲಿದೆ.