ಹೊಸದಿಲ್ಲಿ: ಇಂಗ್ಲೆಂಡ್ ಎದುರಿನ 3 ಪಂದ್ಯಗಳ ಏಕದಿನ ಸರಣಿ ಮುಗಿದ ಬಳಿಕ ಭಾರತದ ಕ್ರಿಕೆಟಿಗರಿಗೆ ಗರಿಷ್ಠ 4 ದಿನಗಳ ಬ್ರೇಕ್ ಲಭಿಸಲಿದೆ ಎಂದು ಬಿಸಿಸಿಐ ತಿಳಿಸಿದೆ.
ಬಳಿಕ ಎಪ್ರಿಲ್ ಎರಡರ ಒಳಗೆ ಆಟಗಾರರೆಲ್ಲ ತಮ್ಮ ಐಪಿಎಲ್ ಫ್ರಾಂಚೈಸಿಗಳನ್ನು ಕೂಡಿಕೊಳ್ಳಬೇಕು ಎಂದಿದೆ.
ಏಕದಿನ ಸರಣಿ ಮಾ. 28ರಂದು ಮುಗಿಯಲಿದೆ. ಆಗ ಟೀಮ್ ಇಂಡಿಯಾ ಆಟಗಾರರಿಗೆ 4 ದಿನಗಳ ಕಾಲ ಜೈವಿಕ ಸುರಕ್ಷಾ ವಲಯದಿಂದ ಹೊರಗುಳಿಸಲು ಅವಕಾಶ ಕಲ್ಪಿಸಲಾಗಿದೆ. ತಂಡದ ಬಹುತೇಕ ಆಟಗಾರರೆಲ್ಲ ಕಳೆದ ಆಗಸ್ಟ್‌ನಿಂದಲೇ ಬಯೋಬಬಲ್ ಏರಿಯಾದಲ್ಲಿ ದ್ದಾರೆಂಬುದು ಉಲ್ಲೇಖನೀಯ.
ಜೈವಿಕ ಸುರಕ್ಷಾ ವಲಯದಿಂದ ಹೊರಗೆ ಹೋಗಿ, ಮರಳಿ ಐಪಿಎಲ್ ಫ್ರಾಂಚೈಸಿಯನ್ನು ಸೇರಿಕೊಳ್ಳುವವರು 7 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ
ಒಳಗಾಗಬೇಕು ಎಂದೂ ಬಿಸಿಸಿಐ ಸೂಚಿಸಿದೆ. ಆದರೆ ನೇರವಾಗಿ ಜೈವಿಕ ಸುರಕ್ಷಾ ವಲಯದಿಂದ ಐಪಿಎಲ್ ಫ್ರಾಂಚೈಸಿ ಪ್ರವೇಶಿಸುವವರಿಗೆ ಕ್ವಾರಂಟೈನ್ ಅನ್ವಯಿಸುವುದಿಲ್ಲ.